ತೆಲುಗು ಇಂಡಸ್ಟ್ರಿಗೆ ಚೆನ್ನಾಗಿ ಗೊತ್ತು ನಮ್ಮ ಉಪೇಂದ್ರ ತಾಕತ್ತು

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ವಿಶೇಷ ಪಾತ್ರವೊಂದನ್ನ ಮಾಡಬೇಕಿತ್ತು. ಆದ್ರೆ, ರಾಜಕೀಯ, ಬೇರೆ ಸಿನಿಮಾಗಳ ಕಾರಣದಿಂದ ಉಪ್ಪಿ ಈ ಚಿತ್ರವನ್ನ ಒಪ್ಪಿಕೊಂಡಿಲ್ಲ.

ಕೇವಲ ಚಿರಂಜೀವಿ ಸಿನಿಮಾ ಮಾತ್ರವಲ್ಲ ಮಹೇಶ್ ಬಾಬು ಹಾಗೂ ಇನ್ನು ಕೆಲವು ಸ್ಟಾರ್ ನಟರ ಚಿತ್ರಗಳನ್ನ ಉಪ್ಪಿ ರಿಜೆಕ್ಟ್ ಮಾಡಿದ್ದಾರೆ. ಈಗ ವಿಷ್ಯ ಏನಪ್ಪಾ ಅಂದ್ರೆ, ಉಪೇಂದ್ರ ಅವರು ತೆಲುಗು ಮೆಗಾಸ್ಟಾರ್ ಗೆ ನಿರ್ದೇಶನ ಮಾಡಬೇಕಿತ್ತಂತೆ.

ಇಂತಹದೊಂದು ಸುದ್ದಿ ತುಂಬಾ ವರ್ಷಗಳಿಂದ ಇದೆ. ಆದ್ರೆ, ಆ ಚಿತ್ರದ ಆಗಲೇ ಇಲ್ಲ. ಇದಕ್ಕಾಗಿ ಉಪ್ಪಿ ಕಥೆ ಕೂಡ ಮಾಡಿದ್ದರಂತೆ. ಬಟ್, ಉಪ್ಪಿ ಹೇಳಿದ್ದ ಕಥೆ ಕೇಳಿ ತೆಲುಗು ಮಂದಿ ಆಗ ಶಾಕ್ ಆಗಿದ್ರಂತೆ ಎಂದು ತೆಲುಗು ವೈವಿಎಸ್ ಚೌಧರಿ ಹೇಳಿದ್ದಾರೆ. ಮುಂದೆ ಓದಿ.....

ಒತ್ತಾಯ ಮಾಡಿ ಕೇಳಿದ್ದರು

ಒತ್ತಾಯ ಮಾಡಿ ಕೇಳಿದ್ದರು

ಚಿರಂಜೀವಿ ಅವರಿಗೆ ನಿರ್ದೇಶನ ಮಾಡಿ ಎಂದು ವೈಜಯಂತಿ ಪ್ರೊಡಕ್ಷನ್ ಅವರು ಬಹಳ ಒತ್ತಾಯ ಮಾಡಿ ಉಪೇಂದ್ರ ಅವರನ್ನ ಒಪ್ಪಿಸಿದ್ದರಂತೆ. ಆಗಿನ ಸಮಯದಲ್ಲಿ ಉಪೇಂದ್ರ ತುಂಬಾ ಬ್ಯುಸಿ ಇದ್ದರೂ ಒತ್ತಾಯಕ್ಕೆ ಮಣಿದು ಸರಿ ಮಾಡೋಣ ಅಂತ ಹೇಳಿ ಕಥೆ ರೆಡಿ ಮಾಡಿದ್ರಂತೆ.

ಕಥೆ ಕೇಳಿದ ಎಲ್ಲರೂ ಶಾಕ್

ಕಥೆ ಕೇಳಿದ ಎಲ್ಲರೂ ಶಾಕ್

''ಅಲ್ಲಿಯವರೆಗೂ ಇದ್ದ ಕಥೆಗಳನ್ನ ಬಿಟ್ಟು ಬೇರೆಯದ್ದೇ ಕಥೆ ಮಾಡಿದ್ದರು. ಸಿನಿಮಾ ಹೀಗೆ ಇರುತ್ತೆ, ಹೀಗೆ ಇರಬೇಕು ಎಂಬ ಕಲ್ಪನೆಯನ್ನ ಬ್ರೇಕ್ ಮಾಡಿ ಕಥೆ ಮಾಡಿದ್ದರಂತೆ. ಈ ಕಥೆ ಕೇಳಿ ಹೀಗೂ ಸಿನಿಮಾ ಮಾಡಬಹುದಾ ಅಂತ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ರಂತೆ. ಅಲ್ಲಿಯವರೆಗಿದ್ದ ಕಮರ್ಷಿಯಲ್ ಟ್ರೆಂಡ್ ಮುರಿದು ಹಾಕುವಂತ ಸಿನಿಮಾ ಅದು''

ವಿಚಿತ್ರ, ಊಹಿಸಲೇ ಸಾಧ್ಯವಾಗದ ಕಥೆ

ವಿಚಿತ್ರ, ಊಹಿಸಲೇ ಸಾಧ್ಯವಾಗದ ಕಥೆ

''ದ್ವಿಪಾತ್ರದ ಕಥೆ ಮಾಡಿದ್ದರು. ಬಹುಶಃ ತುಂಬಾ ವಿಚಿತ್ರವೆನಿಸಿತ್ತು. ಯಾರೂ ಊಹಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಈಗ ಇಂಟರ್ ನೆಟ್, ಟೆಕ್ನಾಲಜಿ ಇದ್ದರೂ ಈಗ ಒಂದು ಸಿನಿಮಾ ಮಾಡ್ಬೇಕಾದ್ರೆ ಅದಕ್ಕೊಂದು ಸ್ಫೂರ್ತಿ, ಮೂಲ ಇರುತ್ತೆ. ಆದ್ರೆ, ಅಂದು ಉಪೇಂದ್ರ ಹೇಳಿದ ಕಥೆಗೆ ಅವರೇ ಮೂಲ. ವಿಭಿನ್ನವಾಗಿರಬೇಕು, ಹೊಸತನ ಇರಬೇಕು ಎಂದು ಮಾಡುವ ನಿರ್ದೇಶಕ''

ಪುಟ್ಟಣ್ಣ, ಕಾಶಿನಾಥ್ ನಂತರ ಉಪೇಂದ್ರ

ಪುಟ್ಟಣ್ಣ, ಕಾಶಿನಾಥ್ ನಂತರ ಉಪೇಂದ್ರ

''ಪುಟ್ಟಣ್ಣ ಕಣಗಾಲ್, ನಂತರ ಕಾಶೀನಾಥ್ ನಂತರ ತೆಲುಗಿನಲ್ಲಿ ಉಪೇಂದ್ರ ಚಿತ್ರಗಳಿಗೆ ಹೆಚ್ಚು ಬೇಡಿಕೆ ಮತ್ತು ಪ್ರೇಕ್ಷಕರಿದ್ದಾರೆ. ಆ ಕಾರಣಕ್ಕಾಗಿಯೇ ಉಪೇಂದ್ರ ಅವರನ್ನ ಕರೆದುಕೊಂಡು ಬಂದು ಇಲ್ಲಿನ ಚಿತ್ರಗಳಲ್ಲಿ ನಟಿಸುವ ಆಸಕ್ತಿ ತೋರಿಸ್ತಾರೆ'' ಎಂದು ನಿರ್ದೇಶಕ ವೈವಿಎಸ್ ಚೌಧರಿ ಐ ಲವ್ ಯೂ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Telugu director yvs chowdary reveals about upendra and chiranjeevi movie. Upendra was planned movie with Chiranjeevi, but its didn't start.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X