For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಬಗ್ಗೆ ತೆಲುಗು ಡಬ್ಬಿಂಗ್ ಕಲಾವಿದೆ ಬಿಚ್ಚಿಟ್ಟ ಥ್ರಿಲ್ಲಿಂಗ್ ವಿಷಯ

  |

  ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಇಡೀ ಭಾರತೀಯ ಸಿನಿಮಾರಂಗ ಕಾಯುತ್ತಿದೆ. ಕನ್ನಡದಷ್ಟೇ ತೆಲುಗು, ಹಿಂದಿ ಹಾಗೂ ಇನ್ನಿತರ ಭಾಷೆಗಳಲ್ಲಿ ಚಾಪ್ಟರ್ 2 ಪ್ರಾಮುಖ್ಯತೆ ಉಳಿಸಿಕೊಂಡಿದ್ದು ಕುತೂಹಲ ಹೆಚ್ಚಿಸಿದೆ. ಕೆಜಿಎಫ್ 2 ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದಿದೆ. ಎಲ್ಲಾ ಭಾಷೆಯ ಡಬ್ಬಿಂಗ್ ಕೆಲಸ ಸಹ ಪೂರ್ಣಗೊಂಡಿದೆ. ಥಿಯೇಟರ್‌ಗೆ 100 ಪರ್ಸೆಂಟ್ ಅವಕಾಶ ಸಿಗುತ್ತಿದ್ದಂತೆ ಅಧಿಕೃತವಾಗಿ ರಿಲೀಸ್ ಬಗ್ಗೆ ಪ್ರಕಟಿಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.

  ಈ ಮಧ್ಯೆ ತೆಲುಗು ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಕಲಾವಿದೆ ಅಮಲಾ ನಾಯ್ಡು ಹಲವು ಥ್ರಿಲ್ಲಿಂಗ್ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚಿಗಷ್ಟೆ ಯೂಟ್ಯೂಬ್ ವಾಹಿನಿಯೊಂದರ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಡಬ್ಬಿಂಗ್ ಕಲಾವಿದೆ ಅಮಲಾ ನಾಯ್ಡು ಕೆಜಿಎಫ್ ಮುಂದುವರಿದ ಭಾಗ 'ಅದ್ಭುತ' ಎಂದಿದ್ದಾರೆ. ಮುಂದೆ ಓದಿ...

  ಕೆಜಿಎಫ್, ಪುಷ್ಪ, ಆಚಾರ್ಯ, RRR: ಇಲ್ಲಿದೆ ರಿಲೀಸ್ ಲೆಕ್ಕಾಚಾರಕೆಜಿಎಫ್, ಪುಷ್ಪ, ಆಚಾರ್ಯ, RRR: ಇಲ್ಲಿದೆ ರಿಲೀಸ್ ಲೆಕ್ಕಾಚಾರ

  ರಾಕಿ ಭಾಯ್ ತಾಯಿ ಪಾತ್ರಕ್ಕೆ ಕಂಠದಾನ

  ರಾಕಿ ಭಾಯ್ ತಾಯಿ ಪಾತ್ರಕ್ಕೆ ಕಂಠದಾನ

  ಸಿನಿಮಾದಲ್ಲಿ ರಾಕಿ ಭಾಯ್ ತಾಯಿಯ ಪಾತ್ರದಲ್ಲಿ ಅರ್ಚನಾ ಜೋಯಿಸ್ ನಟಿಸಿದ್ದಾರೆ. ಈ ಪಾತ್ರಕ್ಕೆ ತೆಲುಗಿನಲ್ಲಿ ಅಮಲಾ ನಾಯ್ಡು ಡಬ್ಬಿಂಗ್ ಮಾಡಿದ್ದರು. ಚಾಪ್ಟರ್ 1 ರಲ್ಲಿ ಕಂಠದಾನ ಮಾಡಿದ್ದ ಅಮಲಾ, ಚಾಪ್ಟರ್ 2ರಲ್ಲೂ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಡಬ್ಬಿಂಗ್ ವೇಳೆ ಚಾಪ್ಟರ್ 2 ದೃಶ್ಯಗಳನ್ನು ನೋಡಿದ ಅಮಲಾ ಬಹಳ ಥ್ರಿಲ್ ಆಗಿದ್ದಾರಂತೆ.

  ಚಾಪ್ಟರ್ 1 ಮೀರಿಸುವಂತಿದೆ ಚಾಪ್ಟರ್ 2

  ಚಾಪ್ಟರ್ 1 ಮೀರಿಸುವಂತಿದೆ ಚಾಪ್ಟರ್ 2

  ಚಾಪ್ಟರ್ 1ರಲ್ಲಿ ಕಂಡಿದ್ದ ಯಶಸ್ಸನ್ನು ಮೀರಿ ಚಾಪ್ಟರ್ 2 ಸಿನಿಮಾ ಗಳಿಸುತ್ತದೆ ಎಂದು ಡಬ್ಬಿಂಗ್ ಕಲಾವಿದೆ ಅಮಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ಚಾಪ್ಟರ್ 2 ಬಹಳ ಚೆನ್ನಾಗಿ ಮೂಡಿಬಂದಿದೆ. ಚಾಪ್ಟರ್ 1 ಮೀರಿಸುತ್ತದೆ. ಚಿತ್ರಕ್ಕೆ ಕಂಟೆಂಟ್ ಹೀರೋ. ಅದಕ್ಕೆ ತಕ್ಕಂತೆ ಕಲಾವಿದರು ನಟಿಸಿದ್ದಾರೆ. ಆ ನಟನೆಗೆ ಸೂಕ್ತ ಸಂಭಾಷಣೆ ಹಾಗೂ ಇದೆಲ್ಲದರ ನಿರೀಕ್ಷೆಯಂತೆ ಸಕ್ಸಸ್ ಪಡೆಯುವ ಶಕ್ತಿ ಆ ಚಿತ್ರಕ್ಕಿದೆ'' ಎಂದಿದ್ದಾರೆ.

  'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ

  ತಾಯಿ-ಮಗನ ಬಾಂಧವ್ಯ ವಾಹ್ ಎನ್ನುವಂತಿದೆ

  ತಾಯಿ-ಮಗನ ಬಾಂಧವ್ಯ ವಾಹ್ ಎನ್ನುವಂತಿದೆ

  ''ಮೊದಲ ಭಾಗಕ್ಕಿಂತ ಹೆಚ್ಚಿನ ಭಾವನಾತ್ಮಕ ದೃಶ್ಯಗಳು ನೋಡಬಹುದು. ರಾಕಿ ಭಾಯ್ ಬಾಲ್ಯದ ನೆನಪುಗಳು ಆಗಾಗ ಬರ್ತಾನೆ ಇರುತ್ತದೆ. ಆ ಸೀನ್‌ಗಳು ಚಿತ್ರಕ್ಕೆ ಶಕ್ತಿಯುತವಾಗಿದೆ. ತಾಯಿ-ಮಗನ ದೃಶ್ಯಗಳು ಬಂದಾದ ಪ್ರೇಕ್ಷಕರಲ್ಲಿ ಆ ರೋಮಾಂಚನ ಹೆಚ್ಚು ಮಾಡುತ್ತದೆ. ಚಾಪ್ಟರ್ 2 ಅತ್ಯದ್ಭುತವಾಗಿ ಬರಲಿದೆ'' ಎಂದು ಅಮಲಾ ಹೇಳಿದ್ದಾರೆ.

  ಬಿಡುಗಡೆಯಾಯ್ತು ಉಮಾಪತಿ ಮತ್ತು ಅರುಣಾಕುಮಾರಿ ವಾಟ್ಸಾಪ್ ಮೆಸೇಜ್ | Filmibeat Kannada
  ಕೆಜಿಎಫ್ ದೊಡ್ಡ ಖ್ಯಾತಿ ತಂದುಕೊಡ್ತು

  ಕೆಜಿಎಫ್ ದೊಡ್ಡ ಖ್ಯಾತಿ ತಂದುಕೊಡ್ತು

  ''ಕೆಜಿಎಫ್ ಸಿನಿಮಾಗೂ ಮೊದಲು ಬಹಳಷ್ಟು ಚಿತ್ರಗಳಲ್ಲಿ ನಾನು ಡಬ್ಬಿಂಗ್ ಮಾಡಿದ್ದೇನೆ. ಆದರೆ ಈ ಸಿನಿಮಾ ಸ್ವಲ್ಪ ವಿಶೇಷವಾಗಿ ಗುರುತು ತಂದು ಕೊಡ್ತು. ರಾಕಿ ಭಾಯ್ ತಾಯಿ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದು ಅಮಲಾ ಅವರೇ ಎಂದು ಹೇಳುವಷ್ಟು ಖ್ಯಾತಿ ಸಿಕ್ತು. ಡಬ್ಬಿಂಗ್ ಮಾಡುವ ವೇಳೆ ಈ ಸಿನಿಮಾ ಇಷ್ಟು ದೊಡ್ಡ ಸಕ್ಸಸ್ ಕೊಡುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಬಹಳ ಖುಷಿ ಕೊಟ್ಟಿದೆ'' ಎಂದು ಅಮಲಾ ಹೇಳಿಕೊಂಡಿದ್ದಾರೆ.

  English summary
  Telugu dubbing artist Amala Naidu thrilled About Yash starrer KGF Chapter 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X