ಡಿ ಬಾಸ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ತೆಲುಗಿನ ಖ್ಯಾತ ನಿರ್ದೇಶಕ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಒಡೆಯ ಚಿತ್ರದ ಹಾಡಿನ ಚಿತ್ರೀಕರಣ ಕೂಡ ಬಾಕಿ ಇದೆ. ಇತ್ತೀಚಿಗಷ್ಟೆ ವಾರಣಾಸಿಯಲ್ಲಿ ರಾಬರ್ಟ್ ಚಿತ್ರದ ಚಿತ್ರೀಕರಣ ಮುಗಿಸಿ ವಾಪಸ್ ಆಗಿರುವ ದರ್ಶನ್, ಈಗ ಒಡೆಯ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗಲು ಸಜ್ಜಾಗಿದ್ದಾರೆ.
ಇದರ ಜೊತೆಗೀಗ ಡಿ ಬಾಸ್ ಕಡೆಯಿಂದ ಇಂಟ್ರಸ್ಟಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ. ಟಾಲಿವುಡ್ ಖ್ಯಾತ ನಿರ್ದೇಶಕರೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಟಾಲಿವುಡ್ ನ ಖ್ಯಾತ ನಿರ್ದೇಶಕ ವಕ್ಕತಮ್ ವಂಶಿ, ಡಿ ಬಾಸ್ ಗೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.
ತೆಲುಗಿನಲ್ಲಿ ಅಶೋಕ್, ಕಿಕ್, ಯೆವಡು, ರೇಸುಗುರಂ, ಟೆಂಪರ್ ಹೀಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಿಗೆ ಕಥೆ ಬರೆದಿರುವ ವಂಶಿ, ಮೊದಲ ಬಾರಿಗೆ 'ನಾ ಪೇರು ಸೂರ್ಯ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ವಂಶಿ ನಿರ್ದೇಶನದ ಚೊಚ್ಚಲ ಚಿತ್ರ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ.

ಆ ನಂತರ ಯಾವ ಸಿನಿಮಾಗಳನ್ನು ಮಾಡದೆ ಸುಮಾರು ಎರಡು ವರ್ಷಗಳಿಂದ ಸೈಲೆಂಟ್ ಆಗಿದ್ದ ವಂಶಿ ಈಗ ಕನ್ನಡದ ಕಡೆ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪಕ್ಕಾ ಆಕ್ಷನ್ ಕಥೆ ರೆಡಿಮಾಡಿಕೊಂಡಿರುವ ವಂಶಿ ದರ್ಶನ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರಂತೆ. ಈಗಾಗಲೆ ದರ್ಶನ್ ಜೊತೆ ಹಲವು ಬಾರಿ ಮಾತುಕತೆ ಕೂಡ ನಡೆಸಿದ್ದಾರಂತೆ.
ದರ್ಶನ್ ಗೆ ಕಥೆ ಇಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದ್ರೆ, ವಂಶಿ ಕನ್ನಡದಲ್ಲಿ ಸಿನಿಮಾ ಮಾಡುವುದು ಪಕ್ಕಾ. ದರ್ಶನ್ 'ರಾಬರ್ಟ್' ಮತ್ತು 'ಒಡೆಯ' ಸಿನಿಮಾ ನಂತರ 'ಗಂಡುಗಲಿ ಮದಕರಿ ನಾಯಕ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮಿಲನ ಪ್ರಕಾಶ್ ಜೊತೆಯು ಒಂದು ಸಿನಿಮಾ ಮಾಡಲಿದ್ದಾರೆ. ಇದಾದ ಬಳಿಕ ವಂಶಿ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.


Click it and Unblock the Notifications











