»   » ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದ ಮತ್ತೊಬ್ಬ ಜೂನಿಯರ್ ತಾರೆ

ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದ ಮತ್ತೊಬ್ಬ ಜೂನಿಯರ್ ತಾರೆ

Posted By: ಅನಂತರಾಮು, ಹೈದರಾಬಾದ್
Subscribe to Filmibeat Kannada

ವೇಶ್ಯಾಜಾಲದಲ್ಲಿ ಸಿನಿಮಾ ಕ್ಷೇತ್ರಕ್ಕೆ ಸೇರಿದ ಮತ್ತೊಬ್ಬ ತಾರೆಯೊಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. ಹೈದರಾಬಾದಿನ ವನಸ್ಥಲಿಪುರಂನಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ಗುಟ್ಟಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇದಿಸುವಲ್ಲಿ ಪೊಲೀಸಲು ಯಶಸ್ವಿಯಾಗಿದ್ದಾರೆ.

ಒಬ್ಬ ಜೂನಿಯರ್ ತಾರೆ ಸೇರಿದಂತೆ ಒಟ್ಟು ನಾಲ್ಕು ಮಂದಿ ಮಹಿಳೆಯರು, ಇಬ್ಬರು ಗ್ರಾಹಕರನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ ಕೊನೆಯ ವಾರದಿಂದ ಹೈದರಾಬಾದಿನಲ್ಲಿ ರಾತ್ರಿ ದಂಧೆಯ ಕಾರ್ಯಕಲಾಪಗಳು ಮಿತಿಮೀರಿ ನಡೆಯುತ್ತಿವೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಪ್ರವೃತ್ತರಾದಾಗ ಈ ಜಾಲ ಬಯಲಾಗಿದೆ. [ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್]

Telugu junior artist arrested in prostitution case

ಜೂನಿಯರ್ ತಾರೆ ಸೇರಿದಂತೆ ಸಿಕ್ಕಿಬಿದ್ದವರನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಕಳೆದ ಹತ್ತು ದಿನಗಳಿಂದೀಚೆಗೆ ಈ ರೀತಿಯ ಕಾನೂನುಬಾಹಿರ ಕಾರ್ಯಕಲಾಪಗಳು ನಡೆಯುತ್ತಿರುವುದಾಗಿ ಪೊಲೀಸರು ಅನುಮಾನಿಸಿದ್ದಾರೆ.

ವೇಶ್ಯಾವಾಟಿಕೆ ಜಾಲದಲ್ಲಿ ಸಿನಿಮಾ ತಾರೆಗಳು ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಮಂದಿ ಸಿಕ್ಕಿಬಿದ್ದಾರೆ. ಕೆಲವರು ಅವಕಾಶಗಳಿಲ್ಲದೆ ಈ ವೃತ್ತಿಗೆ ಇಳಿದರೆ, ಇನ್ನೂ ಕೆಲವರು ಮೋಜಿನ ಜೀವನ ನಡೆಸಲು ಮೈ ಮಾರಿಕೊಳ್ಳುತ್ತಿದ್ದಾರೆ. [ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ತಾರೆಗಳು]

ಪೊಲೀಸರು ಸಾಕಷ್ಟು ಬಾರಿ ಕೌನ್ಸೆಲಿಂಗ್ ನೀಡದರೂ ಪ್ರಯೋಜನವಾಗುತ್ತಿಲ್ಲ. ಈ ರೀತಿಯ ರಾತ್ರಿ ದಂಧೆಗಳಲ್ಲಿ ಸಿನಿಮಾ ತಾರೆಗಳು ಸಿಕ್ಕಿಬೀಳುತ್ತಿರುವುದು ಚಿತ್ರೋದ್ಯಮದ ಗೌರವ ಘನತೆಗಳಿಗೆ ಕಪ್ಪು ಚುಕ್ಕೆಯಂತಾಗಿದೆ.

English summary
Hyderabad police have arrested 4 women including junior artist and 2 men in Vanasthalipuram and all of them we booked under prostitution act. These kind of cases have increased a lot from the last week of December 2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada