For Quick Alerts
  ALLOW NOTIFICATIONS  
  For Daily Alerts

  ತೆಲುಗು ಜನಪ್ರಿಯ ಹಾಸ್ಯ ನಟ ವೇಣು ಮಾಧವ್ ನಿಧನ

  |

  ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವೇಣು ಮಾಧವ್ ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚಿಗಷ್ಟೇ, ಸಿಕಂದರಬಾದ್ ನಲ್ಲಿರುವ ಯಶೋಧ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಇಂದು (ಸಪ್ಟೆಂಬರ್ 25) ಕೊನೆಯುಸಿರೆಳೆದಿದ್ದಾರೆ.

  ವೇಣುಮಾಧವ್ ಅವರ ಯಕೃತ್ತು ತೀವ್ರ ಹಾನಿಗೆ ಒಳಗಾಗಿದ್ದು, ಯಕೃತ್‌ ಕಸಿ ಮಾಡುವ ಅವಶ್ಯಕತೆ ಇತ್ತು. ವೇಣುಮಾಧವನ್ ಸ್ಥಿತಿ ತೀವ್ರ ಚಿಂತಾಜನಕವಾಗಿದ್ದು, ಇಂದು 12:20 ನಿಮಿಷಕ್ಕೆ ವಿಧಿವಶರಾಗಿದ್ದಾರೆ.

  ಮಿಮಿಕ್ರಿ ನಟನಾಗಿದ್ದ ವೇಣುಮಾಧವ್ ನಂತರ ಅನೇಕ ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡರು. ಸುಮಾರು 170 ಸಿನಿಮಾಗಳಿಗಿಂತಲೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. 1996 ರಲ್ಲಿ ಸಿನಿರಂಗ ಪ್ರವೇಶಿಸಿದ ಅವರು 2016 ರಲ್ಲಿ ಕೊನೆಯದಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸತತವಾಗಿ ಆನೋರಾಗ್ಯ ಕಾಡಿದ ಕಾರಣ ಅವರು ಚಿತ್ರಗಳನ್ನು ನಟಿಸುವುದು ನಿಲ್ಲಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ತೆಲಂಗಾಣದ ಕೋಡದ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರವನ್ನೂ ಸಲ್ಲಿಸಿದ್ದರು.

  ತೆಲುಗು ಖ್ಯಾತ ಹಾಸ್ಯನಟ ವೇಣುಮಾಧವ್ ತೀವ್ರ ಅಸ್ವಸ್ಥ

  ಮಿಮಿಕ್ರಿ ನಟನಾಗಿದ್ದ ವೇಣುಮಾಧವ್ ನಂತರ ಅನೇಕ ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡರು. ವೇಣುಮಾಧವ್ ಪತ್ನಿ ಶ್ರೀ ವಾಣಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಡಪ ಜಿಲ್ಲೆಯ ಸೂರ್ಯ ಪೇಟೆ ಇವರು ಹುಟ್ಟೂರು.

  English summary
  Telugu movie comedy actor Venu Madhav passes away today (september 25) in sikandrabad

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X