»   » 'ಸಂಕ್ರಾಂತಿ' ಎಫೆಕ್ಟ್: ಕನ್ನಡ ಚಿತ್ರಗಳಿಗೆ ಕೋಕ್, ಪರಭಾಷಾ ಚಿತ್ರಗಳಿಗೆ ಜೈ!

'ಸಂಕ್ರಾಂತಿ' ಎಫೆಕ್ಟ್: ಕನ್ನಡ ಚಿತ್ರಗಳಿಗೆ ಕೋಕ್, ಪರಭಾಷಾ ಚಿತ್ರಗಳಿಗೆ ಜೈ!

Posted By:
Subscribe to Filmibeat Kannada

ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಕೊಂಚ ನಿರಾಸೆಯಾಗಬಹುದು. ಯಾಕಂದ್ರೆ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತ ಹೆಚ್ಚು ಪರಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಅದರಲ್ಲೂ ಕನ್ನಡ ಚಿತ್ರಗಳ ಮಾತೃಭೂಮಿಯಾಗಿರುವ ಗಾಂಧಿನಗರದಲ್ಲೇ ಈ ವಾರ ತೆಲುಗು, ತಮಿಳು ಚಿತ್ರಗಳ ಹಾವಳಿ ಹೆಚ್ಚಾಗಿದೆ. ಬೇಸರದ ಸಂಗತಿ ಏನಪ್ಪಾ ಅಂದ್ರೆ, ಕನ್ನಡದ ಮುಖ್ಯ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳನ್ನ ಬಿಡುಗಡೆ ಮಾಡುತ್ತಿದ್ದು, ಸದ್ಯ, ಪ್ರದರ್ಶನವಾಗುತ್ತಿರುವ ಕನ್ನಡ ಚಿತ್ರಗಳು ಎತ್ತಂಗಡಿಯಾಗುತ್ತಿವೆ.

ಸಂಕ್ರಾಂತಿ ಹಬ್ಬಕ್ಕೆ ಸ್ಯಾಂಡಲ್ ವುಡ್ ರೆಡಿ!

ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಸ್ಯಾಂಡಲ್ ವುಡ್ ರೆಡಿಯಾಗಿದೆ. ಆದ್ರೆ, ಈ ಬಾರಿಯ ಹಬ್ಬ ಕನ್ನಡ ಸಿನಿರಸಿಕರಿಗೆ ಸ್ವಲ್ಪ ನಿರಾಸೆಯಾಗಬಹುದು. ಯಾಕಂದ್ರೆ, ಕನ್ನಡದಲ್ಲಿ ಈ ವಾರ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

ಕರ್ನಾಟದಲ್ಲಿ ಪರಭಾಷೆ ಚಿತ್ರಗಳ ಅಬ್ಬರ!

ಈ ವಾರ ಕನ್ನಡದಲ್ಲಿ ದೊಡ್ಡ ಸಿನಿಮಾಗಳಿಲ್ಲದ ಕಾರಣ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಅಬ್ಬರಿಸಲಿವೆ. ರಾಜ್ಯಾದ್ಯಂತ ತೆಲುಗು, ತಮಿಳು, ಹಿಂದಿ ಚಿತ್ರಗಳು ತೆರೆಕಾಣಲಿವೆ.

ದಕ್ಷಿಣದ ಮೂರು 'ಬಿಗ್' ಸಿನಿಮಾಗಳು

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಖೈದಿ-150', ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ', ಹಾಗೂ ತಮಿಳು ನಟ ವಿಜಯ್ ಅಭಿನಯದ 'ಭೈರವ' ಚಿತ್ರಗಳು, ಕೇವಲ ಆಯಾ ರಾಜ್ಯದಲ್ಲಿ ಮಾತ್ರವಲ್ಲದೇ, ಕರ್ನಾಟಕದಲ್ಲೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಗಾಂಧಿನಗರ ತೆಲುಗುಮಯ!

ದಕ್ಷಿಣದ ಈ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆ ಗಾಂಧಿನಗರ ಪೂರ್ತಿ ತೆಲುಗುಮಯ ಆಗಿ ಪರಿವರ್ತನೆಯಾಗುತ್ತಿದೆ. ಹೌದು, ಕೆ.ಜಿ ರಸ್ತೆಯ ಮುಖ್ಯ ಚಿತ್ರಮಂದಿರಗಳಲ್ಲಿ ಈ ಚಿತ್ರಗಳು ತೆರೆಕಾಣುತ್ತಿವದ್ದು, ಎರಡೆರೆಡು ಮೇನ್ ಥಿಯೇಟರ್ ನಲ್ಲಿ ಪರಭಾಷಾ ಚಿತ್ರಗಳು ರಿಲೀಸ್ ಆಗುತ್ತಿದೆ.[ಬಾಲಕೃಷ್ಣರ 100ನೇ ಚಿತ್ರದಲ್ಲಿ ಶಿವಣ್ಣ: ಫಸ್ಟ್ ಲುಕ್ ರಿಲೀಸ್]

ಕನ್ನಡ ಚಿತ್ರಮಂದಿರದಲ್ಲೇ ತೆಲುಗು ಸಿನಿಮಾ!

ಕನ್ನಡ ಸ್ಟಾರ್ ನಟರ ಚಿತ್ರಗಳಿಗೆ ಫೇವರೇಟ್ ಎನಿಸಿಕೊಂಡಿರುವ ಸಂತೋಷ್ ಚಿತ್ರಮಂದಿರದಲ್ಲಿ ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ' ತೆರೆಕಾಣುತ್ತಿದೆ. ಕೆಜಿ ರಸ್ತೆಯಲ್ಲಿರುವ ಭೂಮಿಕ ಹಾಗೂ ಮೂವಿಲ್ಯಾಂಡ್ ಚಿತ್ರಮಂದಿರದಲ್ಲಿ ಚಿರಂಜೀವಿ ಅಭಿನಯದ 'ಖೈದಿ-150' ರಿಲೀಸ್ ಆಗುತ್ತಿದೆ. ಇನ್ನೂ ಬಹುತೇಕ ಕಡೆ ವಿಜಯ್ ಅಭಿನಯದ 'ಭೈರವ' ಸಿನಿಮಾ ಪ್ರದರ್ಶನವಾಗಲಿದೆ.[ತೆಲುಗು ಚಿತ್ರಕ್ಕೆ ಸಿದ್ದವಾದ ಕನ್ನಡದ ಮುಖ್ಯ ಚಿತ್ರಮಂದಿರ!]

ಕನ್ನಡ ಚಿತ್ರಗಳಿಗೆ ಕೋಕ್!

ಈ ಮೂರು ಚಿತ್ರಗಳ ಎಂಟ್ರಿಯಿಂದ ಕನ್ನಡ ಚಿತ್ರಗಳಿಗೆ ಕೋಕ್ ನೀಡಲಾಗುತ್ತಿದೆ. ಸಂತೋಷ್ ಚಿತ್ರಮಂದಿರಲ್ಲಿ ಗಣೇಶ್ ಅಭಿನಯದ 'ಸುಂದರಾಂಗ ಜಾಣ', ಭೂಮಿಕ ಚಿತ್ರಮಂದಿರದಲ್ಲಿ 'ಮಂಡ್ಯ ಟು ಮುಂಬೈ' ಹಾಗೂ ಮೂವಿಲ್ಯಾಂಡ್ ಥಿಯೇಟರ್ ನಲ್ಲಿ 'ತರ್ಲೆ ವಿಲೇಜ್' ಈ ವಾರ ಎತ್ತಂಗಡಿಯಾಗುತ್ತಿದೆ.

ಕನ್ನಡದಲ್ಲಿ ಸುಮಂತ್ 'ಲೀ' ತೆರೆಗೆ

ಸುಮಂತ್ ಶೈಲೇಂದ್ರ ಹಾಗೂ ನಭಾ ನಟೇಶ್ ಅಭಿನಯ 'ಲೀ' ಚಿತ್ರ, ಈ ವಾರ ಅದ್ದೂರಿಯಾಗಿ ತೆರೆಕಾಣುತ್ತಿದೆ. ಬಹುಶಃ ಕನ್ನಡ ಚಿತ್ರಪ್ರೇಮಿಗಳಿಗೆ 'ಲೀ' ಚಿತ್ರವೇ ಸಂಕ್ರಾಂತಿ ಗಿಫ್ಟ್ ಆಗಲಿದೆ ಎನ್ನಬಹುದು.[ಕನ್ನಡದ 'ಲೀ' ಮುಂದಿನ ವಾರ ರಿಲೀಸ್!]

ಕನ್ನಡ ಚಿತ್ರಗಳ ಯಶಸ್ವಿ ಪ್ರದರ್ಶನ!

ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ', ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ', ಶಿವರಾಜ್ ಕುಮಾರ್ ಅಭಿನಯದ 'ಶ್ರೀಕಂಠ' ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ 'ಪುಷ್ಪಕ ವಿಮಾನ' ಹಾಗೂ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಟಿಕೇಟ್ ಸಿಗುತ್ತಿಲ್ಲ. ಹೀಗಿರುವಾಗ, ಪರಭಾಷ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳು ಸಿಗುತ್ತಿರುವುದು ಬೇಸರದ ಸಂಗತಿ.[ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ' ]

ಮಲ್ಟಿಫ್ಲೆಕ್ಸ್ ನಲ್ಲೂ ಪರಭಾಷಾ ಚಿತ್ರಗಳದ್ದೇ ಅಬ್ಬರ!

ಇತ್ತ ಸಿಂಗಲ್ ಸ್ಕ್ರೀನ್ ನಲ್ಲಿ ಮಾತ್ರವಲ್ಲ ಅತ್ತ ಮಲ್ಟಿಫ್ಲೆಕ್ಸ್ ಗಳಲ್ಲೂ ಬೇರೆ ಸಿನಿಮಾಗಳಿಗೆ ಹೆಚ್ಚು ಶೋ ಗಳು ಸಿಮೀತವಾಗಿದೆ. ಹಿಂದಿಯಲ್ಲಿ ಶ್ರದ್ದಾ ಕಪೂರ್ ಹಾಗೂ ಆದಿತ್ಯ ರಾಯ್ ಕಪೂರ್ ಅಭಿನಯದ 'ಓಕೆ ಜಾನು' ಚಿತ್ರವೂ ಇದೇ ವಾರ ತೆರೆಗೆ ಬರ್ತಿದ್ದು, ಈ ಚಿತ್ರವೂ ಬಹುತೇಕ ಚಿತ್ರಮಂದಿರಗಳನ್ನ ಆಕ್ರಮಿಸಿಕೊಂಡಿದೆ.

ಸ್ಯಾಂಡಲ್ ವುಡ್ ಗೆ ಸವಾಲು!

ಈ ವಾರ ಕನ್ನಡದಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಆದ್ರೆ, ಈಗಾಗಲೇ ತೆರೆಕಂಡಿರುವ ಚಿತ್ರಗಳ ಮೇಲೆ ಇದು ಪರಿಣಾಮ ಬೀರುತ್ತೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೂ, ಸಂಕ್ರಾಂತಿ ಹಬ್ಬಕ್ಕೆ ಸ್ಯಾಂಡಲ್ ವುಡ್ ಪೂರ್ತಿ ಪರಭಾಷಾ ಚಿತ್ರಗಳ ಹಾವಳಿಯಲ್ಲಿ ಮುಳುಗಿ ಹೋಗುವುದು ಮಾತ್ರ ಸುಳ್ಳಾಲ್ಲ.[ವಿಮರ್ಶೆ: ಪ್ರೀತಿಗೆ ನೆಂಟ, ದುಷ್ಟರಿಗೆ ಒರಟ ಈ ಕಾಮನ್ ಮ್ಯಾನ್ 'ಶ್ರೀಕಂಠ' ]

English summary
However in the coming week Gandhinagar it looks like it will Become a Telugu film hub. On January 11, 'Khaidi No.150' Starring Chiranjeevi is Releasing in Bhoomika Theatre. A day Later on January 12, Another Telugu film Gautami Putra Satakarni is Releasing in Santhosh Theatre.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more