»   » ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಚಕ್ರಿ ವಿಧಿವಶ

ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಚಕ್ರಿ ವಿಧಿವಶ

Posted By:
Subscribe to Filmibeat Kannada

ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಚಕ್ರಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದಾಗಿ ಡಿ.15ರ ಸೋಮವಾರ ಬೆಳಗ್ಗೆ ಹೈದರಾಬಾದ್‌ನಲ್ಲಿ ಚಕ್ರಿ (40) ಮೃತಪಟ್ಟಿದ್ದಾರೆ.

ತೆಲುಗು ಚಿತ್ರರಂಗದಲ್ಲಿ 85 ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚಕ್ರಿ, 'ಸಿಂಹ' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದಲ್ಲಿ ವೀರ ಕನ್ನಡಿಗ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

Chakri

ಬೊಜ್ಜು ಸಂಬಂಧಿತ ಕಾಯಿಲೆಯಿಂದ ನರಳುತ್ತಿದ್ದ ಚಕ್ರಿ, ಚಿಕಿತ್ಸೆ ಪಡೆಯುತ್ತಿದ್ದರು. ತೆಲುಗಿನ 'ಇಡಿಯಟ್‌', 'ಸಿಂಹ', 'ದೇಶ ಮುದುರು', 'ಅಮ್ಮ ನನ್ನ ಓ ತಮಿಳ ಅಮ್ಮಾಯಿ' ಸೇರಿದಂತೆ 85ಕ್ಕೂ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಚಕ್ರಿ ಮೂಲತಃ ತೆಲಂಗಾಣದ ಮಹಬೂಬಬಾದ್‌ನ ವಾರಾಂಗಲ್ ಜಿಲ್ಲೆಯವರಾಗಿದ್ದು, 1974 ಜೂನ್ 15 ಜನಿಸಿದ್ದರು. ಚಕ್ರಿಯವರ ತಂದೆ ಜಿಲ್ಲಾ ವೆಂಕಟ ನಾರಾಯಣ ಅವರು ಸಹ ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಚಕ್ರಿ ಸಾವಿಗೆ ತೆಲುಗು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

English summary
Chakradhar Gilla (known as Chakri) one of the top music directors of Telugu cinema has died of a heart attack in Hyderabad on Monday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada