"ಪ್ರತಿ ದಿನ ಶೂಟಿಂಗ್.. ಪತಿಯೊಂದಿಗೆ ಸಂಭೋಗಿಸಲು ಸಾಧ್ಯವಾಗಲಿಲ್ಲ" 75 ವರ್ಷದ ನಟಿ ಅನ್ನಪೂರ್ಣಮ್ಮ ಹೇಳಿಕೆಗೆ ಸಿಡಿಮಿಡಿ
ತೆಲುಗು ಚಿತ್ರರಂಗದ ಹಿರಿಯ ನಟಿ ಅನ್ನಪೂರ್ಣಮ್ಮ. ತೆಲುಗಿನ ಜೊತೆಗೆ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದುವರೆಗೂ ಸುಮಾರು 600ಕ್ಕೂ ಅಧಿ ಸಿನಿಮಾಗಳಲ್ಲಿ ನಟಿಸಿರೋ ನಟಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಈ ಹಿರಿಯ ನಟಿ ಇತ್ತೀಚೆಗೆ ಕೊಟ್ಟಿರೋ ಸಂದರ್ಶನ.
75 ವರ್ಷದ ಹಿರಿಯ ನಟಿ ದಕ್ಷಿಣ ಭಾರತದ ಜನಪ್ರಿಯ ನಟಿ. ಮೆಗಾಸ್ಟಾರ್ ಚಿರಂಜೀವಿಯಿಂದ ಹಿಡಿದು ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ತೆಲುಗು-ತಮಿಳಿನ ಈ ಹಿರಿಯ ನಟಿ ಅನ್ನಪೂರ್ಣಮ್ಮ ಇತ್ತೀಚೆಗೆ ನೀಡಿದ ಸಂದರ್ಶನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ದಕ್ಷಿಣ ಭಾರತ ಸೆಲೆಬ್ರೆಟಿಗಳು ಈ ನಟಿಯ ಹೇಳಿಕೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಅಷ್ಟಕ್ಕೂ ಹಿರಿಯ ಅನ್ನಪೂರ್ಣ ಸಂದರ್ಶನದಲ್ಲಿ ಅಂತಹದ್ದೇನು ಹೇಳಿದ್ದಾರೆ? ಅವರ ವಿರುದ್ಧ ಸೆಲೆಬ್ರೆಟಿಗಳು ಆಕ್ರೋಶ ಹೊರ ಹಾಕುತ್ತಿರುವುದೇಕೆ? ತಮ್ಮ ರೊಮ್ಯಾಂಟಿಕ್ ಲೈಫ್ ಬಗ್ಗೆ ಸಂದರ್ಶನದಲ್ಲಿ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅನ್ನಪೂರ್ಣಮ್ಮ ಕೊಟ್ಟ ಹೇಳಿಕೆಗಳು ವಿವಾದ ಸೃಷ್ಟಿಸಿದ್ದವು. ತೆಲುಗು ರಾಜ್ಯಗಳಲ್ಲಿ ಇವರ ಹೇಳಿಕೆ ವಿವಾದ ಸೃಷ್ಟಿಸಿತ್ತು. ನಡುರಾತ್ರಿ ಹೆಂಗಸರು ರಸ್ತೆಗಳಲ್ಲಿ ತಿರುಗಾಡುವುದರಿಂದ ಏನು ಪ್ರಯೋಜನ? ಅವರು ಹಾಗೆಲ್ಲ ಓಡಾಡುವ ಅಗತ್ಯವೇ ಇಲ್ಲ ಎಂದಿದ್ದರು. ಇಷ್ಟೇ ಅಲ್ಲದೆ, ಮಹಿಳೆಯರು ಧರಿಸುವ ಬಟ್ಟೆಗಳಿಂದಲೇ ದೇಶದಲ್ಲಿ ಅತ್ಯಾಚಾರ ಘಟನೆಗಳು ಸಂಭವಿಸುತ್ತಿವೆ ಎಂದಿದ್ದರು. ಅದು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ದಕ್ಷಿಣ ಭಾರತದ ಜನಪ್ರಿಯ ಹಾಗೂ ವಿವಾದಾತ್ಮಕ ಗಾಯಕಿ ಚಿನ್ಮಯಿ ಶ್ರೀಪಾದ್ ವಿರೋಧ ವ್ಯಕ್ತಪಡಿಸಿದ್ದರು. ಮೀಟೂ ಅಂತಹ ಅಭಿಯಾನದಲ್ಲಿ ಧೈರ್ಯವಾಗಿ ಭಾಗವಹಿಸಿದ್ದ ಚಿನ್ಮಯಿ ಶ್ರೀಪಾದ್ ಈಗ ಅನ್ನಪೂರ್ಣ ಕೊಟ್ಟ ಹೇಳಿಕೆಗಳ ವಿರುದ್ಧವೂ ಕಿಡಿಕಾರಿದ್ದರು. ತಾವು ಇಷ್ಟ ಪಡುವ ನಟಿಯರಿಂದ ಇಂತಹ ಅಭಿಪ್ರಾಯಗಳನ್ನು ವ್ಯಕ್ತವಾದಾಗ ಬೇಸರವಾಗುತ್ತೆ ಎಂದು ಹೇಳಿದ್ದರು.

ಇದೇ ಸಿಟ್ಟಲ್ಲಿ ಚಿನ್ನಯಿ ಶ್ರೀಪಾದ್ "ಮಧ್ಯರಾತ್ರಿ ಮಕ್ಕಳಿಗೆ ಜನ್ಮ ಕೊಡುವುದನ್ನು ನಿಲ್ಲಿಸಿ. ನರ್ಸ್ ಹಾಗೂ ವೈದ್ಯರು ಕೂಡ ಮಧ್ಯರಾತ್ರಿ ಕೆಲಸ ಮಾಡುವುದನ್ನು ನಿಲ್ಲಿಸಿ. ನಾನು ಯಾಕೆ ಈ ಮಾತನ್ನು ಆಡುತ್ತಿದ್ದೇ ಅಂದರೆ, ನಾನು ಮಾಡರ್ನ್ ಡ್ರೆಸ್ ಹಾಕಿಕೊಂಡು ಓಡಾಡುತ್ತಿರುತ್ತೇನೆ. ಹಳ್ಳಿಗಳಲ್ಲಿ ಬೆಳೆಗ್ಗೆ 3 ಗಂಟೆಗೆ ಎದ್ದು ನಿತ್ಯ ಕರ್ಮಕ್ಕೆ ಹೋಗುವ ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಲ್ಲ ಅದಕ್ಕೆ ಏನಂತೀರ? " ಎಂದು ಹಿರಿಯ ನಟಿ ಅನ್ನಪೂರ್ಣಗೆ ಹೇಳಿಕೆ ವಿರುದ್ಧ ತಿರುಗಿಬಿದ್ದಿದ್ದರು.
ಈ ವಿವಾದವನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಅನ್ನಪೂರ್ಣಮ್ಮ ಸಂದರ್ಶನದಲ್ಲಿ ಇನ್ನು ಸಾಕಷ್ಟು ವಿಷಯಗಳಿವೆ. ಇದೇ ಸಂದರ್ಶನದಲ್ಲಿ ಅವರ ರೊಮ್ಯಾಂಟಿಕ್ ಲೈಫ್ ಬಗ್ಗೆನೂ ಮಾತಾಡಿದ್ದಾರೆ. ಸಿನಿಮಾದಲ್ಲಿ ಇಷ್ಟೊಂದು ಹೆಸರು ಗಳಿಸುವುದಕ್ಕೆ ಅವರ ಪತಿನೇ ಕಾರಣ. ಅವರು ತುಂಬಾನೇ ಓಳ್ಳೆಯವರು. ಅವರ ವೃತ್ತಿ ಬದುಕು ಇಷ್ಟೊಂದು ಸರಾಗವಾಗಿ ಸಾಗುವುದಕ್ಕೆ ಅವರ ಸಹಕಾರ ಕಾರಣ. ಇಲ್ಲದೇ ಹೋಗಿದ್ದರೆ 600 ಸಿನಿಮಾಗಳು ಆಗಿತ್ತಿರಲಿಲ್ಲ ಎಂದಿದ್ದಾರೆ.
ತಮ್ಮ ರೊಮ್ಯಾಂಟಿಕ್ ಲೈಫ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಶೂಟಿಂಗ್ ಇರುತ್ತಿದ್ದರಿಂದ ದಿನವಿಡೀ ದುಡಿದು ಮನೆಗೆ ಬರುವಷ್ಟರಲ್ಲಿ ಸುಸ್ತಾಗುತ್ತಿತ್ತು. ಮನೆಗೆ ಬಂದ ತಕ್ಷಣ ನಿದ್ದೆ ಜಾರುತ್ತಿದ್ದೆ. ಪ್ರತಿದಿನ ಒಂದಲ್ಲ ಒಂದು ಸಿನಿಮಾ ಶೂಟಿಂಗ್ ಇದ್ದೇ ಇರುತ್ತಿತ್ತು. ದಿನಕ್ಕೆ ಸುಮಾರು 8 ಗಂಟೆಗಳ ಕಾಲ ಶೂಟಿಂಗ್ ಮಾಡುತ್ತಿದ್ದೆವು. ಅಂತಹ ಸನ್ನಿವೇಶಗಳಲ್ಲಿ ಮನೆಗೆ ಬಂದ ಬಳಿಕ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಷ್ಟು ತಾಳ್ಮೆ ಇರಲಿಲ್ಲ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೂ ಕೆಲವರು ಕಿಡಿಕಾಡಿದ್ದಾರೆ. ಮತ್ತೆ ಕೆಲವರು ನಟಿಯನ್ನು ಟ್ರೋಲ್ ಮಾಡುವುದಕ್ಕೆ ಆರಂಭಿಸಿದ್ದಾರೆ.


Click it and Unblock the Notifications











