Sid Sriram : ತೆಲುಗಿನ ಗಾಯಕ ಸಿದ್ದ್ ಶ್ರೀರಾಮ್ ಕಂಠದಲ್ಲಿ ಅದ್ಭುತ ಕನ್ನಡ ಹಾಡು!
ತೆಲುಗಿನ ಖ್ಯಾತ ಗಾಯಕ ಸಿದ್ದ್ ಶ್ರೀರಾಮ್ ಸದ್ಯ ಬಹುಭಾಷೆಗಳಲ್ಲಿ ಖ್ಯಾತಿ ಪಡೆದುಕೊಂಡಿರುವ ಗಾಯಕ. ತನ್ನ ಕಂಠ ಸಿರಿಯಿಂದಲೇ ಜನರನ್ನು ಮೋಡಿ ಮಾಡುವ ಗಾಯಕ. ಈ ಮ್ಯಾಜಿಕಲ್ ವಾಯ್ಸ್‌ಗೆ ಫಿದಾ ಆದವರು ಅದೆಷ್ಟೋ ಮಂದಿ . ಈಗಾಗಲೇ ಇವರ ಅನೇಕ ಹಾಡುಗಳು ಪ್ರಖ್ಯಾತಿ ಪಡೆದಿದ್ದು 'ಪುಷ್ಪ' ಚಿತ್ರದ ಶ್ರೀವಲ್ಲಿ ಮತ್ತಷ್ಟು ಹೆಸರು ತಂದು ಕೊಟ್ಟಿದೆ. ಇನ್ನು ಕನ್ನಡದಲ್ಲೂ ಕೂಡ ಸಿದ್ದ್ ಶ್ರೀರಾಮ್ ಹವಾ ಜೋರಾಗಿದೆ. ಇವರು ಹಾಡುವ ಬಹುತೇಕ ಹಾಡುಗಳು ಹಿಟ್ ಲಿಸ್ಟ್ ಸೇರಿ ಬಿಡುತ್ತವೆ. ಇನ್ನು ಇವರ ಧ್ವನಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.
ಇತ್ತೀಚೆಗೆ ಸಿದ್ದ್ ಶ್ರೀರಾಮ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದಾರೆ. ಆಗಾಗ ಸಿದ್ದ್ ಶ್ರೀರಾಮ್ ಹೀಗೆ ಲೈವ್ ಬರೋದು ಉಂಟು. ಅಂತೆಯೇ ಲೈವ್‌ನಲ್ಲಿ ದರ್ಶನ ಕೊಟ್ಟ ಸಿದ್ಧ್‌ರನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ತಮಗನ್ನಿಸಿದ ಪ್ರಶ್ನೆಯನ್ನು ಕೇಳುವಂತೆ ಹೇಳಿದ್ದಾರೆ. ಕನ್ನಡದ ಅಭಿಮಾನಿಗಳು ಕೂಡ ಲೈವ್‌ನಲ್ಲಿ ಭಾಗಿ ಆಗಿದ್ದು, ಕನ್ನಡದ ಒಂದು ಹಾಡನ್ನು ಹಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆ ತಕ್ಷಣಕ್ಕೆ ಏನನ್ನು ಯೋಚನೆ ಮಾಡದ ಸಿದ್ದ್ 'ಜಗವೇ ನೀನು' ಎಂಬ ಹಾಡನ್ನು ಹಾಡಿದ್ದಾರೆ ಇದು 'ಲೈಫ್ 360' ಚಿತ್ರದ ಹಾಡಾಗಿದ್ದು, ಈ ಹಾಡು ಕೇಳಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಸಿದ್ದ್ ಶ್ರೀರಾಮ್ ಈ ಕನ್ನಡ ಹಾಡು ಕೇಳಿ ಫ್ಯಾನ್ಸ್ ಫುಲ್ ಖುಷಿ ಯಾಗಿದ್ದಾರೆ. ಪರಭಾಷಾ ಗಾಯಕನಾಗಿದ್ದರೂ ಕೂಡ ಕನ್ನಡವನ್ನು ಎಷ್ಟು ಸ್ವಚ್ಚವಾಗಿ ಉಚ್ಚರಿಸುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಸಿದ್ದ್ ಹಾಡಿರುವ ಈ ಕನ್ನಡದ ಹಾಡು ಫುಲ್ ವೈರಲ್ ಆಗುತ್ತಿದ್ದು, ಈ ಮೂಲಕ ಕನ್ನಡಿಗರ ಮನಸ್ಸಲ್ಲಿ ಮತ್ತಷ್ಟು ಸ್ಥಾನವನ್ನು ಪಡೆದಿದ್ದಾರೆ ಗಾಯಕ ಸಿದ್ದ್ ಶ್ರೀರಾಮ್. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

ಹೆಚ್ಚು ಖ್ಯಾತಿ ಪಡೆದಿರುವ ಸಿದ್ಧ್‌ಗೆ ಹೆಚ್ಚು ಬೇಡಿಕೆ ಕೂಡ ಇದೆ. ಇನ್ನು ಸಿದ್ದ್ ಶ್ರೀರಾಮ್ ಒಂದು ಹಾಡಿಗೆ ಪಡೆಯುವ ಸಂಭಾವಣೆ ಬಗ್ಗೆ ಕೂಡ ಈ ಹಿಂದೆ ಸುದ್ದಿಯಾಗಿತ್ತು. ಒಂದು ಹಾಡಿಗೆ ಈ ಗಾಯಕ ಲಕ್ಷ, ಲಕ್ಷ ಹಣ ಪಡೆಯುತ್ತಾರೆ. ಸಿದ್ದ್ ಶ್ರೀರಾಮ್ ಒಂದು ಹಾಡನ್ನು ಹಾಡಲು ಸುಮಾರು 5 ರಿಂದ 7 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಒಂದು ಚಿತ್ರದಲ್ಲಿ ಎರಡು, ಮೂರು ಹಾಡು ಹಾಡಿದರೆ, ಎಲ್ಲದಕ್ಕೂ ಪ್ರತ್ಯೇಕವಾಗಿ ಹಣ ಪಡೆಯುತ್ತಾರಂತೆ. ಈ ಸುದ್ದಿ ಸದ್ಯ ಟಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಇನ್ನು ಇತ್ತೀಚೆಗೆ ಸಿದ್ದ್ ಶ್ರೀರಾಮ್ ಸಿನಿಮಾದಲ್ಲಿ ನಾಯಕನಾಗುತ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಸಿನಿಮಾದಲ್ಲಿ ಸಿದ್ದ್ ಶ್ರೀರಾಮ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಸಿದ್ದ್ ಶ್ರೀರಾಮ್‌ಗೆ ಅವರ ಧ್ವನಿ ವರವಾಗಿದೆ. ಅವರು ಸಿನಿಮಾರಂಗಕ್ಕೆ ಬಂದು ಕಡಿಮೆ ಸಮಯದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. 'ಅಲಾ ವೈಕುಂಠಪುರಮುಲೊ' ಚಿತ್ರದ "ಸಾಮಜವರಗಮನ....", 'ಟ್ಯಾಕ್ಸಿವಾಲ' ಚಿತ್ರದ "ವಿನದುಗ...", 'ಪುಷ್ಪ' ಚಿತ್ರದ "ಶ್ರೀವಲ್ಲಿ..." ಕನ್ನಡದ "ಹಾಯಾಗಿದೆ..." 'ಭಜರಂಗಿ' ಚಿತ್ರದ "ನೀ ಸಿಗೊವರೆಗೂ..." ಸೇರಿದಂತೆ ಹಲವು ಹಾಡುಗಳನ್ನು ಸಿದ್ದ್ ಶ್ರೀರಾಮ್ ಹಾಡಿದ್ದಾರೆ.


Click it and Unblock the Notifications











