ನಿಖಿಲ್ ಕುಮಾರ್ ಮುಂದಿನ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ.!
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿ ನಿಖಿಲ್ ಕುಮಾರ್ ಮುಂದೆ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಎಲ್ಲಿಯೂ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ. ಇದೀಗ ತಮ್ಮ ಮುಂದಿನ ಹಾದಿ ಬಗ್ಗೆ ಖಚಿತ ಪಡಿಸಿದ್ದಾರೆ.
ರಾಜಕೀಯಕ್ಕಾಗಿ ಸಿನಿಮಾ ಬಿಡಲ್ಲ, ಸಿನಿಮಾಗಾಗಿ ರಾಜಕೀಯ ಬಿಡಲ್ಲ ಎಂದು ಹೇಳುತ್ತಿರುವ ನಿಖಿಲ್, ಸದ್ಯದಲ್ಲೇ ಹೊಸ ಸಿನಿಮಾ ಆರಂಭಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಎಲೆಕ್ಷನ್ ಗೂ ಮುಂಚೆ ಹೇಳಿಕೊಂಡಂತೆ ಜಯಣ್ಣ ಹಾಗೂ ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾತುಕತೆ ನಡೆಯುತ್ತಿದೆ ಎಂದಿದ್ದರು. ಇದೀಗ ಆ ಪ್ರಾಜೆಕ್ಟ್ ಗಳ ಬಗ್ಗೆ ಸುಳಿವು ನೀಡಿದ್ದು, ಮುಂದಿನ ಸಿನಿಮಾವನ್ನ ತೆಲುಗಿನ ಲೆಜೆಂಡ್ ಡೈರೆಕ್ಟರ್ ನಿರ್ದೇಶನ ಮಾಡಲಿದ್ದಾರಂತೆ. ಯಾರದು? ಮುಂದೆ ಓದಿ.....

ಲೈಕಾ ಪ್ರೊಡಕ್ಷನ್ ಪಕ್ಕಾ.!
ಎಲೆಕ್ಷನ್ ಗೆ ಮುಂಚೆ ಜಯಣ್ಣ ಸಿನಿಮಾ ಮಾತುಕತೆ ಆಗಿದೆ. ಈಗ ಎಲೆಕ್ಷನ್ ಬಳಿ ಆ ಬಗ್ಗೆ ಮತ್ತೆ ಮಾತಾಡಿಲ್ಲ. ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾಡೋದು ಪಕ್ಕಾ. ಅಂತಹ ದೊಡ್ಡ ಬ್ಯಾನರ್ ಜೊತೆ ಚಿತ್ರ ಮಾಡುವುದು ಖುಷಿ. ಇನ್ನೊಂದು ವಾರದಲ್ಲಿ ಎಲ್ಲವೂ ಫೈನಲ್ ಆಗುತ್ತೆ ಎಂದು ನಿಖಿಲ್ ತಿಳಿಸಿದ್ದಾರೆ.

ತೆಲುಗಿನ ಲೆಜೆಂಡ್ ನಿರ್ದೇಶಕ
ಹಾಗಾದ್ರೆ, ನಿಖಿಲ್ ಮುಂದಿನ ಸಿನಿಮಾವನ್ನ ಯಾರು ನಿರ್ದೇಶನ ಮಾಡಬಹುದು, ಯಾರು ಹೀರೋಯಿನ್ ಆಗಿ ನಟಿಸಬಹುದು ಎಂಬ ಕುತೂಹಲ ಸಹಜ. ಈ ಬಗ್ಗೆ ಮಾಹಿತಿ ನೀಡದ ನಿಖಿಲ್ ಮುಂದಿನ ಚಿತ್ರವನ್ನ ತೆಲುಗಿನ ಲೆಜೆಂಡ್ರಿ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರೆ ಎಂದಷ್ಟೇ ಸುಳಿವು ನೀಡಿದರು. ಅದು ಯಾರು ಎಂಬುದು ಈಗ ನಿರೀಕ್ಷೆ ಹೆಚ್ಚಿಸಿದೆ.

ಒಳ್ಳೆ ಸಿನಿಮಾ ಮಾಡ್ಬೇಕು ಅಷ್ಟೆ
ಜಾಗ್ವಾರ್ ಸಿನಿಮಾ ಮಾಡುವ ವೇಳೆ ಎಲ್ಲ ತಂತ್ರಜ್ಞರು ತೆಲುಗಿನವರು ಎಂಬ ಆಪಾದನೆ ಬಂತು. ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಅಪ್ಪಟ ಕನ್ನಡಿಗರೇ ಕೆಲಸ ಮಾಡಿದ್ರು. ನನಗೆ ಒಳ್ಳೆಯ ಸಿನಿಮಾ ಮಾಡ್ಬೇಕು ಎನ್ನವುದಷ್ಟೆ ಆಸೆ, ತಂತ್ರಜ್ಞರು ಯಾರೂ ಎಂಬುದು ಯೋಚನೆ ಮಾಡಲ್ಲ. ಸಿನಿಮಾಗೆ ಭಾಷೆಯ ಗಡಿಯಿಲ್ಲ.

ಮಂಡ್ಯದಲ್ಲೇ ವಾಸವಾಗಲಿದ್ದಾರೆ ನಿಖಿಲ್
ಚುನಾವಣೆಯಲ್ಲಿ ಸೋತರು ಅದನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡಿರುವ ನಿಖಿಲ್ ಕುಮಾರ್, ಮಂಡ್ಯದಲ್ಲಿ ಮನೆ ಮಾಡಿ ವಾಸ ಮಾಡುತ್ತೇನೆ, ಮಂಡ್ಯ ಅಭಿವೃದ್ದಿಗಾಗಿ ಅಧಿಕಾರ ಇಲ್ಲದಿದ್ದರೂ ಶ್ರಮಿಸುತ್ತೇನೆ'' ಎಂದು ನಿಖಿಲ್ ಹೇಳಿದ್ದಾರೆ.


Click it and Unblock the Notifications











