»   » ಐಟಂ ಸಾಂಗಿನಲ್ಲಿ ಸೋನಿಯಾ ಅಗರವಾಲ್ ಮಿಂಚು

ಐಟಂ ಸಾಂಗಿನಲ್ಲಿ ಸೋನಿಯಾ ಅಗರವಾಲ್ ಮಿಂಚು

Posted By:
Subscribe to Filmibeat Kannada

ಒಂದಷ್ಟು ಕಾಲ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸೋನಿಯಾ ಅಗರವಾಲ್ ಮತ್ತೆ ಬೆಳ್ಳತೆರೆಗೆ ರಿಎಂಟ್ರಿ ಕೊಟ್ಟಿದ್ದಾರೆ. ಅದೂ ಐಟಂ ಸಾಂಗ್ ಮೂಲಕ.

ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಮಿಂಚಿದ್ದ ಮಾದಕ ಬೆಡಗಿ ಸೋನಿಯಾ ಅಗರವಾಲ್ ಮದುವೆಯಾಗಿ ಪರದೆಯ ಹಿಂದೆ ಸರಿದಿದ್ದಳು. ತಮಿಳೂ ನಿರ್ದೇಶಕ ಸೆಲ್ವರಾಘವನ್ ಜತೆಗಿನ ಮದುವೆ ಊರ್ಜಿತವಾಗಲಿಲ್ಲ. ಅದಾಗುತ್ತಿದ್ದಂತೆ ಬೆಳ್ಳಿತೆರೆ ಸೋನಿಯಾಳನ್ನು ಅಂಗೀಕರಿಸಲಿಲ್ಲ.

telugu-superstar-sonia-agarwal-item-song-in-amma-nanna-oorelithe

ಹಾಗಂತ ಸೋನಿಯಾ ಅಗರವಾಲ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬೆಳ್ಳಿತೆರೆಗೆ ವಾಪಸಾಗಲು ಯತ್ನಿಸಿದಳಾದರೂ ಯಶಸ್ಸು ಕೈಗೂಡಲಿಲ್ಲ. ಕೊನೆಗೆ ಐದು ವರ್ಷಗಳ ನಂತರ ಐಟಂ ಸಾಂಗ್ ಮೂಲಕ ಅಭಿಮಾನಿಗಳಿಗೆ ತಮ್ಮ ದೇಹಸಿರಿ ಉಣಿಸಲು ಬಂದಿದ್ದಾಳೆ. ಐಟಂ ಸಾಂಗ್ ಮಸ್ತ್ ಮಜವಾಗಿದೆ ಎನ್ನುತ್ತಿದೆ ಟಾಲಿವುಡ್! 

'ಅಮ್ಮ ನಾನ ಊರೆಳಿತೇ?' ಎಂಬ ತೆಲುಗು ಚಿತ್ರದಲ್ಲಿ ಸೋನಿಯಾ ಅಗರವಾಲ್ ಭರ್ಜರಿಯಾಗಿ ಕುಣಿದಿದ್ದಾರೆ ಎನ್ನುತ್ತಿದೆ ತೆಲುಗು ಚಿತ್ರೋದ್ಯಮ. ಚಿತ್ರದಲ್ಲಿ ಸೋನಿಯಾ ಅಗರವಾಲ್ ಐಟಂ ಸಾಂಗೇ ಸ್ಟಾರ್ ಅಟ್ರಾಕ್ಷನ್!

ಸುಜಾತಾ ಆರ್ಟ್ಸ್ ಸಂಸ್ಥೆಯವರು ಐಟಂ ಸಾಂಗಿಗಾಗಿ ಸೋನಿಯಾಗೆ ಭಾರಿ ಮೊತ್ತವನ್ನೇ ಸಂದಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಐಟಂ ಸಾಂಗ್ ಅವತಾರದಲ್ಲಿ ಸೋನಿಯಾಳನ್ನು ಪ್ರೇಕ್ಷಕ ಪ್ರಭುಗಳು ಮತ್ತೆ ಅಪ್ಪಿಕೊಂಡು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

English summary
South superstar Sonia Agarwal does item song in Amma Nanna Oorelithe, a telugu movie. Now, it is to be seen whether her item dance avatar will be successful or not.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada