twitter
    For Quick Alerts
    ALLOW NOTIFICATIONS  
    For Daily Alerts

    ಹೈದರಾಬಾದ್ ಯುವತಿ ಅತ್ಯಾಚಾರ: ಈ ಸಿನಿಮಾ ಯಾಕೆ ನಮಗೆ ಮಾದರಿಯಾಗಬಾರದು?

    |

    ಹೈದ್ರಾಬಾದ್ ಮೂಲದ ಪಶು ವೈದ್ಯೆ ಮೇಲೆ ಅತ್ಯಾಚಾರ ಎಸೆಗಿ ಜೀವಂತವಾಗಿ ಬೆಂಕಿಯಿಂದ ಸುಟ್ಟು ಹಾಕಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು, ತ್ವರಿತ ನ್ಯಾಯ ಸಿಗಬೇಕು ಎಂಬ ಕೂಗು ಸದ್ದು ಮಾಡುತ್ತಿದೆ. ಆದರೆ, ಭಾರತೀಯ ಕಾನೂನಿನಲ್ಲಿ ಇದು ಸಾಧ್ಯನಾ ಎಂಬ ಪ್ರಶ್ನೆಯೂ ಮೂಡುತ್ತೆ. ಇತ್ತೀಚೆಗೆ ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಮಾದರಿಯೊಂದನ್ನು ತೆಲಗು ಸಿನೆಮಾದಿಂದ ಎತ್ತಿಕೊಳ್ಳಲಾಗಿತ್ತು. ಆದರೆ ಅತ್ಯಾಚಾರದಂತಹ ಹೀನ ಅಪರಾಧಗಳ ವಿಚಾರಗಳು ಬಂದಾಗ ಯಾಕೆ ನಾವು ಬೆಳ್ಳಿ ಪರದೆಯ ಸಂದೇಶಗಳತ್ತ ನೋಡುವುದಿಲ್ಲ?

    2015ರಲ್ಲಿ ವರ್ಷಕ್ಕೆ 34 ಸಾವಿರ ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ. 2019ರಲ್ಲಿ ಅದಕ್ಕಿಂತ ಹೆಚ್ಚು ಎಂದು ಹೇಳಲಾಗುತ್ತಿದೆ. ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ಈಗಲೂ ಜನಸಾಮಾನ್ಯರನ್ನು ಕಾಡುತ್ತೆ. ಇಡೀ ದೇಶವೇ ಬೆಚ್ಚಿಬೀಳಿಸಿದ್ದ ಪ್ರಕರಣ ಇದು. ಇಂತಹ ಪ್ರಕರಣಗಳು ಈಗ ಪದೇ ಪದೇ ನಡೆಯುತ್ತಿರುವುದು ದುರಂತ.

    ವೈದ್ಯೆ ಅತ್ಯಾಚಾರ: ಆರೋಪಿಗಳ ಪರವಾಗಿ ವಾದಿಸದಿರಲು ವಕೀಲರ ನಿರ್ಧಾರ

    ತಾವೇ ಅತ್ಯಾಚಾರ ಮಾಡಿದ್ದು ಎಂದು ತಪ್ಪು ಒಪ್ಪಿಕೊಂಡಿದ್ದರೂ ಅವರನ್ನು ಜೈಲಿನಲ್ಲಿಟ್ಟು ಸಾಕಲಾಗುತ್ತಿದೆ. ಕೆಲವರು ಜಾಮೀನು ಪಡೆದು ರಾಜಾರೋಷವಾಗಿ ಹೊರಗಿದ್ದಾರೆ. ಈ ಕಡೆ ನಿರ್ಭಯಾ, ಹೈದ್ರಾಬಾದ್ ಪಶು ವೈದ್ಯೆ ಅಂತಹ ಹೆಣ್ಣು ಮಕ್ಕಳ ಮೇಲೆ ಪದೇ ಪದೇ ಅತ್ಯಾಚಾರವಾಗುತ್ತಲೇ ಇದೆ. ಇಂತಹ ಘಟನೆಗಳು ಆದಾಗ ಜನಸಾಮಾನ್ಯರು ಕ್ಯಾಂಡಲ್ ಹಚ್ಚಿ ಪ್ರತಿಭಟನೆ ಮಾಡುವುದೊಂದೆ ಮಾರ್ಗ ಎನ್ನುವಂತಾಗಿದೆ.

    ಇದನ್ನೆಲ್ಲಾ ಗಮನಿಸದಾಗ, ಇಲ್ಲೊಂದು ಸಿನಿಮಾದ ಕ್ಲೈಮ್ಯಾಕ್ಸ್ ನೆನಪಾಗುತ್ತೆ. ಚಿತ್ರದ ಅಂತ್ಯದಲ್ಲಿ ಅತ್ಯಾಚಾರಿಗಳಿಗೆ ಕೋರ್ಟ್ ನೀಡುವ ಶಿಕ್ಷೆ 'ಐತಿಹಾಸಿಕ' ಎನಿಸಿಕೊಳ್ಳುತ್ತೆ. ಇಂತಹ ತೀರ್ಪು ಬಂದರೆ ಬಹುಶಃ ಈ ಅತ್ಯಾಚಾರಿಗಳಿಗೆ ಪಾಠ ಕಲಿಸಬಹುದು! ಯಾವುದು ಆ ಸಿನಿಮಾ? ಏನು ಆ ಕ್ಲೈಮ್ಯಾಕ್ಸ್? ಮುಂದೆ ಓದಿ....

    ಅತ್ಯಾಚಾರ ಪ್ರಕರಣದ ಸುತ್ತಾ 'ಟೆಂಪರ್'

    ಅತ್ಯಾಚಾರ ಪ್ರಕರಣದ ಸುತ್ತಾ 'ಟೆಂಪರ್'

    ಜೂನಿಯರ್ ಎನ್ ಟಿ ಆರ್ ಅಭಿನಯದ ಟೆಂಪರ್ ಸಿನಿಮಾ 2015ರಲ್ಲಿ ರಿಲೀಸ್ ಆಗಿತ್ತು. ಯುವತಿಯೊಬ್ಬಳ ಮೇಲೆ ನಾಲ್ಕು ಜನ ಸಾಮೂಹಿಕ ಅತ್ಯಾಚಾರ ಎಸೆಗಿರುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ 'ಸಿಡಿ'ಯೊಂದು ಸಿಕ್ಕಿರುತ್ತೆ. ಅದನ್ನು ಕೋರ್ಟ್ನಲ್ಲಿ ಸಲ್ಲಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವುದು ನಾಯಕನ ಕರ್ತವ್ಯ. ಆದರೆ, ಅಲ್ಲಿ ಹೀರೋ ಅಂದುಕೊಂಡಂತೆ ಆಗಲ್ಲ. ಆರೋಪಿಗಳ ವಿರುದ್ಧ ಸಾಕ್ಷಿಯಾಗಿ ಸಿಕ್ಕಿದ್ದ 'ಸಿಡಿ' ಆರೋಪಿಗಳ ಕೈ ಸೇರುತ್ತೆ. ಬಳಿಕ, ಆತಂಕಕ್ಕೆ ಒಳಗಾಗುವ ನಾಯಕ ಈ ಪ್ರಕರಣದಿಂದ ಆ ಆರೋಪಿಗಳು ಯಾವುದೇ ವಿಧದಲ್ಲೂ ಬಚಾವ್ ಆಗಲೇಬಾರದು ಎಂದು ತನ್ನ ಪ್ರಾಣವನ್ನೇ ಒತ್ತೆ ಇಡುತ್ತಾನೆ.

    ಯಾರೂ ನಿರೀಕ್ಷೆ ಮಾಡದ ಟ್ವಿಸ್ಟ್

    ಯಾರೂ ನಿರೀಕ್ಷೆ ಮಾಡದ ಟ್ವಿಸ್ಟ್

    ಅತ್ಯಾಚಾರದ ಆರೋಪಿಗಳಿಗೆ ಹೇಗಾದರೂ ಶಿಕ್ಷೆ ಕೊಡಿಸಲೇಬೇಕು ಎಂಬ ಹಠಕ್ಕೆ ಬಿದ್ದ ನಾಯಕ, ಆ ಅತ್ಯಾಚಾರ ಎಸಗಿದ್ದು ನಾಲ್ಕು ಜನ ಅಲ್ಲ, ಐದು ಜನ. ಆ ಐದನೇಯವನು ನಾನೇ ಎಂದು ನ್ಯಾಯಾಧೀಶರ ಮುಂದೆ ಹೇಳುತ್ತಾನೆ. ಇದು ಸ್ವತಃ ಜಡ್ಜ್ ಗೆ ಅಚ್ಚರಿ ತರಿಸುತ್ತೆ. ನಾವು ಐದು ಜನ ಸೇರಿ ಆ ಯುವತಿಯನ್ನು ಕ್ರೂರವಾಗಿ ಹಿಂಸಿಸಿ ಅತ್ಯಾಚಾರ ಮಾಡಿದ್ವಿ, ನಾನು ತಪ್ಪು ಒಪ್ಪಿಕೊಳ್ಳುತ್ತಿದ್ದೇನೆ ಎಂದು ಪ್ರಕರಣಕ್ಕೆ ತಿರುವು ಕೊಡ್ತಾನೆ. ತಲೆ ಉಪಯೋಗಿಸುವ ನಾಯಕ ಐತಿಹಾಸಿಕ ತೀರ್ಪಿಗೆ ನಾಂದಿ ಹಾಡ್ತಾರೆ?

    ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?

    ವಾಸ್ತವವನ್ನು ಅಣುಕಿಸುವ ನಾಯಕ

    ವಾಸ್ತವವನ್ನು ಅಣುಕಿಸುವ ನಾಯಕ

    ಈ ವೇಳೆ ಇಷ್ಟು ತಪ್ಪು ಮಾಡಿದ್ರೂ ನಿಮಗೆ ಭಯವಿಲ್ಲವೇ ಎಂದು ನ್ಯಾಯಾಧೀಶರು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ನಾಯಕ ''ನಾವೇಕೆ ಭಯ ಪಡಬೇಕು ಸಾರ್, ಅಬ್ಬಾಬ್ಬ ಅಂದ್ರೆ ಜೀವಾವಧಿ ಶಿಕ್ಷೆ ಕೊಡ್ತೀರಾ. ಈ ಕೋರ್ಟ್ ಇಲ್ಲ ಅಂದ್ರೆ ಇನ್ನೊಂದು ಕೋರ್ಟ್. ನೂರು ಸೆಕ್ಷನ್ ಗಳಿವೆ ಅದರಿಂದ ನಾವು ಹೊರಗೆ ಬರ್ತೀವಿ ಸಾರ್'' ಎಂದು ಧೈರ್ಯವಾಗಿ ಹೇಳುತ್ತಾರೆ. ಇದು ಸಹಜವಾಗಿ ದೇಶದ ಕಾನೂನನ್ನು ಪ್ರಶ್ನಿಸುವಂತಿದೆ.

    ನಿಮಗೆ ಈಗಲೇ ಶಿಕ್ಷೆ ಕೊಡುವ ತಾಕತ್ ಇದ್ಯಾ?

    ನಿಮಗೆ ಈಗಲೇ ಶಿಕ್ಷೆ ಕೊಡುವ ತಾಕತ್ ಇದ್ಯಾ?

    ''ನಾನು ಒಂದು ಹುಡುಗಿಯನ್ನು ನೋಡಿದ ತಕ್ಷಣ ರೇಪ್ ಮಾಡುವ ಧೈರ್ಯ ಇದೆ. ನಿಮಗೆ ಈಗಲೇ ಶಿಕ್ಷೆ ಕೊಡುವ ತಾಕತ್ ಇದ್ಯಾ? ತಪ್ಪು ಮಾಡಿದ್ದೇವೆ ಎಂದು ನಾವೇ ಒಪ್ಪುಕೊಳ್ಳುತ್ತಿದ್ದೇವೆ. ಎರಡು ದಿನದಲ್ಲಿ ಗಲ್ಲಿಗೇರಿಸೋಕೆ ಆಗುತ್ತಾ'' ಎಂದು ಪ್ರಶ್ನಿಸುತ್ತಾನೆ. ''ಭಾರತ ದೇಶದಲ್ಲಿ ಈ ರೀತಿ ಯಾವತ್ತು ಆಗಿಲ್ಲ. ಎರಡು ದಿನದಲ್ಲಿ ಗಲ್ಲಿಗೇರಿಸುವುದು ಹೇಗೆ ಎಂದು ನೀವೇ ಹೇಳ್ತೀರಾ'' ಎಂದು ವಾಸ್ತವ ಬಗ್ಗೆ ನಾಯಕ ಪ್ರಸ್ತಾಪಿಸುತ್ತಾನೆ.

    ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್?

    24 ಗಂಟೆಯಲ್ಲಿ ಗಲ್ಲಿಗೇರಿಸುವ ಧಮ್ ಇದ್ಯಾ?

    24 ಗಂಟೆಯಲ್ಲಿ ಗಲ್ಲಿಗೇರಿಸುವ ಧಮ್ ಇದ್ಯಾ?

    ''ಭಾರತ ದೇಶ ಅಂದ್ರೆ ಅದಕ್ಕೆ ಎಲ್ಲರಿಗೂ ಇಷ್ಟ. ಯಾಕಂದ್ರೆ ಇಲ್ಲಿ ಅಷ್ಟು ಸ್ವತಂತ್ರ ಇದೆ. ಗಲ್ಲು ಶಿಕ್ಷೆ ಆದವರು ತುಂಬ ಜನ ಇದ್ದಾರೆ. ಸಂಕ್ರಾಂತಿ ಹಬ್ಬಕ್ಕೋ, ಯುಗಾದಿ ಹಬ್ಬಕ್ಕೋ ಒಬ್ಬರನ್ನು ನೇಣಿಗೆ ಹಾಕಲಾಗುತ್ತೆ. ಹೀಗೆ, ವರ್ಷಕ್ಕೆ ಇಬ್ಬರನ್ನು ಗಲ್ಲಿಗೇರಿಸುತ್ತಿದ್ದರೇ ಎಷ್ಟು ಜನ ಸಂಧ್ಯಾ ಎಷ್ಟು ದೀಪ್ತಿಗಳು ಸಾರ್,,,,ನಾವು ಬಹಿರಂಗವಾಗಿ ತಪ್ಪು ಒಪ್ಪಿಕೊಳ್ಳುತ್ತಿದ್ದೇವೆ. ನಿಮಗೆ 24 ಗಂಟೆಯೊಳಗೆ ನಮಗೆ ಗಲ್ಲಿಗೇರಿಸುವ ಧಮ್ ಇದ್ಯಾ?'' ಎಂದು ನ್ಯಾಯಾಧೀಶರಿಗೆ ಸವಾಲು ಎಸೆಯುತ್ತಾನೆ.

    ಐತಿಹಾಸಿಕ ತೀರ್ಪು?

    ಐತಿಹಾಸಿಕ ತೀರ್ಪು?

    ನಾಯಕನ ಈ ಮಾತುಗಳನ್ನು ಕೇಳಿದ ನ್ಯಾಯಾಧೀಶರು ಇಂತಹ ಆರೋಪಿಗಳು ಕ್ಷಣ ಮಾತ್ರವೂ ಭೂಮಿ ಮೇಲೆ ಬದುಕಲು ಅರ್ಹರಲ್ಲ. ಮುಂದಿನ 24 ಗಂಟೆಯೊಳಗೆ ಈ ಐದು ಜನರನ್ನು ಗಲ್ಲಿಗೇರಿಸಿ ಎಂದು ತೀರ್ಪು ನೀಡಲಾಗುತ್ತೆ. ನ್ಯಾಯಾಧೀಶರ ನೀಡಿದ ಈ ತೀರ್ಪುನ್ನು ಐತಿಹಾಸಿಕ ತೀರ್ಪು ಎಂದು ಜನ ಬೆಂಬಲ ಕೊಡ್ತಾರೆ. ಕೋರ್ಟ್ ತೀರ್ಮಾನದಂತೆ ಐದು ಜನರಿಗೂ ಗಲ್ಲು ಶಿಕ್ಷೆ ಆಗುತ್ತೆ. ಕೊನೆ ಗಳಿಗೆಯಲ್ಲಿ ನಾಯಕ ಈ ಪ್ರಕರಣದಿಂದ ಎಸ್ಕೇಪ್ ಆಗ್ತಾನೆ. ಅದು ಬೇರೆ ವಿಚಾರ ಬಿಡಿ. (ಆದರೆ, ಇದೇ ಚಿತ್ರವನ್ನು ತಮಿಳಿನಲ್ಲಿ ವಿಶಾಲ್ 'ಅಯೋಗ್ಯ' ಎಂದು ಮಾಡಿದ್ದಾರೆ. ಅಲ್ಲಿ ನಾಯಕ ಕೂಡ ನೇಣು ಕಂಬ ಏರುತ್ತಾನೆ).

    ಇಂತಹ ಶಿಕ್ಷೆ ಬೇಕು ಅಲ್ಲವೇ?

    ಇಂತಹ ಶಿಕ್ಷೆ ಬೇಕು ಅಲ್ಲವೇ?

    ನಿಜ ಜೀವನದಲ್ಲಿ ಇದೆಲ್ಲವೂ ಸಾಧ್ಯವಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಯಾಕಂದ್ರೆ ಇದು ಸಿನಿಮಾ. ಆದರೂ ಈ ಚಿತ್ರದಲ್ಲಿ ಪ್ರಸ್ತಾಪಿಸಿರುವ ಕೆಲವು ವಿಷ್ಯವನ್ನು ಗಂಭೀರವಾಗಿ ಪರಿಗಣಿಸಬಹುದು. ಆರೋಪಿಗಳು ಇವರೇ, ಅತ್ಯಾಚಾರ ಮಾಡಿದ್ದು ಇವರೇ ಎಂದು ಒಪ್ಪಿಕೊಂಡ ಮೇಲೂ ಅಥವಾ ಸಾಕ್ಷ್ಯಾಧಾರ ಸಿಕ್ಕಿದ ಮೇಲೂ ಶಿಕ್ಷೆ ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುವುದು ಈ ಚಿತ್ರದ ಸಾರಾಂಶ. ಕ್ರೂರ ಅಪರಾಧ ಸಾಬೀತು ಆದ್ಮೇಲೆ ಶಿಕ್ಷೆಯೂ ತಕ್ಷಣವೇ ಆದರೆ ಇತರರಿಗೆ ಆ ತಪ್ಪು ಮಾಡದಂತೆ ಭಯ ಹುಟ್ಟುತ್ತೆ ಅಲ್ವಾ? ಅತ್ಯಾಚಾರ ಮಾಡಿದ ಆರೋಪಿಗಳಿಗೆ 24 ಗಂಟೆಯಲ್ಲಿ ಗಲ್ಲು ಶಿಕ್ಷೆ ಎಂದು ಕೋರ್ಟ್ ತೀರ್ಪು ನೀಡಬಹುದೇ? ಇಂತಹ ತೀರ್ಪು ಭಾರತೀಯ ಕಾನೂನಿನಲ್ಲಿ ಇದ್ಯಾ? ಇಂತಹ ತೀರ್ಪಿನಿಂದ ಇಂತಹ ಅತ್ಯಾಚಾರಗಳು ತಡೆಯಬಹುದೇ? ಪಶು ವೈದ್ಯೆ ಕೇಸ್ ನಲ್ಲಿ ಏನಾಗುತ್ತೆ? ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ...

    English summary
    Telugu super hit movie Temper climax scene remembers after hyderabad docter rape and murder incident.
    Saturday, November 30, 2019, 14:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X