twitter
    For Quick Alerts
    ALLOW NOTIFICATIONS  
    For Daily Alerts

    ಪ್ಯಾನ್ ಇಂಡಿಯಾಗೆ ತಲುಪುತ್ತಿದ್ದಾರೆ ಹಾಸ್ಯ ನಟ ಟೆನ್ನಿಸ್ ಕೃಷ್ಣ

    |

    'ಮಾರಮ್ಮನ್ ಡಿಸ್ಕೂ...' ನಟ ಟೆನ್ನಿಸ್ ಕೃಷ್ಣ ಅವರ ಸಿಗ್ನೇಚರ್ ಡೈಲಾಗ್. ಅದೆಷ್ಟೋ ಸಿನಿಮಾಗಳಲ್ಲಿ ಈ ಡೈಲಾಗ್ ಹೊಡೆದು ನಗಿಸುತ್ತಿದ್ದ ಟೆನ್ನಿಸ್ ಕೃಷ್ಣ ಈಗ ಹೊಸ ಅವತಾರದಲ್ಲಿ ಬರುತ್ತಿದ್ದಾರೆ.

    ಇಂದಿನ ಟ್ರೆಂಡ್ ಗೆ ತಕ್ಕ ಹಾಗೆ ಬದಲಾಗಿರುವ ಅವರು ಮೊದಲ ಬಾರಿಗೆ ಒಂದು ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಹೆಚ್ಚಾಗುತ್ತಿರುವ ಸಮಯದಲ್ಲಿ ಈಗ ಪ್ಯಾನ್ ಇಂಡಿಯಾ ಆಲ್ಬಂ ಹಾಡು ಕನ್ನಡದಲ್ಲಿ ನಿರ್ಮಾಣ ಆಗುತ್ತಿದೆ.

    'ಕೆಜಿಎಫ್'ನಿಂದ ಸಿನಿಮಾದಿಂದ ಕನ್ನಡ ಚಿತ್ರದ ಮಾರುಕಟ್ಟೆ ಜಾಸ್ತಿಯಾಗಿದ್ದು, ಈ ಹಾಡಿನಿಂದ ಕನ್ನಡ ಮ್ಯೂಸಿಕ್ ಆಲ್ಬಂ ಮಾರುಕಟ್ಟೆಯನ್ನು ಹೆಚ್ಚು ಮಾಡುವ ಉದ್ದೇಶ ಇದೆಯಂತೆ.

    ಟೆನ್ನಿಸ್ ಕೃಷ್ಣ ವೃತ್ತಿ ಬದುಕನ್ನ ಬದಲಿಸಿದ 'ವೀಕೆಂಡ್ ವಿತ್ ರಮೇಶ್'.!ಟೆನ್ನಿಸ್ ಕೃಷ್ಣ ವೃತ್ತಿ ಬದುಕನ್ನ ಬದಲಿಸಿದ 'ವೀಕೆಂಡ್ ವಿತ್ ರಮೇಶ್'.!

    ಈಗಾಗಲೇ 22 ಆಲ್ಬಂ ಹಾಡುಗಳನ್ನು ಮಾಡಿರುವ ಆಲ್ ಓಕೆ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕನ್ನಡದ ಶ್ರೇಷ್ಟ ಹಾಸ್ಯ ನಟನನ್ನು ಈ ಹಾಡಿನ ಮೂಲಕ ರೀ ಲಾಂಚ್ ಮಾಡುತ್ತಿದ್ದಾರೆ. ಹಾಡಿನ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಆಲ್ ಓಕೆ ವಿವರ ನೀಡಿದ್ದಾರೆ.

    'ಮಾರಮ್ಮನ್ ಡಿಸ್ಕೋ' (MD) ಎಂದ ಟೆನ್ನಿಸ್ ಕೃಷ್ಣ

    'ಮಾರಮ್ಮನ್ ಡಿಸ್ಕೋ' (MD) ಎಂದ ಟೆನ್ನಿಸ್ ಕೃಷ್ಣ

    'ಮಾರಮ್ಮನ್ ಡಿಸ್ಕೋ' ಆಲ್ಬಂ ಹಾಡಿನಲ್ಲಿ ಟೆನ್ನಿಸ್ ಕೃಷ್ಣ ನಟಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಟೆನ್ನಿಸ್ ಕೃಷ್ಣ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಇದೇ ತಿಂಗಳ ಕೊನೆಯಲ್ಲಿ ಹಾಡು ಹೊರಬರುತ್ತಿದೆ. ಆಯಾ ಭಾಷೆಯ ಹಾಡನ್ನು ಅಲ್ಲಿಯ ಸ್ಟಾರ್ ಗಳಿಂದ ರಿಲೀಸ್ ಮಾಡಿಸುವ ಪ್ಲಾನ್ ಇದೆ.

    ಆಯಾ ಭಾಷೆಗೆ ತಕ್ಕ ಕಲಾವಿದರು

    ಆಯಾ ಭಾಷೆಗೆ ತಕ್ಕ ಕಲಾವಿದರು

    ಈ ಹಾಡಿನ ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣ, ಗಾಯನ ಎಲ್ಲವನ್ನು ಆಲ್ ಓಕೆ ಮಾಡುತ್ತಿದ್ದಾರೆ. ಟೆನ್ನಿಸ್ ಕೃಷ್ಣ ಸೇರಿದಂತೆ ಕೆಲವು ನಟರು ಹಾಡಿನಲ್ಲಿ ಗೆಸ್ಟ್ ಅಪಿಯರೆನ್ಸ್ ಇರಲಿದೆ. ಆಯಾ ಭಾಷೆಗೆ ತಕ್ಕ ಕಲಾವಿದರು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೇರೆ ಭಾಷೆಯವರೂ ನಮ್ಮ ಹಾಡನ್ನು ಕೇಳುವ ಹಾಗೆ ಈ ಹಾಡು ಮಾಡಲಿದ್ದು, ಕನ್ನಡಿಗರು ಹೆಮ್ಮೆ ಪಡುವ ಹಾಡಾಗಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ ಆಲ್ ಓಕೆ

    ಟ್ರೆಂಡ್ ಆಯ್ತು 'RCB' ಅಭಿಮಾನಿಗಳಿಗೆ ಜೋಶ್ ಕೊಟ್ಟ ಹಾಡುಟ್ರೆಂಡ್ ಆಯ್ತು 'RCB' ಅಭಿಮಾನಿಗಳಿಗೆ ಜೋಶ್ ಕೊಟ್ಟ ಹಾಡು

    'ಡಿಸ್ಕೋ ಕೃಷ್ಣ' ಆಗಿ ರೀ ಲಾಂಚ್

    'ಡಿಸ್ಕೋ ಕೃಷ್ಣ' ಆಗಿ ರೀ ಲಾಂಚ್

    ಟೆನ್ನಿಸ್ ಕೃಷ್ಣ ಹಾಡಿನ ಮೂಲಕ 'ಡಿಸ್ಕೋ ಕೃಷ್ಣ' ಅವತಾರದಲ್ಲಿ ರೀ ಲಾಂಚ್ ಆಗಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್ ಲುಕ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 50 ವರ್ಷ ತುಂಬಿದ ಒಬ್ಬ ವ್ಯಕ್ತಿ ತನ್ನ ಮಾನಸಿಕ ಒತ್ತಡಗಳನ್ನೆಲ್ಲ ಸಹಿಸಿಕೊಂಡು ಈ ಹಾಡು ಹಾಡುತ್ತಾನೆ. ಹೀಗಾಗಿ, ಈ ಹಾಡು ನೋವಿನಲ್ಲಿರುವ, ಬೇಜಾರಿನಲ್ಲಿ ಇರುವವರಿಗೆ ಜೋಷ್ ನೀಡಲಿದೆಯಂತೆ.

    ಹಾಡಿನ ಉದ್ದೇಶ ಏನು?

    ಹಾಡಿನ ಉದ್ದೇಶ ಏನು?

    ತುಂಬ ಜನ ಪಾರ್ಟಿ ಮಾಡಲು ಕ್ಲಬ್ ಗೆ ಹೋಗಬೇಕು, ದುಡ್ಡು ಇರಬೇಕು, ಡ್ರಿಕ್ಸ್, ಹುಡುಗಿಯರು ಇರಬೇಕು ಎಂದುಕೊಳ್ಳುತ್ತಾರೆ. ಅದೆಲ್ಲ ಅಲ್ಲ. ಕುಣಿಯಲು, ಖುಷಿಯಾಗಿ ಇರಲು ನಶೆ ಬೇಕಾಗಿಲ್ಲ. ಗಣೇಶ ಕೂರಿಸಿದಾಗ ಮನ ಮಂದಿ ಕುಣಿಯುತ್ತಾರೆ. ಎಲ್ಲಿಬೇಕಾದರೂ ಮನಸ್ಸು ಪೂರ್ತಿಯಾಗಿ ಡ್ಯಾನ್ಸ್ ಮಾಡುವುದು ಮಾರಮ್ಮನ್ ಡಿಸ್ಕೋ.

    ಪುನೀತ್ ಗೆ ಸಿಕ್ಕಾಪಟ್ಟೆ ಇಷ್ಟವಾದ ಈ 'Rap' ಸಾಂಗ್ ಯಾವುದು?ಪುನೀತ್ ಗೆ ಸಿಕ್ಕಾಪಟ್ಟೆ ಇಷ್ಟವಾದ ಈ 'Rap' ಸಾಂಗ್ ಯಾವುದು?

    ದೊಡ್ಡ ಬಜೆಟ್ ನಲ್ಲಿ ಹಾಡು ನಿರ್ಮಾಣ

    ದೊಡ್ಡ ಬಜೆಟ್ ನಲ್ಲಿ ಹಾಡು ನಿರ್ಮಾಣ

    ನಾಲ್ಕು ವರ್ಷದ ಹಿಂದೆ ಈ ಹಾಡು ಬರೆದಿದ್ದ ಆಲ್ ಓಕೆ ಹಾಡಿಗೆ ಟೆನ್ನಿಸ್ ಕೃಷ್ಣ ಅವರೇ ಸರಿ ಎಂದು ಈ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಟೆನ್ನಿಸ್ ಕೃಷ್ಣ ಕೂಡ ಖುಷಿಯಿಂದ ಹಾಡಿನಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ, 50% ಭಾಗ ಚಿತ್ರೀಕರಣ ಮುಗಿದಿದ್ದು, ದೊಡ್ಡ ಬಜೆಟ್ ನಲ್ಲಿ ಹಾಡಿನ ನಿರ್ಮಾಣ ಮಾಡಲಾಗಿದೆಯಂತೆ. ಕನ್ನಡದಲ್ಲಿ ಆಲ್ಬಂ ಹಾಡುಗಳಿಗೆ ಒಳ್ಳೆಯ ಬೇಡಿಕೆ ಬಂದಿದ್ದು, ಈ ಹಾಡು ದೊಡ್ಡ ಮಟ್ಟದಲ್ಲಿ ಇರಲಿದೆ ಎಂದರು ಆಲ್ ಓಕೆ.

    English summary
    Tennis Krishna's first rap song Maramman Disco poster out.
    Thursday, September 5, 2019, 12:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X