twitter
    For Quick Alerts
    ALLOW NOTIFICATIONS  
    For Daily Alerts

    10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ದತೆ

    By Bharath Kumar
    |

    Recommended Video

    10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ದತೆ | Filmibeat Kannada

    ಫೆಬ್ರವರಿ 22ರಿಂದ ಆರಂಭವಾಗಲಿರುವ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಚಿತ್ರರಂಗ ಸಕಲ ರೀತಿಯಲ್ಲಿ ಸಜ್ಜಾಗಿದೆ.

    ಫೆಬ್ರವರಿ 22 ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಚಲನಚಿತ್ರೊತ್ಸವದ ಉದ್ಘಾಟನೆ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ, ಅಂತರಾಷ್ಟ್ರೀಯ ಚಲನಚಿತ್ರಗಳ ಪ್ರತಿನಿಧಿಗಳು, ನಿರ್ಮಾಪಕರು ಭಾಗಿಯಾಗಲಿದ್ದಾರೆ. ಮಾರ್ಚ್ 1 ರಂದು ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಆ ದಿನ ರಾಜ್ಯಪಾಲ ವಜುಬಾಯ್ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ಇನ್ನು ಚಲನಚಿತ್ರೋತ್ಸವ ಕುರಿತು ವಿವರ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು ''60 ವಿವಿಧ ದೇಶಗಳ ಸುಮಾರು 200 ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ. ಚಿತ್ರೋತ್ಸವದಲ್ಲಿ ಏಷ್ಯನ್‌ ಸಿನಿಮಾಗಳ ವಿಭಾಗದಲ್ಲಿ 13 ಚಿತ್ರಗಳು, ಇಂಡಿಯನ್‌ ಸಿನಿಮಾ ವಿಭಾಗದಲ್ಲಿ 14 ಚಿತ್ರಗಳು, ಕನ್ನಡ ಸಿನಿಮಾ ವಿಭಾಗದಲ್ಲಿ ತುಳು ಭಾಷೆಯ ಚಿತ್ರ ಸೇರಿ 12 ಚಿತ್ರಗಳು ಮತ್ತು ಕನ್ನಡ ಮನರಂಜನೆ ಚಿತ್ರ ವಿಭಾಗದಲ್ಲಿ 8 ಚಿತ್ರಗಳು ಪ್ರದರ್ಶನವಾಗಲಿವೆ.

    ರಾಜಾಜಿನಗರದಲ್ಲಿರುವ ಒರಾಯನ್‌ ಮಾಲ್‌ನಲ್ಲಿರುವ 11 ಪರದೆಗಳು ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ.ರಾಜ್‌ಭವನದಲ್ಲಿ ವಿಐಪಿ ಪ್ರತಿನಿಧಿಗಳಿಗೆ ಚಲನಚಿತ್ರಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮತ್ತು ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಮಾತ್ರ ಒಂದು ಸ್ಕ್ರೀನ್ ನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

    10ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭರ್ಜರಿ ತಯಾರಿ10ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭರ್ಜರಿ ತಯಾರಿ

    Tenth Bengaluru International Film Festival Starts from february 22nd

    ಅಗಲಿದ ಚಿತ್ರರಂಗದ ಗಣ್ಯರಾದ ಪಾರ್ವತಮ್ಮ ರಾಜಕುಮಾರ್‌, ಆರ್‌.ಎನ್‌.ಸುದರ್ಶನ್‌, ಕಾಶಿನಾಥ್, ಬಿ.ವಿ.ರಾಧಾ, ಕೃಷ್ಣಕುಮಾರಿ ಮತ್ತು ಶಶಿಕಪೂರ್ ಅವರ ಚಿತ್ರ ಶ್ರದ್ಧಾಂಜಲಿಯೂ ನಡೆಯಲಿದೆ. ಸಂಸ್ಕಾರಚಿತ್ರಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕ್ಲಾಸಿಕ್‌ ಸಿನಿಮಾ ನೆನಪು ವಿಭಾಗದಲ್ಲಿ ಚಿತ್ರದ ಬಗ್ಗೆ ಮಾತುಕತೆ ನಡೆಯಲಿದೆ.

    ಈ ಸಲ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಶಯ ಇರುವ ಸಾಕ್ಷ್ಯಚಿತ್ರಗಳ ವಿಭಾಗಳಿವೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಹೆಸರಾಗಿರುವ ರೀನಾ ಮೋಹನ್‌, ಛಾಯಾಗ್ರಾಹಕ ಜಿ.ಎಸ್‌.ಭಾಸ್ಕರ್‌ ಹಾಗು ವಿನೋದ್‌ರಾಜ್‌ ಭಾಗವಹಿಸುತ್ತಿದ್ದಾರೆ. ಚಲಂಬೆನ್ನೂರ್ ಕರ್‌ ಮತ್ತು ಗೌರಿಲಂಕೇಶ್ ಅವರ ವಿಶೇಷ ಸ್ಮರಣೆಯೂ ಇರಲಿದೆ. ಇವೆಲ್ಲದರೊಂದಿಗೆ ವಿಶೇಷ ಉಪನ್ಯಾಸ, ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.

    10ನೇ ಬೆಂಗಳೂರು ಚಲನಚಿತ್ರೋತ್ಸದ ಲಾಂಛನ ಬಿಡುಗಡೆ ಮಾಡಿದ ಸಿಎಂ10ನೇ ಬೆಂಗಳೂರು ಚಲನಚಿತ್ರೋತ್ಸದ ಲಾಂಛನ ಬಿಡುಗಡೆ ಮಾಡಿದ ಸಿಎಂ

    ನೋಂದಣಿ: ನಂದಿನಿ ಬಡಾವಣೆಯಲ್ಲಿರುವ ಚಲನಚಿತ್ರ ಅಕಾಡೆಮಿ ಕಚೇರಿ, ಇನ್‌ಫೆಂಟ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕಚೇರಿ, ಕರ್ನಾಟಕ ವಾಣಿಜ್ಯ ಮಂಡಳಿ ಕಚೇರಿ, ಸುಚಿತ್ರಾ ಫಿಲಂ ಸೊಸೈಟಿ ಆವರಣಗಳಲ್ಲಿ ಚಿತ್ರೋತ್ಸವಕ್ಕೆ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅಂತರ್ಜಾಲದ ಮೂಲಕವೂ (http://biffes.in) ನೋಂದಾಯಿಸಿಕೊಳ್ಳಬಹುದು. ಪ್ರತಿನಿಧಿ ಶುಲ್ಕ ಸಾರ್ವಜನಿಕರಿಗೆ ₹ 600, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಫಿಲಂ ಸೊಸೈಟಿ ಸದಸ್ಯರಿಗೆ ₹ 300 ನಿಗದಿಪಡಿಸಲಾಗಿದೆ.

    English summary
    The tenth edition of the Bengaluru International Film Festival (BIFFES) To be held simultaneously at PVR Cinemas, Orion Mall in Rajajinagar here and INOX Cinemas in Mall of Mysuru from february 22nd.
    Saturday, February 10, 2018, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X