twitter
    For Quick Alerts
    ALLOW NOTIFICATIONS  
    For Daily Alerts

    ಟೆರಿಫ್ಲಿಕ್ಸ್: ಇಲ್ಲಿದೆ ನಿಮ್ಮ ಇಷ್ಟದವರ ಜೊತೆ ನಿಮಗೆ ಬೇಕಾದ ಸಿನಿಮಾಗಳನ್ನು ನೋಡುವ ಅವಕಾಶ

    By ಫಿಲ್ಮ್ ಡೆಸ್ಕ್
    |

    ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ನೋಡುವ ಮಜಾನೆ ಬೇರೆ. ಸ್ನೇಹಿತರ ಜೊತೆ ಕುಳಿತು, ಕೈಯಲ್ಲಿ ಪಾಪ್ ಕಾರ್ನ್ ಹಿಡಿದು, ಶಿಳ್ಳೆ, ಚಪ್ಪಾಳೆಗಳ ನಡುವೆ ಸಿನಿಮಾ ನೋಡುವ ಖುಷಿ ಮತ್ತೆಲ್ಲು ಸಿಗಲ್ಲ. ಇದೀಗ ಚಿತ್ರಮಂದಿರಗಳ ಜೊತೆಗೆ ಒಟಿಟಿ ಮೂಲಕ ಪ್ರೇಕ್ಷಕರ ಬಳಿಯೇ ಸಿನಿಮಾ ತಲುಪಿಸಲಾಗುತ್ತಿದೆ.

    ಚಿತ್ರಮಂದಿರಗಳು, ಮಲ್ಟಿ ಫೆಕ್ಸ್, ಒಟಿಟಿಗಳ ಜೊತೆಗೆ ಸಿನಿಮಾ ನೋಡಲು ಬೆಂಗಳೂರಿನಲ್ಲಿ ಮತ್ತೊಂದು ವಿಶೇಷ ವ್ಯವಸ್ಥೆ ಕೂಡ ಇದೆ. ನಿಮ್ಮ ಇಷ್ಟದ ಸಿನಿಮಾಗಳನ್ನು, ಸ್ನೇಹಿತರು, ಸಹದ್ಯೋಗಿ ಅಥವಾ ಕುಟುಂಬದವರ ಜೊತೆ ನಿಮಗೆ ಬೇಕಾದ ಸಮಯದಲ್ಲಿ ಚಿತ್ರ ನೋಡಿ ಎಂಜಾಯ್ ಮಾಡುವ ಒಂದು ವ್ಯವಸ್ಥೆಯನ್ನು ಮಾಡಲಾಗಿದೆ, ಅದೇ ಟೆರಿಫ್ಲಿಕ್ಸ್.

    ಇಲ್ಲಿ ನಿಮಗೆ ಬೇಕಾದಾಗ, ನಿಮಗೆ ಇಷ್ಟದ ಸಿನಿಮಾಗಳನ್ನು ನೋಡಬಹುದು. ಹಳೆಯ ಸಿನಿಮಾಗಳನ್ನು ಅಥವಾ ತುಂಬಾ ಇಷ್ಟದ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡಲು ಮಿಸ್ ಮಾಡಿಕೊಂಡವರು ಟೆರಿಫ್ಲಿಕ್ಸ್ ನಲ್ಲಿ ನೋಡಿ ಎಂಜಾಯ್ ಮಾಡಬಹುದು. ಟೆರಿಫ್ಲಿಕ್ಸ್ ಬೆಂಗಳೂರಿನಲ್ಲಿ ಜೆಪಿ ನಗರ ಮತ್ತು ಗಿರಿನಗರದಲ್ಲಿ ಎರಡು ಥಿಯೇಟರ್ ಗಳಿವೆ.

    Teriflix theatre: Rent a mini Teriflix theatre and watch a film of your choice

    ಇಲ್ಲಿ ಮಲ್ಟಿ ಫ್ಲೆಕ್ಸ್ ನಲ್ಲಿ ಇರುವ ಹಾಗೆ ಯಾವುದೇ ನಿಯಮಗಳಿಲ್ಲ. ನಿಮಗೆ ಬೇಕಾದ ತಿನಿಸುಗಳನ್ನು ನೀವೆ ತೆಗೆದುಕೊಂಡು ಹೋಗಬಹುದು. ಕುಟುಂಬ ಸಮೇತರಾಗಿ ಹೋಗಬಯಸುವವರು ಮೊದಲೇ ಬುಕ್ಕಿಂಗ್ ಮಾಡಿಸಬೇಕು. ಸಿನಿಮಾ ಮಾತ್ರವಲ್ಲದೆ ವೆಬ್ ಸೀರಿಸ್ ಗಳನ್ನು ನೋಡಬಹುದು. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಂ ಯಾವುದನ್ನು ಬೇಕಾದರೂ ವೀಕ್ಷಿಸಬಹುದು.

    ಅಂದಹಾಗೆ ಟೆರಿಫ್ಲೆಕ್ಸ್ ಪ್ರಾರಂಭ ಮಾಡಿದ್ದು ಪ್ರವೀಣ್ ಉಡುಪ ಮತ್ತು ಪ್ರಶಾಂತ್ ಉಡುಪ. 2017ರಲ್ಲಿ ಗಿರಿನಗರದಲ್ಲಿ ಮೊದಲು ಟೆರಿಫ್ಲಿಕ್ಸ್ ಮಿನಿ ಥಿಯೇಟರ್ ಪ್ರಾರಂಭ ಮಾಡಿದರು. 300ರಿಂದ 400 ಪ್ರದರ್ಶನಗಳು ಯಶಸ್ವಿಯಾಗಿ ನಡೆದಿದೆ ಎನ್ನಲಾಗುತ್ತಿದೆ. 16 ಸೀಟುಗಳಿರುವ ಟೆರಿಫ್ಲಕ್ಸ್ ನಲ್ಲಿ ದೊಡ್ಡ ಆರ್ಟ್ ಸಿನಿಮಾಗಳು ಸಹ ಪ್ರದರ್ಶನ ಕಂಡಿವೆ ಎನ್ನಲಾಗುತ್ತಿದೆ. ಮಿನಿ ಥಿಯೇಟರ್ ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮತ್ತೊಂದು ಟೆರಿಫ್ಲಿಕ್ಸ್ ಓಪನ್ ಮಾಡಲು ಮುಂದಾದರು.

    Recommended Video

    ತೆಲುಗಿನಲ್ಲಿ ರಾಬರ್ಟ್ ಆರ್ಭಟಕ್ಕೆ ಸಿಕ್ಕಿರುವ ಚಿತ್ರಮಂದಿರಗಳು ಎಷ್ಟು ಗೊತ್ತಾ | Darshan |Roberrt |Roberrt Telugu

    ಬಳಿಕ ಜೆಪಿ ನಗರದಲ್ಲಿ ಅತ್ಯಾಧುನಿಕ ಸೌಲಭ್ಯವಿರುವ 38 ಸೀಟುಗಳಿರುವ ಮಿನಿ ಥಿಯೇಟರ್ ಅನ್ನು ಪ್ರಾರಂಭ ಮಾಡಿದರು. ಮೊದಲು ಚಿತ್ರತಂಡ ಮತ್ತು ಸಿನಿಮಾದವರಿಗೆ ಮಾತ್ರ ಅವಕಾಶವಿತ್ತು. ಇದೀಗ ಸರ್ವಾಜನಿಕರಿಗೂ ಅವಕಾಶ ನೀಡಿರುವುದು ಚಿತ್ರಪ್ರೇಕ್ಷಕರ ಸಂತಸಕ್ಕೆ ಕಾರಣವಾಗಿದೆ.

    English summary
    Teriflix theatre: Rent a mini Teriflix mini theatre and watch a film of your choice.
    Monday, February 1, 2021, 17:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X