For Quick Alerts
  ALLOW NOTIFICATIONS  
  For Daily Alerts

  'ನಿರ್ದೇಶಕರು ಕಷ್ಟದಲ್ಲಿದ್ದಾರೆ, ಕಾಪಾಡಬೇಕಿರುವುದು ಸರ್ಕಾರದ ಹೊಣೆ'

  |

  ಕೊರೊನಾ ವೈರಸ್‌ನಿಂದ ಇಡೀ ಚಿತ್ರರಂಗ ಸಂಕಷ್ಟದಲ್ಲಿದೆ. ಸಿನಿಮಾಗೆ ಸಂಬಂಧಪಟ್ಟಂತೆ ಯಾವುದೇ ಕೆಲಸ ನಡೆಯುತ್ತಿಲ್ಲ. ಚಿತ್ರಮಂದಿರಗಳು ಬಂದ್ ಆಗಿವೆ, ರೆಕಾರ್ಡಿಂಗ್ ಸ್ಟುಡಿಯೋ, ಡಬ್ಬಿಂಗ್ ಸ್ಟುಡಿಯೋ ಮುಚ್ಚಿವೆ. ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಸಿನಿ ಕಾರ್ಮಿಕರು ಕೆಲಸ ಇಲ್ಲದೇ ಕುಳಿತಿದ್ದಾರೆ.

  ಬುಧವಾರ ಕಲಾವಿದರು ಹಾಗೂ ಕಲಾತಂಡಗಳಿಗೆ ತಲಾ ಮೂರು ಸಾವಿರ ಸರ್ಕಾರದಿಂದ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದರು. ಆದರೆ, ಈ ಪ್ಯಾಕೇಜ್‌ನಲ್ಲಿ ನಿರ್ದೇಶಕ-ತಂತ್ರಜ್ಞರಿಗೆ ಯಾವುದೇ ಸಹಾಯವಾಗಿಲ್ಲ. ಹಾಗಾಗಿ, ಕರ್ನಾಟಕ ಚಲನಚಿತ್ರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದು, ನಮ್ಮ ಸಂಘದ ಸದಸ್ಯರಿಗೆ ನೆರವು ನೀಡಿ ಎಂದು ಮನವಿ ಮಾಡಿದ್ದಾರೆ. ಮುಂದೆ ಓದಿ...

  ಸಿನಿಮೋತ್ಸವ ರದ್ದುಗೊಳಿಸಿ, ಮೀಸಲಿಟ್ಟ ಹಣ ಕಾರ್ಮಿಕರಿಗೆ ನೀಡಿ; ನಿರ್ದೇಶಕ ಮನ್ಸೋರೆಸಿನಿಮೋತ್ಸವ ರದ್ದುಗೊಳಿಸಿ, ಮೀಸಲಿಟ್ಟ ಹಣ ಕಾರ್ಮಿಕರಿಗೆ ನೀಡಿ; ನಿರ್ದೇಶಕ ಮನ್ಸೋರೆ

  ಯಾರನ್ನು ಭೇಟಿಯಾದರು ಪ್ರಯೋಜನ ಇಲ್ಲ

  ಯಾರನ್ನು ಭೇಟಿಯಾದರು ಪ್ರಯೋಜನ ಇಲ್ಲ

  'ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿದೆ, ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಜನ ಬಳಲುತ್ತಿದ್ದಾರೆ. ಕಳೆದ ವರ್ಷ ಕೊರೊನಾ ಬಂದಾಗಿನಿಂದಲೂ ಸಂಬಂಧಪಟ್ಟ ಅಧಿಕಾರಿಗಳು, ಡಿಸಿ, ಕಮಿಷನರ್ ರನ್ನ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ' ಎಂದು ನಿರ್ದೇಶಕದ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಬೇಸರ ಹೊರಹಾಕಿದ್ದಾರೆ.

  ಪ್ಯಾಕೇಜ್‌ನಲ್ಲಿ ನಮಗೆ ಏನು ಇಲ್ಲ

  ಪ್ಯಾಕೇಜ್‌ನಲ್ಲಿ ನಮಗೆ ಏನು ಇಲ್ಲ

  'ಕಳೆದ ಬಾರಿಯೂ ಯಾವುದೇ ಪ್ಯಾಕೇಜ್‌ನಲ್ಲಿ ನಮ್ಮ ವರ್ಗವನ್ನು ಪರಿಗಣಿಸಿಲ್ಲ. ಈ ಬಾರಿಯ ಪ್ಯಾಕೇಜ್‌ನಲ್ಲೂ ನಮ್ಮ ನಿರ್ದೇಶಕರನ್ನು ಹಾಗೂ ತಂತ್ರಜ್ಞರನ್ನು ಪರಿಗಣಿಸಿಲ್ಲ. ಕನ್ನಡ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ನೀವು ಕಾಪಾಡಬೇಕಾಗಿದೆ. ಇದು ಸರ್ಕಾರದ ಹೊಣೆ ಆಗಿದೆ' ಎಂದು ಟೇಶಿ ವೆಂಕಟೇಶ್ ಒತ್ತಾಯಿಸಿದ್ದಾರೆ.

  'ಕಲಾವಿದರಿಗೆ 3 ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ''ಕಲಾವಿದರಿಗೆ 3 ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ'

  10 ಸಾವಿರ ರೂಪಾಯಿ ಕೊಡಿ

  10 ಸಾವಿರ ರೂಪಾಯಿ ಕೊಡಿ

  ಈ ಕುರಿತು ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಸಿಸಿ ಪಾಟೀಲ್‌ರಿಗೆ ಪತ್ರ ಬರೆದಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ''ನಿರ್ದೇಶಕ ಸಂಘದ 1000 ಜನಕ್ಕೆ ತಲಾ 10 ಸಾವಿರ ರೂಪಾಯಿಯಂತೆ ಸಹಾಯ ಮಾಡಿ'' ಎಂದು ಆಗ್ರಹಿಸಿದ್ದಾರೆ. ಸಂಘದಲ್ಲಿ ಒಟ್ಟು 2300 ಸದಸ್ಯರಿದ್ದಾರೆ. ಅದರಲ್ಲಿ 1000 ಮಂದಿಗೆ ನೀವು ಸಹಾಯ ಮಾಡಿ ಎಂದು ಕೋರಿದ್ದಾರೆ.

  Prashanth Neel ಮತ್ತೊಂದು ಸಿನಿಮಾ ಪೋಷಣೆ | Oneindia Kannada
  ಚಿತ್ರರಂಗಕ್ಕೆ ನಮ್ಮ ಕೊಡುಗೆ ಪರಿಗಣಿಸಿ

  ಚಿತ್ರರಂಗಕ್ಕೆ ನಮ್ಮ ಕೊಡುಗೆ ಪರಿಗಣಿಸಿ

  'ಧರ್ಮ, ಸಮಾಜ, ಸಂಸ್ಕೃತಿ, ಭಾಷೆ, ಐತಿಹಾಸಿಕವಾಗಿ ಎಲ್ಲ ರೀತಿಯಲ್ಲೂ ಕನ್ನಡ ಚಿತ್ರರಂಗದ ಕೊಡುಗೆ ಅಪಾರವಾಗಿದೆ. ಈ ಕೊಡುಗೆಗಳನ್ನು ಪರಿಗಣಿಸಿ ಕನ್ನಡ ಚಿತ್ರರಂಗದ ಪರವಾಗಿ ನಿಂತುಕೊಳ್ಳಬೇಕು. ಸಹಾಯ ಹಸ್ತ ಚಾಚುವ ಮೂಲಕ ನಮ್ಮ ಜೊತೆ ನಿಲ್ಲಬೇಕು' ಎಂದು ಟೇಶಿ ವೆಂಕಟೇಶ್ ವಿನಂತಿಸಿದ್ದಾರೆ.

  English summary
  Karnataka film directors association President Teshi Venkatesh request CM yediyurappa to Announce Special package to directors, technician.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X