»   » ದರ್ಶನ್ ಗೆ ಸವಾಲು ಹಾಕಲು ಬಂದ 'ಸಿಂಗಂ 3' ವಿಲನ್

ದರ್ಶನ್ ಗೆ ಸವಾಲು ಹಾಕಲು ಬಂದ 'ಸಿಂಗಂ 3' ವಿಲನ್

Posted By:
Subscribe to Filmibeat Kannada

ನಟ ದರ್ಶನ್ ಅವರ 51ನೇ ಸಿನಿಮಾದ ಮುಹೂರ್ತ ಕೆಲ ದಿನಗಳ ಹಿಂದೆ ನಡೆದಿದೆ. ಬಿ.ಸುರೇಶ್ ಅವರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಪಿ.ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಅವರ ಹೊಸ ಸಿನಿಮಾಗೆ ಈಗ ಖಡಕ್ ವಿಲನ್ ಎಂಟ್ರಿ ಕೊಟ್ಟಿದ್ದಾರೆ.

ಕಾಲಿವುಡ್ ಹಿಟ್ ಸಿನಿಮಾವಾದ 'ಸಿಂಗಂ 3'ದಲ್ಲಿ ನಟಿಸಿದ್ದ ಖಳ ನಟ ಠಾಕೂರ್ ಅನೂಪ್ ಸಿಂಗ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ದರ್ಶನ್ ಜೊತೆಗೆ ಮೊದಲ ಬಾರಿಗೆ ಠಾಕೂರ್ ಅನೂಪ್ ಸಿಂಗ್ ತೆರೆ ಹಂಚಿಕೊಳ್ಳಲಿದ್ದಾರೆ.

ಡಿ ಬಾಸ್ ಜೊತೆ ಕಾಳಗಕ್ಕೆ ಇಳಿದ ಟಗರು ಡಾಲಿ

ಈ ಹಿಂದೆ 'ರೋಗ್' ಸಿನಿಮಾದ ಮೂಲಕ ಠಾಕೂರ್ ಅನೂಪ್ ಸಿಂಗ್ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು. ಆದರ ನಂತರ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ 'ಉದ್ಘರ್ಷ' ಚಿತ್ರಕ್ಕೆ ಅವರೇ ನಾಯಕ ಆಗಿದ್ದಾರೆ.

Thakur Anoop Singh will playing negative role in Darshan's 51th movie

ದರ್ಶನ್ ಅವರ 51ನೇ ಸಿನಿಮಾದಲ್ಲಿ ಮೂರು ಜನ ಖಳನಾಯಕರಿದ್ದಾರೆ. ನಟ ರವಿಶಂಕರ್, ಧನಂಜಯ್ ಜೊತೆಗೆ ಠಾಕೂರ್ ಅನೂಪ್ ಸಿಂಗ್ ಕೂಡ ದರ್ಶನ್ ಗೆ ಸವಾಲು ಹಾಕಿದ್ದಾರೆ. ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

English summary
'Singam 3' fame villain Thakur Anoop Singh will playing negative role in kannada actor Darshan's 51th movie. The movie is producing by Shailaja Nag and P.Kumar will be directing this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada