KGF 2 vs Beast : 'ಕೆಜಿಎಫ್ 2' Vs 'ಬೀಸ್ಟ್'; ಬಾಕ್ಸಾಫೀಸ್ ಯುದ್ಧ ಗೆಲ್ಲೋರು ಯಾರು?

'ಜೇಮ್ಸ್' ಚಿತ್ರದ ಬಳಿಕ ಕನ್ನಡದ ಮತ್ತೊಂದು ದೊಡ್ಡ ಸಿನಿಮಾ ಸದ್ದು ಮಾಡೋಕೆ ಸಜ್ಜಾಗಿದೆ. ಅದುವೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2'. ಕನ್ನಡದ ಈ ಚಿತ್ರ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಹಾಗಾಗಿ ಈ ಚಿತ್ರಕ್ಕೆ ಇಡೀ ವಿಶ್ವವೇ ಕಾಯುತ್ತಿದೆ ಅಂದರೆ ತಪ್ಪಾಗಲಾರದು.

ಏಪ್ರಿಲ್‌ನಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಹವಾ ಯಾವ ಮಟ್ಟಿಗೆ ಇದೆ ಎಂದರೆ, ಇದರ ಜೊತೆಗೆ ಬರಲು ಮತ್ಯಾವ ಚಿತ್ರವೂ ತಯಾರಿಲ್ಲ. 'ಕೆಜಿಎಫ್ 2' ಜೊತೆಗೆ ಬಾಕ್ಸಾಫೀಸ್ ಕಾಳಗ ಮಾಡಲು ಯಾರು ಧೈರ್ಯ ಮಾಡಲಿಲ್ಲ. ಹಾಗಾಗಿ ಒಂದಷ್ಟು ಸಣ್ಣ, ಪುಟ್ಟ ಸಿನಿಮಾಗಳು ಈ ಚಿತ್ರದ ಆಸು-ಪಾಸಿನಲ್ಲಿ ರಿಲೀಸ್ ಆಗುತ್ತವೆ ಎನ್ನಲಾಗಿತ್ತು.

ಆದರೆ ಈಗ 'ಕೆಜಿಎಫ್ 2' ಚಿತ್ರದ ಎದುರು ನಿಲ್ಲಲು ತಮಿಳಿನ ದೊಡ್ಡ ಚಿತ್ರವೇ ಬರುತ್ತಿದೆ. ತಮಿಳು ಸ್ಟಾರ್ ನಟ ವಿಜಯ್ ಸಿನಿಮಾ 'ಕೆಜಿಎಫ್ 2' ಜೊತೆಗೆ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಇಷ್ಟು ದಿನ ಗಾಸಿಪ್ ರೂಪದಲ್ಲಿ ಇದ್ದ ಈ ಸುದ್ದಿ ಈಗ ಅಧಿಕೃತ ಆಗಿ ಬಿಟ್ಟಿದೆ. ಸಿನಿಮಾ ನಿರ್ಮಾಣ ಸಂಸ್ಥೆಯೆ ಈ ವಿಚಾರವನ್ನು ಅಧಿಕೃತವಾಗಿ ಹೇಳಿಕೊಂಡಿದೆ.

Recommended Video

KGF 2 Vs Beast Song | ಅಷ್ಟಕ್ಕೂ KGF 2 ಹಾಡು ಎಡವಿದ್ದೆಲ್ಲಿ..?

ಏಪ್ರಿಲ್ 14ಕ್ಕೆ 'ಕೆಜಿಎಫ್ 2', ಏಪ್ರಿಲ್ 13ಕ್ಕೆ 'ಬೀಸ್ಟ್'!

ಏಪ್ರಿಲ್ 14ಕ್ಕೆ 'ಕೆಜಿಎಫ್ 2', ಏಪ್ರಿಲ್ 13ಕ್ಕೆ 'ಬೀಸ್ಟ್'!

ಕನ್ನಡದಲ್ಲಿ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ತಮಿಳು ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ 'ಬೀಸ್ಟ್' ಕೂಡ ತೆರೆಗೆ ಬರುತ್ತಿದೆ. ಆದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ಏಪ್ರಿಲ್‌ನಲ್ಲಿ ರಿಲೀಸ್ ಆಗಲಿವೆ. 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮೊದಲು, ಏಪ್ರಿಲ್ 13ಕ್ಕೆ 'ಬೀಸ್ಟ್' ರಿಲೀಸ್ ಆಗುತ್ತಿದೆ. ಹಾಗಾಗಿ ಈ ಎರಡು ಚಿತ್ರಗಳ ರಿಲೀಸ್ ನಡುವೆ ಅಷ್ಟೇನು ಅಂತರ ಇಲ್ಲ. ಆದರೂ ಕೂಡ ಹೀಗೆ ಎರಡು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಖಚಿತ.

'ಕೆಜಿಎಫ್ 2' Vs 'ಬೀಸ್ಟ್', ಬಾಕ್ಸಾಫೀಸ್ ಕಾಳಗ!

'ಕೆಜಿಎಫ್ 2' Vs 'ಬೀಸ್ಟ್', ಬಾಕ್ಸಾಫೀಸ್ ಕಾಳಗ!

'ಕೆಜಿಎಫ್ 2' ಮತ್ತು 'ಬೀಸ್ಟ್' ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದು ಎಂದರೆ ಸುಮ್ಮನೇ ಅಲ್ಲ. ಈ ಎರಡೂ ಚಿತ್ರಗಳಿಗೆ ತನ್ನದೆ ಆದ ತೂಕ ಇದೆ. ವಿಜಯ್ ಅಭಿನಯದ 'ಬೀಸ್ಟ್' ಕೂಡ ಸಾಕಷ್ಟು ನಿರೀಕ್ಷೆ ಹೊಂದಿರುವ ಸಿನಿಮಾ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನವಿದೆ. ಹಲವು ದಿನಗಳ ಬಳಿಕ ವಿಜಯ್ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇನ್ನು 'ಕೆಜಿಎಫ್ 2' ಬಗ್ಗೆ ಮಾತಾಡೋದೆ ಬೇಡ ಅಷ್ಟರ ಮಟ್ಟಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಮನೆ ಮಾಡಿದೆ. 'ಬೀಸ್ಟ್' ಸಿನಿಮಾ 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮುಂಚೆ ರಿಲೀಸ್ ಆದರೂ ಬಾಕ್ಸಾಫೀಸ್‌ನಲ್ಲಿ ಈ ಎರಡೂ ಚಿತ್ರಗಳಿಗೂ ಹೊಡೆತ ಬೀಳುವುದು ಫಿಕ್ಸ್.

'ಬೀಸ್ಟ್' ರಿಲೀಸ್ ಇದು ನಿರ್ಮಾಪಕರ ನಿರ್ಧಾರ!

'ಬೀಸ್ಟ್' ರಿಲೀಸ್ ಇದು ನಿರ್ಮಾಪಕರ ನಿರ್ಧಾರ!

'ಬೀಸ್ಟ್' ಸಿನಿಮಾವನ್ನು ಏಪ್ರಿಲ್‌ನಲ್ಲಿ ರಿಲೀಸ್ ಮಾಡಬೇಕು ಎನ್ನುವುದು ಚಿತ್ರತಂಡದ ಯೋಜನೆ ಆಗಿದೆ. ಆದರೆ ಸಿನಿಮಾವನ್ನು ಏಪ್ರಿಲ್ 13ಕ್ಕೆ ರಿಲೀಸ್ ಮಾಡಲೇ ಬೇಕು ಎನ್ನುವುದು ನಿರ್ಮಾಣ ಸಂಸ್ಥೆಯ ನಿರ್ಧಾರ ಎಂದು ತಿಳಿದು ಬಂದಿದೆ. 'ಬೀಸ್ಟ್' ಚಿತ್ರವನ್ನು ನಿರ್ಮಾಣ ಮಾಡಿರುವ 'ಸನ್ ಪಿಕ್ಚರ್ಸ್' 'ಬೀಸ್ಟ್' ಸಿನಿಮಾ ರಿಲೀಸ್ ಮಾಡಲು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 'ಕೆಜಿಎಫ್ 2' ಜೊತೆಗೆ ಎನ್ನುವುದಕ್ಕಿಂತಲೂ, ಸಿನಿಮಾ ಏಪ್ರಿಲ್ 13ಕ್ಕೆ ಸಿನಿಮಾ ರಿಲೀಸ್ ಮಾಡಲೆ ಬೇಕು ಎನ್ನುವುದು ನಿರ್ಮಾಣ ಸಂಸ್ಥೆಯ ನಿರ್ಧಾರ ಆಗಿದೆಯಂತೆ.

ರಾಕಿ ಭಾಯ್ ಮುಂದೆ ಸೋಲುಂಡ ಶಾರುಖ್!

ರಾಕಿ ಭಾಯ್ ಮುಂದೆ ಸೋಲುಂಡ ಶಾರುಖ್!

ಇನ್ನು 'ಕೆಜಿಎಫ್' ಪವರ್ ಎಂತಹದ್ದು ಎನ್ನುವುದು ಈ ಮೊದಲೇ ಗೊತ್ತಾಗಿದೆ. ಕಳೆದ ಬಾರಿ 'ಕೆಜಿಎಫ್ ಚಾಪ್ಟರ್ 1' ರಿಲೀಸ್ ಆಗುವ ಸಮಯದಲ್ಲಿ, ಈ ಚಿತ್ರಕ್ಕೆ ಎದುರಾಗಿದ್ದು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. 2018 ಡಿಸೆಂಬರ್ 21 'ಕೆಜಿಎಫ್ 1' ಮತ್ತು ಬಾಲಿವುಡ್‌ನ 'ಝೀರೋ' ಚಿತ್ರಗಳು ಒಟ್ಟಿಗೆ ತೆರೆಗೆ ಬಂದಿದ್ದವು. ಆದರೆ ಕನ್ನಡದ 'ಕೆಜಿಎಫ್' ಚಿತ್ರದ ಮುಂದೆ ಬಾಲಿವುಡ್‌ ಚಿತ್ರ 'ಝೀರೋ' ಅಕ್ಷರಶಃ ಝೀರೋ ಆಗಿತ್ತು. ಹಾಗಾಗಿ ಈಗಲೂ 'ಕೆಜಿಎಫ್ 2' ಚಿತ್ರದ ಎದುರು ಬರುವ ಚಿತ್ರಗಳು ಕೊಂಚ ಆಲೋಚಿಸುವ ಪರಿಸ್ಥಿತಿ ಇದೆ.

More from Filmibeat

English summary
Confirm Tamil Beast Movie Will Clash With Rocking Star Yash Starrer KGF 2 Film In April 2022,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X