Leo-Bengaluru: ಬೆಂಗಳೂರಿನಲ್ಲಿ 'ಲಿಯೋ' ನಾಗಾಲೋಟ.. ಶಿವಣ್ಣ-ಬಾಲಣ್ಣ ಸಿನಿಮಾಗಳಿಗೆ ಕಮ್ಮಿ ಸ್ಕ್ರೀನ್.. ಯಾಕಿಂಗೆ?

By ಬಾಲರಾಜ್ ತಂತ್ರಿ

ಇಡೀ ದೇಶದಲ್ಲಿ ದಕ್ಷಿಣ ಭಾರತದಲ್ಲಿ ಇದ್ದಷ್ಟು ಸಿನಿಮಾದ ಕ್ರೇಜ್ ಉತ್ತರದ ಭಾಗದಲ್ಲಿ ಕಾಣ ಸಿಗುವುದು ಕಮ್ಮಿ. ಇಲ್ಲಿ ಮಧ್ಯರಾತ್ರಿಯಿಂದಲೇ ಸಿನಿಮಾದ ಶೋ ಆರಂಭವಾಗಲು ಆರಂಭವಾಗುತ್ತದೆ. ಇದಕ್ಕೆ ಕೊಡಬಹುದಾದ ತಾಜಾ ಉದಾಹರಣೆಯೆಂದರೆ ಶಿವರಾಜ್ ಕುಮಾರ್ ಅಭಿನಯದ ಘೋಷ್ಟ್ ಮಧ್ಯರಾತ್ರಿ 12.15 ಮತ್ತು ವಿಜಯ ದಳಪತಿ ಅಭಿನಯದ ಲಿಯೋ ಸಿನಿಮಾ ಮುಂಜಾನೆ 3.45ಕ್ಕೆ ಆರಂಭವಾಗುತ್ತಿದೆ.

ರಜನೀಕಾಂತ್ ಅಭಿನಯದ ಜೈಲರ್ ಹುಟ್ಟು ಹಾಕಿದ್ದ ಕ್ರೇಜ್ ಅನ್ನು ಮೀರಿಸುವಂತೆ ವಿಜಯ್ ಅಭಿನಯದ ಲಿಯೋ ಸಿನಿಮಾ ಸುದ್ದಿ ಮಾಡುತ್ತಿದೆ. ಪ್ರಿ ರಿಲೀಸ್‌ಗೂ ಮುನ್ನವೇ ಚಿತ್ರ ಕೋಟ್ಯಾಂತರ ರೂಪಾಯಿಯನ್ನು ಬಾಚಿಯಾಗಿದೆ. ಗಮನಿಸಬೇಕಾದ ವಿಚಾರ ಏನಂದರೆ ಬೇರೆ ದಕ್ಷಿಣದ ಮೂರು ದೊಡ್ಡ ಬಜೆಟಿನ ಸಿನಿಮಾ ಬಿಡುಗಡೆಯಾಗುತ್ತಿದ್ದರೂ, ಲಿಯೋ ನಾಗಾಲೋಟವನ್ನು ಸದ್ಯಕ್ಕೆ ತಡೆಯಲು ಆಗುತ್ತಿಲ್ಲ.

leo-ghost-bhagavanth-kesari

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕನ್ನಡೇತರ ಸಿನಿಮಾಗಳ ಮಾರುಕಟ್ಟೆ ಜೋರಾಗಿಯೇ ಇದೆ. ದಸರಾ ರಜೆಯ ವಾರ ಆಗಿರುವುದರಿಂದ ತಮಿಳಿನ ಲಿಯೋ, ಕನ್ನಡದ ಘೋಷ್ಟ್, ತೆಲುಗಿನಲ್ಲಿ ಬಾಲಯ್ಯ ಮತ್ತು ರವಿತೇಜಾ ಸಿನಿಮಾಗಳು ಇದೇ ವಾರ ರಿಲೀಸ್ ಆಗಲಿದೆ. ಆದರೂ, ಕರ್ನಾಟಕ ಮತ್ತು ಆಂಧ್ರ / ತೆಲಂಗಾಣದಲ್ಲಿ ಅಲ್ಲಿನ ಸಿನಿಮಾಗಿಂತ ಹೆಚ್ಚಿನ ಸ್ಕ್ರೀನ್‌ಗಳು ಲಿಯೋ ಸಿನಿಮಾಗೆ ಸಿಗುತ್ತಿದೆ. ಅದಕ್ಕೆ ಕಾರಣ, ಸಿನಿಮಾಗೆ ಇರುವ ಕ್ರೇಜ್, ಪಾಲಿಟಿಕಲ್ ಟಚ್..

ತಮಿಳುನಾಡಿನಲ್ಲಿ ಮುಂಜಾನೆ ಪ್ರದರ್ಶನಕ್ಕೆ ಅನುಮತಿ ಇಲ್ಲದೇ ಇರುವುದರಿಂದ ಬೆಂಗಳೂರಿನಲ್ಲಿ ಲಿಯೋ ಸಿನಿಮಾದ ಮುಂಜಾನೆ ಶೋಗೆ ಊಹಿಸಲೂ ಅಸಾಧ್ಯವಾದ ರೆಸ್ಪಾನ್ಸ್ ಸಿಗಲು ಕಾರಣ ಆಗಿರಬಹುದು. ಈ ಸಿನಿಮಾದ ಕನ್ನಡ ಡಬ್ಬಿಂಗ್ ಕೂಡಾ ರಿಲೀಸ್ ಆಗುತ್ತಿರುವುದರಿಂದ ಕನ್ನಡ ಸ್ಕ್ರೀನಿಂಗ್‌ಗೆ ಹನ್ನೆರಡು ಥಿಯೇಟರ್‌ಗಳು ಸಿಕ್ಕರೆ, ತಮಿಳು ವರ್ಸನ್‌ಗೆ 105ಕ್ಕೂ ಹೆಚ್ಚು ಸ್ಕ್ರೀನ್‌ಗಳು ಸಿಕ್ಕಿವೆ.

ಮುಂಜಾನೆ ನಾಲ್ಕರಿಂದ ಏಳು ಗಂಟೆಯ ಅವಧಿಯಲ್ಲಿ 190ಕ್ಕೂ ಹೆಚ್ಚು ಪ್ರದರ್ಶನಗಳು ಬೆಂಗಳೂರಿನಲ್ಲಿ (ಬುಕ್ ಮೈ ಶೋ ಮಾಹಿತಿಯ ಪ್ರಕಾರ) ಪ್ರದರ್ಶನ ಕಾಣಲಿದೆ. ಇದು, ಇತ್ತೀಚೆಗೆ ಬಿಡುಗಡೆಯಾದ ಜೈಲರ್ ಸಿನಿಮಾದ ಪ್ರದರ್ಶನದ ಸಂಖ್ಯೆಯನ್ನು ಮೀರಿಸುತ್ತಿದೆ. ಮುಂಜಾನೆಯ ಶೋ ಟಿಕೆಟ್‌ಗಳು ಒಂದು ಸಾವಿರಕ್ಕೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.

leo-ghost-bhagavanth-kesari

ಜೈಲರ್ ಸಿನಿಮಾಕ್ಕೆ ಆರಂಭದಲ್ಲಿ ಹೆಚ್ಚಿನ ಕನ್ನಡ ಸ್ಕ್ರೀನ್‌ಗಳನ್ನು ನೀಡಿರಲಿಲ್ಲ. ಚಿತ್ರಕ್ಕೆ ಮೌತ್ ಟಾಕ್ ಚೆನ್ನಾಗಿ ಬಂದಿದ್ದರಿಂದ ಕನ್ನಡ ಪ್ರೇಕ್ಷಕರು ಕನ್ನಡ ವರ್ಸನ್ ಅನ್ನೇ ನೋಡಲು ಮುಂದಾದರು. ಹಾಗಾಗಿ, ವಿತರಕರು ಕನ್ನಡ ಸ್ಕ್ರೀನ್ ಸಂಖ್ಯೆಯನ್ನು ಜಾಸ್ತಿ ಮಾಡಿದರು. ಈ ಚಿತ್ರಕ್ಕೆ ಇದ್ದ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಜೈಲರ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಕ್ಯಾಮೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಇದು, ಕನ್ನಡ ಸ್ಕ್ರೀನಿಂಗ್ ಜಾಸ್ತಿಯಾಗಲು ಕಾರಣವಾಯಿತು.

ಸಾಮಾನ್ಯವಾಗಿ ರಜನೀಕಾಂತ್ ಸಿನಿಮಾವನ್ನು ದೇಶದ ಎಲ್ಲಾ ವರ್ಗದ ಜನರು ನೋಡಲು ಬಯಸುತ್ತಾರೆ. ಆದರೆ, ವಿಜಯ್ ವಿಚಾರದಲ್ಲಿ ಆ ರೀತಿಯಿಲ್ಲ. ತಮಿಳಿಗರೇ ಹೆಚ್ಚಾಗಿ ಅವರ ಟಾರ್ಗೆಟ್ ಆಡಿಯನ್ಸ್. ಕನ್ನಡ ಚಿತ್ರೋದ್ಯಮದಲ್ಲಿದ್ದ ಡಬ್ಬಿಂಗ್ ನಿಷೇಧದಿಂದಾಗಿ ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲೂ ರಿಲೀಸ್ ಆಗಲು ಆರಂಭವಾಗಿದೆ. ಹಾಗಾಗಿ, ಜೈಲರ್ ನಂತರ ಲಿಯೋಗೆ ಯಾವ ರೀತಿ ಮುಂದಿನ ದಿನಗಳಲ್ಲಿ ಸಿಗುತ್ತದೆ ಎನ್ನುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ದಳಪತಿ ವಿಜಯ್ 'ಲಿಯೋ' ಸಿನಿಮಾ ಈ ವರ್ಷದ ಬಹು ನಿರೀಕ್ಷಿತ ಚಿತ್ರ. ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿಯಾಗುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ ಈ ಚಿತ್ರಕ್ಕೆ ಇನ್ನಷ್ಟು ತೂಕ ಬಂದಿದೆ. ಬಿಡುಗಡೆಗೆ ಮುನ್ನ ಚಿತ್ರ ಎಷ್ಟೇ ಸದ್ದು ಮಾಡಿದರೂ, ಎಷ್ಟೇ ಕೋಟಿ ಬಂಡವಾಳ ಸುರಿದಿದ್ದಿರೂ ಮೊದಲ ದಿನದ ಶೋ ಮುಗಿದ ಕೂಡಲೇ ಚಿತ್ರದ ಹಣೆಬರಹ ಗೊತ್ತಾಗಿ ಬಿಡುತ್ತದೆ.

ಜೈಲರ್ ಸಿನಿಮಾವನ್ನು ಏಳೆಂಟು ಕೋಟಿ ಕೊಟ್ಟು ಕರ್ನಾಟಕ ರೈಟ್ಸ್ ಅನ್ನು ಪಡೆಯಲಾಗಿತ್ತು. ಚಿತ್ರ ನಲವತ್ತು ಕೋಟಿ ಮೀರಿ ಕಲೆಕ್ಷನ್ ಮಾಡಿತ್ತು. ಈಗ, ಜೈಲರ್ ಮೀರಿದ ಕ್ರೇಜ್ ದಕ್ಷಿಣ ಭಾರತದಲ್ಲಿ ಲಿಯೋ ಚಿತ್ರಕ್ಕಿದೆ. ಜೈಲರ್ ಮಾಡಿದ್ದ ಸದ್ದನ್ನು ಲಿಯೋ ಮೀರಿಸುತ್ತೋ, ಇಲ್ಲವೋ? ಕನ್ನಡ ಮತ್ತು ತೆಲುಗಿನ ಬಹು ನಿರೀಕ್ಷಿತ ಚಿತ್ರಗಳ ಮುಂದೆ ಲಿಯೋ ಕಥೆ ಏನಾಗಲಿದೆ ಎನ್ನುವುದು ಕೆಲವೇ ಗಂಟೆಯಲ್ಲಿ ಗೊತ್ತಾಗಲಿದೆ.

More from Filmibeat

English summary
Thalapathy Vijay Leo has more screens than Ghost, Bhagavanth Kesari in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X