»   » 'ತರ್ಲೆ ವಿಲೇಜ್' ನಿರ್ದೇಶಕರ ಹೊಸ ಚಿತ್ರ 'ಗೆಂಡೆತಿಮ್ಮ'

'ತರ್ಲೆ ವಿಲೇಜ್' ನಿರ್ದೇಶಕರ ಹೊಸ ಚಿತ್ರ 'ಗೆಂಡೆತಿಮ್ಮ'

Posted By:
Subscribe to Filmibeat Kannada

ಪಡ್ಡೆ ಹುಡುಗರಿಗೆ ರಸದೌತಣ ನೀಡಿದ್ದ 'ತರ್ಲೆ ವಿಲೇಜ್' ಚಿತ್ರ ತಕ್ಕಮಟ್ಟಿಗೆ ಯಶಸ್ಸು ಕಾಣುತ್ತಿದ್ದಂತೆಯೇ, ನಿರ್ದೇಶಕ ಕೆ.ಎಂ.ರಘು ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ಅದೇ 'ಗೆಂಡೆತಿಮ್ಮ'.

'ಗೆಂಡೆತಿಮ್ಮ'... ಈ ಶೀರ್ಷಿಕೆ ಕೇಳಿದ ಕೂಡಲೆ ನಿಮಗೆ ಲೋಕೇಶ್ ಅಭಿನಯದ 1978ರಲ್ಲಿ ತೆರೆಕಂಡ 'ಪರಸಂಗದ ಗೆಂಡೆತಿಮ್ಮ' ಚಿತ್ರ ನೆನಪಿಗೆ ಬರಬಹುದು. ಆದ್ರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಅದರ ಮುಂದುವರಿದ ಭಾಗವೂ ಅಲ್ಲ ಎಂಬ ಸ್ಪಷ್ಟನೆಯನ್ನ ನಿರ್ದೇಶಕ ಕೆ.ಎಂ.ರಘು ನೀಡಿದ್ದಾರೆ.[ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್!]

'Tharle Village' director K.M.Raghu's new movie 'Gendethimma'

ಹಾಗ್ನೋಡಿದ್ರೆ, ಹಾಸನದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನಾಧರಿತ ಚಿತ್ರ 'ಗೆಂಡೆತಿಮ್ಮ'. ಈ ಚಿತ್ರಕ್ಕೆ ರಮೇಶ್ ಕಶ್ಯಪ್ ಬಂಡವಾಳ ಹೂಡುತ್ತಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆಯನ್ನ ಕೆ.ಎಂ.ರಘು ಹೊತ್ತಿದ್ದಾರೆ.

'ಗೆಂಡೆತಿಮ್ಮ' ಚಿತ್ರಕ್ಕಿನ್ನೂ ತಾರೆಯರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಎಲ್ಲವೂ ಫೈನಲ್ ಆದ ಬಳಿಕ 'ಗೆಂಡೆತಿಮ್ಮ' ಸೆಟ್ಟೇರಲಿದೆ.

English summary
After the success of 'Tharle Village', Director K.M.Raghu is all set to direct 'Gendethimma'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada