ಥಿಯೇಟರ್, ಡೈರೆಕ್ಟರ್, ಹೀರೊಯಿನ್; ಥೇಟ್ ಸಿನಿಮಾ ಸ್ಟೈಲ್‌ನಲ್ಲಿ ತರುಣ್- ಸೋನಲ್ ಮದ್ವೆ ಡೇಟ್ ಅನೌನ್ಸ್
ಕನ್ನಡ ಚಿತ್ರ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂತೆರೋ ಮದುವೆ ಫಿಕ್ಸ್ ಆಗಿದೆ. ಕೆಲ ದಿನಗಳಿಂದ ಇಬ್ಬರೂ ಮದುವೆ ಆಗುವ ಬಗ್ಗೆ ಗುಸುಗುಸು ಕೇಳಿಬರ್ತಿತ್ತು. ಇದೀಗ ಅಧಿಕೃತವಾಗಿ ಈ ವಿಚಾರವನ್ನು ಜೋಡಿ ಘೋಷಿಸಿದೆ. ಮದುವೆ ಡೇಟ್, ವೆನ್ಯೂ ಎಲ್ಲವೂ ಫಿಕ್ಸ್ ಆಗಿದೆ. ಇಲ್ಲದರ ಮಾಹಿತಿ ಲಭ್ಯವಾಗಿದೆ.
"ನನ್ನ ನಾಯಕಿ ಸೋನಾಲ್ ಜೊತೆಗಿನ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ" ಎಂದು ಬರೆದು ತರುಣ್ ಸುಧೀರ್ ಸ್ಪೆಷಲ್ ವೀಡಿಯೋ ಹಂಚಿಕೊಂಡಿದ್ದಾರೆ. " ಶ್ರೇಷ್ಠ ಪ್ರೇಮಕಥೆಯಲ್ಲಿ ನಾನು ನನ್ನ ಜೆಂಟಲ್‌ಮನ್ ಜೊತೆ ತರುಣ್ ಜೊತೆ ನಟಿಸುತ್ತಿದ್ದೇನೆ ಎಂದು ಬರೆದು ಸೋನಲ್ ವೀಡಿಯೋ ಪೋಸ್ಟ್ ಮಾಡಿದ್ದಾರೆ.

ತರುಣ್- ಸೋನಲ್ ಇಬ್ಬರೂ ಚಿತ್ರರಂಗದವರು. ಹಾಗಾಗಿ ಚಿತ್ರಮಂದಿರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಅದರ ವೀಡಿಯೋ, ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನಗರದ ನವರಂಗ್ ಚಿತ್ರಮಂದಿರದಲ್ಲಿ ಫೋಟೊಶೂಟ್ ಮಾಡಲಾಗಿದೆ. ಸಿನಿಮಾಟೋಗ್ರಾಫರ್ ಎ. ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ. ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಫ್ಯಾಲೆಸ್‌ನಲ್ಲಿ ತರುಣ್- ಸೋನಲ್ ವಿವಾಹ ಜರುಗಲಿದೆ.
ಸಾಮಾನ್ಯವಾಗಿ ಪಾರ್ಕ್, ಪ್ಯಾಲೇಸ್, ಬೀಚ್ ಬಳಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ಅದಕ್ಕಾಗಿ ದೊಡ್ಡ ತಂಡ ಕಟ್ಟಿಕೊಂಡು ಮೂರ್ನಾಲ್ಕು ದಿನ ಅದ್ಭುತ ಲೊಕೇಶನ್‌ಗಳಲ್ಲಿ ಸುತ್ತಾಡುವವರು ಇದ್ದಾರೆ. ಹೇಳಿಕೇಳಿ ತರುಣ್ ಸಿನಿಮಾ ನಿರ್ದೇಶಕ. ಹಾಗಾಗಿ ತಮ್ಮದೇ ಸ್ಟೈಲ್‌ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಸೋನಲ್ ಸಹ ಸಿನಿಮಾ ನಟಿ ಆಗಿರುವುದರಿಂದ ಸೈ ಎಂದಿದ್ದಾರೆ.
ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್‌ನಲ್ಲಿ ತರುಣ್ ಮತ್ತು ಸೋನಾಲ್ ಫೋಟೊಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್‌ಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು ಸೋನಾಲ್‌ಗೆ ರಶ್ಮಿ ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮತ್ತು ಸೋನಾಲ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಮದುವೆ ಸಿದ್ಧತೆ ಶುರುವಾಗಿದೆ.
ಖ್ಯಾತ ಖಳನಟ ಸುಧೀರ್ ಪುತ್ರ ತರುಣ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. 'ಚೌಕ', 'ರಾಬರ್ಟ್' ಹಾಗೂ 'ಕಾಟೇರ' ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. 3 ಹಿಟ್ ಕೊಟ್ಟು ಹ್ಯಾಟ್ರಿಕ್ ಡೈರೆಕ್ಟರ್ ಪಟ್ಟ ಅಲಂಕರಿಸಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ದರ್ಶನ್ ಕಾಂಬಿನೇಷನ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಜೀವನಾಧರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಮಂಗಳೂರು ಮೂಲದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. 'ಅಬಿಸಾರಿಕೆ' ಕನ್ನಡದಲ್ಲಿ ಆಕೆ ನಟಿಸಿದ ಚೊಚ್ಚಲ ಸಿನಿಮಾ. 'ಎಂಎಲ್‌ಎ', 'ಪಂಚತಂತ್ರ', 'ಡೆಮೊ ಪೀಸ್', 'ಗರಡಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ಆಕೆ ನಟಿಸಿದ್ದರು. ವಿನೋದ್ ಪ್ರಭಾಕರ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು.
ತರುಣ್- ಸೋನಲ್ ಮದುವೆಗೆ ಸ್ಯಾಂಡಲ್‌ವುಡ್ ತಾರೆಯರು ಸಾಕ್ಷಿ ಆಗಲಿದ್ದಾರೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ತರುಣ್ ಭೇಟಿ ನೀಡಿದ್ದರು. ಈ ವೇಳೆ ದರ್ಶನ್ ಭೇಟಿ ಆಗಿ ಮದುವೆ ಆಮಂತ್ರಣ ನೀಡಿ ಬಂದಿದ್ದಾರೆ. ಮದುವೆಗೆ ದರ್ಶನ್ ಶುಭ ಕೋರಿದ್ದು ದಿನಾಂಕ ಬದಲಿಸೋದು ಬೇಡ ನಾನು ಬರ್ತಿನಿ ಎಂದಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











