ಕ್ರೇಜಿಸ್ಟಾರ್ ಪಿಕ್ಚರ್ ತರ ತರುಣ್ ಸುಧೀರ್ ರೊಮ್ಯಾಂಟಿಕ್ ಅಂತೆ; ಪತಿಯ ಮಾತು ಕೇಳಿ ಮುತ್ತಿಟ್ಟ ಸೋನಲ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಈ ಜೋಡಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಇದೇ ಸಂಭ್ರಮದಲ್ಲಿ ಇರುವಾಗಲೇ ಆ್ಯಂಕರ್ ಅನುಶ್ರೀ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗಿಯಾಗಿದೆ. ಸದ್ಯ ಈ ಕಾರ್ಯಕ್ರಮದ ಪ್ರೋಮೊ ರಿಲೀಸ್ ಆಗಿದ್ದು ಟ್ರೆಂಡಿಂಗ್‌ನಲ್ಲಿ ಇದೆ.

ಮದುವೆಯಾದ ಬಳಿಕ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಇಬ್ಬರೂ ಇದೇ ಮೊದಲ ಬಾರಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ಕಾರಣಕ್ಕೆ ಇಬ್ಬರ ಫ್ಯಾನ್ಸ್‌ ಕೂಡ ಈ ಕಾರ್ಯಕ್ರಮವನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಈ ಕಾರ್ಯಕ್ರಮ ಯಾವಾಗ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಆಗುತ್ತೆ ಅನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Tharun Sudhir and Sonal Monteiro interview with anchor anushree promo is trending

ಈ ವಿಶೇಷ ಸಂದರ್ಶನದ ವೇಳೆ ಆ್ಯಂಕರ್ ಅನುಶ್ರೀ ಕೇಳಿದ ಪ್ರಶ್ನೆಗಳಿಗೆ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಕೊಟ್ಟ ಉತ್ತರ ಅಷ್ಟೇ ಕ್ಯೂಟ್ ಆಗಿತ್ತು. ಅದರ ಚಿಕ್ಕದೊಂದು ತುಣುಕನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಲಾಗಿದೆ. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ.

ಕ್ಯೂಟ್ ಜೋಡಿಗೆ ಗ್ರ್ಯಾಂಡ್ ವೆಲ್‌ಕಮ್

ಸ್ಯಾಂಡಲ್‌ವುಡ್‌ನ ನವ ಜೋಡಿಗೆ ಅನುಶ್ರೀ ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ವೆಲ್‌ಕಮ್ ಸಿಕ್ಕಿದೆ. ಕಂಠೀರವ ಸ್ಟುಡಿಯೋದಲ್ಲಿ ರೊಮ್ಯಾಂಟಿಕ್ ಸೆಟ್ ಹಾಕಿ, ಹಾರ್ಟ್ ಶೇಪ್‌ನ ಪ್ರಾಪರ್ಟಿಯನ್ನು ಇಟ್ಟು, ಬಲೂನ್‌ಗಳನ್ನು ಇಟ್ಟು ಶೂಟ್ ಮಾಡಲಾಗಿದೆ. ಹಾಗೇ ಈ ಕಾರ್ಯಕ್ರಮದಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಇಬ್ಬರಿಂದಲೂ ಕೇಕ್ ಕಟ್ ಮಾಡಿಸಿ ಸಂಭ್ರಮಿಸಲಾಗಿದೆ. ಈ ಅರೇಂಜ್‌ಮೆಂಟ್‌ಗೆ ನವ ದಂಪತಿ ಕೂಡ ಫುಲ್ ಫಿದಾ ಆಗಿದೆ.

ಅತಿಥಿಯಾಗಿ ಬಂದ ಪ್ರೇಮ್

ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಸಂದರ್ಶನದಲ್ಲಿ ಗೆಳೆಯ ನೆನಪಿರಲಿ ಪ್ರೇಮ್ ಕೂಡ ಅತಿಥಿಯಾಗಿ ಬಂದಿದ್ದಾರೆ. ಇವರ ಗೆಸ್ಟ್ ಅಪಿಯರೆನ್ಸ್ ಕೂಡ ಕಾರ್ಯಕ್ರಮಕ್ಕೆ ಲವಲವಿಕೆ ತಂದುಕೊಟ್ಟಿದೆ. ನೆನಪಿರಲಿ ಪ್ರೇಮ್ ಹಾಗೂ ತರುಣ್ ಸುಧೀರ್ ಬೆಸ್ಟ್ ಫ್ರೆಂಡ್ಸ್. ಅವರ ಮದುವೆಯಲ್ಲಿ ನೆನಪಿರಲಿ ಪ್ರೇಮ್ ಮುಂದೆ ನಿಂತಿದ್ದರು.

Tharun Sudhir and Sonal Monteiro interview with anchor anushree promo is trending

ರವಿಚಂದ್ರನ್ ಸಿನಿಮಾ ತರ ರೊಮ್ಯಾಂಟಿಕ್

ಆ್ಯಂಕರ್ ಅನುಶ್ರೀ ಶೋ ಅಂದ್ಮೇಲೆ ಅಲ್ಲಿ ನಗು ಇದ್ದೇ ಇರುತ್ತೆ. ಈ ಸಂದರ್ಶನದಲ್ಲೂ ಕೂಡ ಆ ನಗುವಿಗೇನು ಕಮ್ಮಿಯಿಲ್ಲ ಅನ್ನೋದು ಈ ತುಣುಕು ಹೇಳುತ್ತಿದೆ. ರೊಮ್ಯಾಂಟಿಕ್ ಪರ್ಸನಾಲಿಟಿ ಬಗ್ಗೆ ತರುಣ್ ಸುಧೀರ್‌ಗೆ ಕೇಳಿದ ಪ್ರಶ್ನೆಗಳಿಗೆ ತರುಣ್ ಕೊಟ್ಟ ಉತ್ತರ " ನಾನು ರವಿಚಂದ್ರನ್ ಸರ್ ಸಿನಿಮಾ ತರನೇ ರೊಮ್ಯಾಂಟಿಕ್ ಎಂದಿದ್ದಾರೆ. ಅದೇ ವೇಳೆ ಎರಡು ಹಾರ್ಟ್ ಶೇಪಿನ ಬಲೂನ್ ಹಿಡಿದು ಚಿಂಬಿಸಿದ್ದಾರೆ. ಇದಕ್ಕೂ ಅವರ ಫ್ಯಾನ್ಸ್ ಕಾಮೆಂಟ್‌ಗಳನ್ನು ಪಾಸ್ ಮಾಡುತ್ತಿದ್ದಾರೆ.

ಪ್ರೇಮ್ ಕ್ರೇಜಿ ಡೈಲಾಗ್

ತರುಣ್ ಸುಧೀರ್ ಗೆಳೆಯ ನೆನಪಿರಲಿ ಪ್ರೇಮ್ ಈ ಕಾರ್ಯಕ್ರಮದ ಮತ್ತೊಬ್ಬ ಅತಿಥಿ. ಪ್ರೇಮ್ ಬಿಟ್ಟ ಡೈಲಾಗ್ ಕೂಡ ಸಖತ್ ಟ್ರೆಂಡಿಂಗ್‌ನಲ್ಲಿದೆ.
"ಸ್ಕ್ರಿಪ್ಟ್‌ಗೆ ಟೈಮ್‌ ಕೊಟ್ರೆ ಸಿನಿಮಾ ಆಗುತ್ತದೆ. ಹೆಂಡ್ತಿಗೆ ಟೈಮ್‌ ಕೊಟ್ರೆ ಮಕ್ಕಳು ಆಗುತ್ತವೆ. ಅವು ಹಠ ಮಾಡುತ್ತವೆ" ಅಂತ ಹೇಳಿ ತರುಣ್ ಸುಧೀರ್‌ಗೆ ಕಿಕ್ ಕೊಟ್ಟಿದ್ದಾರೆ.

ಎಮೋಷನಲ್ ಕೂಡ ಇದೆ

ಪ್ರೋಮೊ ಕೊನೆಯಲ್ಲಿ ಎಮೋಷನಲ್ ಝಲಕ್ ಕೂಡ ಇದೆ. ಮದುವೆ ಮಂಟಪದಲ್ಲಿ ತರುಣ್ ಸುಧೀರ್ ತಮ್ಮ ತಂದೆ ಲೆಜೆಂಡರಿ ಆಕ್ಟರ್ ಸುಧೀರ್ ಅವರ ಫೋಟೊವನ್ನು ಹಾಕಿದ್ದರು. ತಮ್ಮ ತಂದೆ ತನ್ನ ಮದುವೆಯನ್ನು ನೋಡುವಂತೆ ಇರಬೇಕು ಎಂದು ಬಯಸಿದ್ದರು. ಅದಕ್ಕಾಗಿಯೇ ಫೋಟೋ ಇಟ್ಟಿದ್ದನ್ನು ನೆನೆದಿದ್ದಾರೆ. ಇದು ಅನುಶ್ರೀ ಕಣ್ಣುಗಳನ್ನು ಒದ್ದೆಯಾಗಿಸಿದೆ.

More from Filmibeat

English summary
Tharun Sudhir and Sonal Monteiro interview with anchor anushree promo is trending:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X