ಸೆಪ್ಟೆಂಬರ್ ಒಂದರಂದು ಮತ್ತೊಮ್ಮೆ ಮದುವೆಯಾಗಲಿದ್ದಾರೆ ತರುಣ್ ಸುಧೀರ್ ಮತ್ತು ಸೋನಾಲ್...!
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥ ಪ್ರೀತಿ ಅನ್ನೋದು ಹೇಗೆ ಎಲ್ಲಿ ಯಾವಾಗ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಇದಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಅತ್ಯುತ್ತಮ ಉದಾಹರಣೆ.
ಹೌದು, ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂದು ಸಾರಿರುವ ತರುಣ್ ಸುಧೀರ್ ಮತ್ತು ಸೋನಾಲ್, ಸದ್ಯ ತಮ್ಮ ವ್ಯೆಯಕ್ತಿಕ ಜೀವನವದಲ್ಲಿ ಸಂತೋಷವಾಗಿದ್ದಾರೆ. ಅನುದಿನ ಅನುಕ್ಷಣ ಖುಷಿ ಖುಷಿಯಾಗಿಯೇ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ ತರುಣ್ ಸುಧೀರ್ ಮತ್ತು ಸೋನಾಲ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು ಸಿದ್ಧರಾಗಿದ್ದಾರೆ.

ಹೌದು, ಅಸಲಿಗೆ ಸೋನಾಲ್ ಬೆಸಿಕಲಿ ಮಂಗಳೂರಿನವರು. ಎಕ್ಕ ಸಕ್ಕಾ ಎಂಬ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸೋನಾಲ್ ಕ್ರೈಸ್ತ ಧರ್ಮದವರು. ಈ ಹಿನ್ನೆಲೆಯಲ್ಲಿ ಹಿಂದೂ ಮತ್ತು ಕ್ರೈಸ್ತ ಧರ್ಮದಂತೆ ಇಬ್ಬರ ಮದುವೆ ನಡೆಯಲಿದೆ ಎನ್ನುವ ಸುದ್ದಿ ಹಿಂದೆ ಕೇಳಿ ಬಂದಿತ್ತು. ಆಗಸ್ಟ್ ಹನ್ನೊಂದರಂದು ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಇವರಿಬ್ಬರ ವಿವಾಹ ಮಹೋತ್ಸವ ಅದ್ಧೂರಿಯಾಗಿ ಹಿರಿಯರ ಸಮುಖದಲ್ಲಿ ನೆರವೇರಿತ್ತು. ಆದರೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಆಗ ಮದುವೆಯಾಗಿರಲಿಲ್ಲ. ಈಗ ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು ಸೆಪ್ಟೆಂಬರ್ ಒಂದರಂದು ಇಬ್ಬರು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಮದುವೆಯಾಗಲಿದ್ದಾರೆ.
ಇನ್ನೂ ಸೆಪ್ಟೆಂಬರ್ ಒಂದರಂದು ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿರುವ ಈ ವಿವಾಹ ಮಹೋತ್ಸವಕ್ಕೆ ಚಿತ್ರರಂಗದ ತಮ್ಮ ಆಪ್ತ ಸ್ನೇಹಿತರಿಗೆ ಮಾತ್ರ ಇಬ್ಬರು ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ ಎನ್ನುವ ಮಾತು ಕೂಡ ಇದೇ ಸಮಯದಲ್ಲಿ ಕೇಳಿ ಬರುತ್ತಿದೆ.
ಅಂದ್ಹಾಗೇ ಮದುವೆಯ ಬಂಧನಕ್ಕೊಳಗಾದ ನಂತರ ಮೊನ್ನೆಯಷ್ಟೇ ತರುಣ್ ಮತ್ತು ಸೋನಾಲ್ ಕರುನಾಡಿನ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ತರುಣ್ ಮತ್ತು ಸೋನಾಲ್ ಸೆಪ್ಟೆಂಬರ್ ಒಂದರಂದು ಮಂಗಳೂರಿನಲ್ಲಿ ಇನ್ನೊಂದು ಆರತಕ್ಷತೆ ಕಾರ್ಯಕ್ರ,ಮ ನಡೆಯಲಿದೆ ಎಂದು ತಾವೇ ಹೇಳಿದ್ದರು. ಸೆಪ್ಟೆಂಬರ್ ಒಂದರಂದು ಮಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ, ಆ ನಂತರ ಮಾಲ್ಡೀವ್ಸ್‌ಗೆ ಹನಿಮೂನ್‌ಗೆ ಹೋಗುವ ಪ್ಲಾನ್ ಮಾಡಿಕೊಂಡಿರುವುದಾಗಿ ಕೂಡ ತರುಣ್ ಸುಧೀರ್ ಹೇಳಿದ್ದರು.
ಉಳಿದಂತೆ ತರುಣ್ ಮತ್ತು ಸೋನಾಲ್ ಮದುವೆಗೆ ಕಾರಣವಾದ ದರ್ಶನ್ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಕಾಣಿಸದ ದರ್ಶನ್, ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿರುವ ಈ ಮದುವೆಯಲ್ಲಿ ಕೂಡ ಕಾಣಿಸಿಕೊಳ್ಳಲ್ಲ ಅನ್ನುವುದು ದುರದೃಷ್ಟಕರ ಸಂಗತಿ. ಆದರೂ, ದರ್ಶನ್ ಎಲ್ಲಿಯೇ ಇದ್ದರೂ ಅವರ ಆಶೀರ್ವಾದ ನಮ್ಮ ಮೇಲಿರುತ್ತೆ ಅನ್ನುವುದು ತರುಣ್ ಮತ್ತು ಸೋನಾಲ್ ಅವರ ನಂಬಿಕೆ. ಏನೇ ಇರಲಿ ಮದುವೆ ಅನ್ನುವುದು ಅವರವರ ಖಾಸಗಿ ವಿಚಾರ. ಅವರ ಇಷ್ಟಕ್ಕೆ ತಕ್ಕಂತೆ ಮಾಡಿಕೊಳ್ಳುವ ಹಕ್ಕು ಮತ್ತು ಸ್ವಾತಂತ್ರ್ಯ ಎಲ್ಲರಿಗೆ ಇರುವಂತೆ ತರುಣ್ ಮತ್ತು ಸೋನಾಲ್ ಗೆ ಇದೆ.ಹೀಗಾಗಿ ಅವರು ಎರಡೆರಡು ಬಾರಿ ಮದುವೆಯ ಬಂಧನಕ್ಕೊಳಗಾಗುವುದರಲ್ಲಿ ಯಾವ ತಪ್ಪು ಇಲ್ಲ. ದರ್ಶನ್ ಎಲ್ಲಿದ್ದರೇನು? ತರುಣ್-ಸೋನಲ್ ಸಂಭ್ರಮ ಮುಂದುವರೆಯಲಿ. ನೀವೇನಂತೀರಾ..?


Click it and Unblock the Notifications











