For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಸಿನಿಮಾ ಟೈಟಲ್ ಗೊಂದಲ ನಿವಾರಿಸಿದ ತರುಣ್ ಸುಧೀರ್

  By Naveen
  |
  ದರ್ಶನ್ ಸಿನಿಮಾ ಟೈಟಲ್ ಗೊಂದಲ ನಿವಾರಿಸಿದ ತರುಣ್ ಸುಧೀರ್

  ನಟ ದರ್ಶನ್ ಅವರಿಗೆ ನಿರ್ದೇಶಕ ತರುಣ್ ಸುಧೀರ್ ಒಂದು ಸಿನಿಮಾ ಮಾಡುತ್ತಿದ್ದಾರೆ. 'ಕುರುಕ್ಷೇತ್ರ' ದರ್ಶನ್ ಅವರ 50ನೇ ಸಿನಿಮಾವಾಗಿದ್ದು, 53ನೇ ಚಿತ್ರಕ್ಕೆ ತರುಣ್ ಆಕ್ಷನ್ ಕಟ್ ಹೇಳಲಿದ್ದಾರೆ.

  ದರ್ಶನ್ ಹಾಗೂ ತರುಣ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಸಿನಿಮಾಗೆ ಅನೇಕ ಟೈಟಲ್ ಗಳು ಹರಿದಾಡುತ್ತಿವೆ. 'ವಜ್ರಮುನಿ', 'ರಾಬರ್ಟ್' ಹೀಗೆ ಕೆಲ ಹೆಸರುಗಳು ಚಿತ್ರಕ್ಕೆ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಆದರೆ ಈಗ ದರ್ಶನ್ 53ನೇ ಚಿತ್ರದ ಟೈಟಲ್ ಗೊಂದಲವನ್ನು ನಿರ್ದೇಶಕ ತರುಣ್ ಸುಧೀರ್ ನಿವಾರಿಸಿದ್ದಾರೆ.

  ನನ್ನ ಮೊದಲ ಸಿನಿಮಾ : ಅವಕಾಶ ಇಲ್ಲದಾಗ ಬರೆದ ಕಥೆ ಅದ್ಭುತ ಸೃಷ್ಟಿಸಿತು! ನನ್ನ ಮೊದಲ ಸಿನಿಮಾ : ಅವಕಾಶ ಇಲ್ಲದಾಗ ಬರೆದ ಕಥೆ ಅದ್ಭುತ ಸೃಷ್ಟಿಸಿತು!

  ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ತರುಣ್ ಸುಧೀರ್

  ''ಈಗ ನೀವು ಕೇಳುತ್ತಿರುವ ಟೈಟಲ್ ಗಳ ಪೈಕಿ ಕೆಲವನ್ನು ನಮ್ಮ ಬ್ಯಾನರ್ ನಲ್ಲಿ ರಿಜಿಸ್ಟರ್ ಮಾಡಿಸಿದ್ದೇವೆ. 'ಚೌಕ' ಚಿತ್ರದಲ್ಲಿ ದರ್ಶನ್ 'ರಾಬರ್ಟ್' ಎಂಬ ಪಾತ್ರ ಮಾಡಿದ್ದರು. ಈ ಹೆಸರನ್ನು ಕೂಡ ರಿಜಿಸ್ಟರ್ ಮಾಡಿಸಿದ್ದೇವೆ. ಆದರೆ, ದರ್ಶನ್ ಅವರ ಸಿನಿಮಾಗೆ ಟೈಟಲ್ ಇನ್ನು ಫಿಕ್ಸ್ ಆಗಿಲ್ಲ. ಈ ಟೈಟಲ್ ಗಳು ನಮಗೆ ಇರಲಿ ಎಂಬ ಕಾರಣಕ್ಕೆ ಸದ್ಯಕ್ಕೆ ನೊಂದಣಿ ಮಾಡಿಸಿದ್ದೇವೆ ಅಷ್ಟೇ'' ಎಂದರು ತರುಣ್.

  ಅಲ್ಲಿಗೆ ದರ್ಶನ್ 53ನೇ ಚಿತ್ರದ ಟೈಟಲ್ ಗೊಂದಲಕ್ಕೆ ತರುಣ್ ಸುಧೀರ್ ತೆರೆ ಏಳೆದಿದ್ದಾರೆ. 'ಚೌಕ' ಸಿನಿಮಾದ ನಂತರ ತರುಣ್ ಅವರ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

  English summary
  Kannada director Tharun Sudhir gave clarification about actor darshan 53 rd movie title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X