'ರಾಬರ್ಟ್' ಚಿತ್ರದ ಬಗ್ಗೆ ಸದ್ಯದಲ್ಲೆ ಬರಲಿದೆ ದೊಡ್ಡ ಸುದ್ದಿ
Recommended Video
ಚಾಲೆಂಜಿಂಗ್ ಸ್ಟಾರ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. 'ಕುರುಕ್ಷೇತ್ರ' ಚಿತ್ರದ ಯಶಸ್ಸಿನಲ್ಲಿರುವ ದರ್ಶನ್ ಈಗ 'ಒಡೆಯ' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅದಾದ ಬಳಿಕ 'ರಾಬರ್ಟ್' ಸಿನಿಮಾ ಬರಲಿದೆ.
ಅದು ಮುಗಿದ ತಕ್ಷಣ ರಾಕ್ ಲೈನ್ ವೆಂಕಟೇಶ್ ಜೊತೆಯಲ್ಲಿ 'ಗಂಡುಗಲಿ ಮದಕರಿ ನಾಯಕ' ಚಿತ್ರ ಆರಂಭವಾಗುತ್ತೆ. ಈ ನಡುವೆ ಮಿಲನ ಪ್ರಕಾಶ್ ಮತ್ತು ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರ ಜೊತೆ ಇನ್ನೊಂದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಇಷ್ಟೆಲ್ಲಾ ಚಿತ್ರಗಳ ಮಧ್ಯೆ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಿಸಿದೆ. ಆದರೆ ಈ ಚಿತ್ರದ ಬಗ್ಗೆ ಯಾವುದೇ ಅಪ್ ಡೆಟ್ ಕೊಡ್ತಿಲ್ಲ ನಿರ್ದೇಶಕರು ಎಂಬುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಆದರೆ, ಯಾಕೆ ಅಪ್ ಡೇಟ್ ಕೊಡ್ತಿಲ್ಲ ಎಂದು ಸ್ವತಃ ತರುಣ್ ಸುಧೀರ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ದರ್ಶನ್ ಅವರ ರೂಲ್ಸ್ ಪಾಲಿಸಿದ ತರುಣ್
ದರ್ಶನ್ ಅವರ ಬಳಿ ಒಂದು ನಿಯಮ ಇದೆ. ನಂಬರ್ ವ್ಯವಸ್ಥೆಯಲ್ಲಿ ಸಿನಿಮಾ ಮಾಡ್ತಾರೆ. ಒಂದು ಮುಗಿಸಿದರೆ, ಅದಾದ ಬಳಿಕ ಕ್ಯೂನಲ್ಲಿರುವ ಚಿತ್ರಗಳ ಬಗ್ಗೆ ಮಾತ್ರ ಮಾತಾಡ್ತಾರೆ. ಒಂದು ಜಂಪ್ ಮಾಡಿ, ಇನ್ನೊಂದರ ಬಗ್ಗೆ ಹೇಳುವುದಿಲ್ಲ. ಡಿ ಬಾಸ್ ಅವರ ಆ ನಿಯಮಕ್ಕೆ ಗೌರವ ನೀಡುವ ಹಾದಿಯಲ್ಲಿ ತರುಣ್ ಕೂಡ ಹೆಜ್ಜೆ ಇಟ್ಟಿದ್ದಾರೆ.

ರಾಬರ್ಟ್ ಬಗ್ಗೆ ಯಾಕೆ ಸುದ್ದಿ ಇಲ್ಲ
''ರಾಬರ್ಟ್ ಚಿತ್ರದ ಬಗ್ಗೆ ಅಪ್ ಡೇಟ್ ಕೊಡಿ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ಒಂದು ಮಾಹಿತಿ. ನಿಮ್ಮ ಕಾಯಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಕುರುಕ್ಷೇತ್ರ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಮುಂದೆ ಒಡೆಯ ಬರ್ತಿದೆ. ಹಾಗಾಗಿ, ರಾಬರ್ಟ್ ಚಿತ್ರವನ್ನ ಸ್ವಲ್ಪ ಸೈಲೆಂಟ್ ಮಾಡ್ತಿದ್ದೀವಿ'' ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ.

ಸದ್ಯದಲ್ಲೇ ದೊಡ್ಡ ಪ್ರಕಟಣೆ
ರಾಬರ್ಟ್ ಚಿತ್ರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಹೇಳಿರುವ ನಿರ್ದೇಶಕ ತರುಣ್ ಸುಧೀರ್, ''ಸದ್ಯದಲ್ಲೇ ದೊಡ್ಡ ಪ್ರಕಟಣೆಯೊಂದಿದೆ'' ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಇದೀಗ, ರಾಬರ್ಟ್ ಸಿನಿಮಾದ ಆ ಘೋಷಣೆ ಏನಿರಬಹುದು ಎಂಬ ಪ್ರಶ್ನೆಯನ್ನ ಅಭಿಮಾನಿಗಳ ತಲೆಯಲ್ಲಿ ಬಿಟ್ಟಿದ್ದಾರೆ.

ಅಂಡರ್ ವಾಟರ್ ಶೂಟಿಂಗ್
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಬಹಿರಂಗಪಡಿಸಿರುವ ರಾಬರ್ಟ್ ಸಿನಿಮಾ ದರ್ಶನ್ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಆಗಬಹುದು ಎಂಬ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೆ ಅಂಡರ್ ವಾಟರ್ ನಲ್ಲಿ ರಾಬರ್ಟ್ ಸಿನಿಮಾದ ಚಿತ್ರೀಕರಣ ನಡೆದಿದೆ ಎಂಬ ವಿಷ್ಯವೂ ಚರ್ಚೆಯಾಗಿತ್ತು. ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications