For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಭಾವನಾತ್ಮಕ ಪತ್ರ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಇಂದು ಕರ್ನಾಟಕ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ಇಂದು (ಮಾರ್ಚ್ 11) ಬೆಳ್ಳಂಬೆಳಗ್ಗೆ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕ್ಯೂ ನಿಂತು ರಾಬರ್ಟ್ ನೋಡಿ ಸಂಭ್ರಮಿಸುತ್ತಿದ್ದಾರೆ.

  ಡಿ ಬಾಸ್ ನಮ್ಮ ಅಮ್ಮನ್ನ ಯಾವಾಗ್ಲು ಹಂಗೆ ಮಾತಾಡ್ಸೋದು | Tharun Sudhir | Roberrt | Filmibeat Kannada

  ಇಂದು ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ರಾಬರ್ಟ್ ಸಿನಿಮಾದ ಸೂತ್ರಧಾರ ತರುಣ್ ಸುಧೀರ್. ಚೌಕ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದ ತರುಣ್ ಮೊದಲ ಸಿನಿಮಾದಲ್ಲೇ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡರು. ತನ್ನ ಮೊದಲ ಸಿನಿಮಾದ ದರ್ಶನ್ ಪುಟ್ಟ ಪಾತ್ರದ ಹೆಸರನ್ನೇ ಇಟ್ಟುಕೊಂಡು ಸಿನಿಮಾ ಇಷ್ಟು ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ನೋಡಿ ತರುಣ್ ಭಾವುಕರಾಗಿದ್ದಾರೆ. ರಾಬರ್ಟ್, ದರ್ಶನ್ ಮತ್ತ ಇಡೀ ಸಿನಿಮಾ ತಂಡದ ಬಗ್ಗೆ ದೀರ್ಘವಾದ ಪತ್ರ ಬರೆದಿದ್ದಾರೆ ಮುಂದೆ ಓದಿ.

  'ರಾಬರ್ಟ್' ಪ್ರದರ್ಶನಕ್ಕೂ ಮುಂಚೆ ಚಿತ್ರಮಂದಿರದಲ್ಲಿ ಸಿನಿಮಾತಂಡದಿಂದ ವಿಶೇಷ ಪೂಜೆ'ರಾಬರ್ಟ್' ಪ್ರದರ್ಶನಕ್ಕೂ ಮುಂಚೆ ಚಿತ್ರಮಂದಿರದಲ್ಲಿ ಸಿನಿಮಾತಂಡದಿಂದ ವಿಶೇಷ ಪೂಜೆ

  ಸಿನಿಮಾ ಬಿಟ್ಟು ಬೇರೇನು ಗೊತ್ತಿಲ್ಲ- ತರುಣ್

  ಸಿನಿಮಾ ಬಿಟ್ಟು ಬೇರೇನು ಗೊತ್ತಿಲ್ಲ- ತರುಣ್

  'ಸಿನಿಮಾ ಎಂಬ ಚೌಕಟ್ಟು ಬಿಟ್ಟು ಬೇರೇನೂ ಗೊತ್ತಿಲ್ಲದವನು ನಾನು. ಕಾಕತಾಳಿಯವೊ ಏನೋ ಎಂಬಂತೆ ನನ್ನ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಚೌಕ ಎಂದೇ ಹೆಸರಿಡುವಂತಾಯಿತು. ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ ಗೌಡರು ನನ್ನ ಮೇಲಿಟ್ಟ ನಂಬಿಕೆ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ನನ್ನ ಮೇಲಿಟ್ಟಿರುವ ಭರವಸೆ ನನಗೆ ರಾಬರ್ಟ್ ಸಿನಿಮಾ ಮಾಡಲು ಪ್ರೇರಣೆಯಾಯಿತು' ಎಂದಿದ್ದಾರೆ.

  ಇದು ನನ್ನ ತಂಡದ ಪರಿಶ್ರಮ

  ಇದು ನನ್ನ ತಂಡದ ಪರಿಶ್ರಮ

  'ಇಷ್ಟು ದೊಡ್ಡ ಚಿತ್ರವನ್ನು ನಾನು ಯಾವುದೇ ಆತಂಕ ಭಯವಿಲ್ಲದೇ ನಿರ್ದೇಶಿಸಲು ಕಾರಣ ನನ್ನ ಬೆನ್ನ ಹಿಂದೆ ಬಂಡೆಯಂತೆ ನಿಂತ ನನ್ನ ನುರಿತ ತಂತ್ರಜ್ಞರ ತಂಡ. ರಾಬರ್ಟ್ ಎಂಬ ನನ್ನ ಧ್ವನಿ ಎಲ್ಲಾ ದಿಕ್ಕುಗಳಲ್ಲೂ ಪ್ರತಿಧ್ವನಿಸಿದ್ದು, ನನ್ನ ತಂಡದ ಪರಿಶ್ರಮದಿಂದ'

  ಇದೆಲ್ಲ ನಿಮಗಾಗಿ, ಮನರಂಜನೆಗಾಗಿ

  ಇದೆಲ್ಲ ನಿಮಗಾಗಿ, ಮನರಂಜನೆಗಾಗಿ

  'ಯಾವುದೇನೇ ಇರಲಿ ನಾನು ನಿರ್ದೇಶಕನಾಗಿ ಅನುಭವವನ್ನು ಉಪಯೋಗಿಸಿಕೊಂಡದ್ದು, ಶ್ರಮವನ್ನು ಹಾಕಿದ್ದು, ನಿರ್ಮಾಪಕರನ್ನು ಹುಡುಕಿದ್ದು, ಕತೆ ಚಿತ್ರಕತೆಯನ್ನು ಹೆಣೆದಿದ್ದು, ಕಲಾವಿದರನ್ನು ಬಳಸಿದ್ದು, ಸಂಗೀತ ಮಾಡಿಸಿದ್ದು, ಸಾಹಿತ್ಯ, ಸಂಭಾಷಣೆ ಬರೆಸಿದ್ದು, ಸಾಹಸ ನೃತ್ಯ ಚಿತ್ರೀಕರಿಸಿದ್ದು, ಓಡಾಟ ಹಾರಾಟ ಪ್ರತಿಯೊಂದು ನಿಮಗಾಗಿ ನಿಮ್ಮ ಮನರಂಜನೆಗಾಗಿ.

  ಚಿತ್ರಮಂದಿರಗಳಲ್ಲಿ ದರ್ಶನ್ ಅಬ್ಬರ: 'ರಾಬರ್ಟ್' ನೋಡಲು ಬೆಳ್ಳಂಬೆಳಗ್ಗೆ ಮುಗಿಬಿದ್ದ ಅಭಿಮಾನಿಗಳುಚಿತ್ರಮಂದಿರಗಳಲ್ಲಿ ದರ್ಶನ್ ಅಬ್ಬರ: 'ರಾಬರ್ಟ್' ನೋಡಲು ಬೆಳ್ಳಂಬೆಳಗ್ಗೆ ಮುಗಿಬಿದ್ದ ಅಭಿಮಾನಿಗಳು

  ಅಭಿಪ್ರಾಯ ಅನಿಸಿಕೆಗೆ ಕಾಯುತ್ತಿರುತ್ತೇನೆ- ತರುಣ್

  ಅಭಿಪ್ರಾಯ ಅನಿಸಿಕೆಗೆ ಕಾಯುತ್ತಿರುತ್ತೇನೆ- ತರುಣ್

  'ಓಣಿಯ ಮಗು ಎಲ್ಲಾ ಕಡೆ ಕುಣಿದು ಕೊನೆಗೆ ಅಮ್ಮನ ಮಡಿಲು ಸೇರುವಂತೆ ರಾಬರ್ಟ್ ನಿಮ್ಮ ಮಡಿಲು ಸೇರಲಿದೆ. ಇಂದಿನಿಂದ ಅದು ನಿಮ್ಮ ರಾಬರ್ಟ್. ರಾಜ್ಯದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ರಾಬರ್ಟ್ ಚಿತ್ರವನ್ನು ನೋಡಿ, ಹರಿಸಿ ಹಾರೈಸಿ ಬೆಳೆಸಿ. ಎಲ್ಲಿಯವರೆಗೂ ನಾನು ಪರೀಕ್ಷೆ ಬರೆದ ವಿದ್ಯಾರ್ಥಿಯಂತೆ. ಚುನಾವಣೆ ಎದುರಿಸಿದ ಅಭ್ಯರ್ಥಿಯಂತೆ ಫಲಿತಾಂಶಕ್ಕಾಗಿ ಕಾಯುತ್ತಿರುವ ತರುಣನಂತೆ ನಿಮ್ಮ ಅಭಿಪ್ರಾಯ ಅನಿಸಿಕೆಗೆ ಕಾಯುತ್ತಿರುತ್ತೇನೆ' ಎಂದು ತರುಣ್ ದೀರ್ಘವಾಗಿ ಬರೆದುಕೊಂಡಿದ್ದಾರೆ.

  'ರಾಬರ್ಟ್'ನಲ್ಲಿ ದರ್ಶನ್‌ಗೆ ಜೊತೆಯಾಗಿರುವ ಆ ಪುಟ್ಟ ಬಾಲಕ ಯಾರು?'ರಾಬರ್ಟ್'ನಲ್ಲಿ ದರ್ಶನ್‌ಗೆ ಜೊತೆಯಾಗಿರುವ ಆ ಪುಟ್ಟ ಬಾಲಕ ಯಾರು?

  ಕನ್ನಡ-ತೆಲುಗಿನಲ್ಲಿ ರಾಬರ್ಟ್ ಅದ್ದೂರಿ ರಿಲೀಸ್

  ಕನ್ನಡ-ತೆಲುಗಿನಲ್ಲಿ ರಾಬರ್ಟ್ ಅದ್ದೂರಿ ರಿಲೀಸ್

  ಮಾರ್ಚ್ 11, ಶಿವರಾತ್ರಿಯ ದಿನ ಕನ್ನಡ ಸಿನಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಾಬರ್ಟ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಇಷ್ಟು ದೊಡ್ಡ ಮಟ್ಟಕ್ಕೆ ತೆರೆ ಕಾಣುತ್ತಿರುವುದು ಸಂತಸದ ವಿಚಾರವಾಗಿದೆ. ಪರಭಾಷೆಯಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ತೆರೆ ಕಾಣುತ್ತಿರುವುದು ದರ್ಶನ್ ಮೊದಲ ಸಿನಿಮಾ ಇದಾಗಿದೆ.

  English summary
  Director Tharun Sudhir Penned Emotional Note on Darshan, Umapathi Gowda and Roberrt Movie Technicians.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X