ರಕ್ಷಿತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಕ್ರೇಜಿ ಫ್ಯಾನ್
ನಟಿ ರಕ್ಷಿತಾ ಪ್ರೇಮ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕ್ರೇಜಿ ಕ್ವೀನ್ ಗೆ ಅವರ ಕ್ರೇಜಿ ಫ್ಯಾನ್ ವಿಶ್ ಮಾಡಿದ್ದಾರೆ.
ರಕ್ಷಿತಾ ಅವರ ಕ್ರೇಜಿ ಫ್ಯಾನ್ ಬೇರೆ ಯಾರು ಅಲ್ಲ, ನಿರ್ದೇಶಕ ತರುಣ್ ಸುಧೀರ್. 'ಚೌಕ' ಸಿನಿಮಾ ಖ್ಯಾತಿಯ ತರುಣ್ ನಟಿ ರಕ್ಷಿತಾ ಅವರ ದೊಡ್ಡ ಅಭಿಮಾನಿ. ಈ ವಿಷಯವನ್ನು ಕೆಲ ಕಾರ್ಯಕ್ರಮಗಳಲ್ಲಿ ತರುಣ್ ಹೇಳಿಕೊಂಡಿದ್ದರು. ರಕ್ಷಿತಾ ಸಿನಿಮಾಗಳು, ಅವರ ನಟನೆ ಅಂದರೆ ತರುಣ್ ಗೆ ಬಹಳ ಇಷ್ಟ.

ರಕ್ಷಿತಾ ಅವರಿಗೆ ಟ್ವೀಟ್ ಮಾಡಿ ಹುಟ್ಟುಹಬ್ಬದ ವಿಶ್ ಮಾಡಿರುವ ಅವರು ''ನಾವು ನಿಮ್ಮನ್ನು ತೆರೆ ಮೇಲೆ ವರ್ಷಗಳ ಕಾಲ ನೋಡಿದ್ದೇವೆ. ನೀವು ನಮ್ಮ ಹೃದಯವನ್ನು ರಾಣಿಯ ರೀತಿ ಆಳಿದ್ದೀರಿ. ನಿಮ್ಮನ್ನು ಕ್ರೇಜಿ ಕ್ವೀನ್ ಎಂದು ಕರೆಯುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ನಿಮಗೆ ಸಂತೋಷ ಮತ್ತು ಯಶಸ್ಸು ಸಿಗಲಿ. ಇಂದು ಲಾಂಚ್ ಆಗುತ್ತಿರುವ ನಿಮ್ಮ ಹೊಸ ಪ್ರೊಡಕ್ಷನ್ ಗೆ ಶುಭವಾಗಲಿ.'' ಎಂದು ಟ್ವೀಟ್ ಮಾಡಿದ್ದಾರೆ.
ರಕ್ಷಿತಾ ಪ್ರೇಮ್ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಹೊಸ ಪ್ರೊಡಕ್ಷನ್ಸ್ ಸಿನಿಮಾ ಶುರು ಆಗುತ್ತಿದೆ. ಈ ಸಿನಿಮಾದಲ್ಲಿ ರಕ್ಷಿತಾ ಸಹೋದರ ಅಭಿಷೇಕ್ ನಾಯಕನಾಗಿದ್ದಾರೆ.


Click it and Unblock the Notifications











