For Quick Alerts
  ALLOW NOTIFICATIONS  
  For Daily Alerts

  ರಕ್ಷಿತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಕ್ರೇಜಿ ಫ್ಯಾನ್

  |

  ನಟಿ ರಕ್ಷಿತಾ ಪ್ರೇಮ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕ್ರೇಜಿ ಕ್ವೀನ್ ಗೆ ಅವರ ಕ್ರೇಜಿ ಫ್ಯಾನ್ ವಿಶ್ ಮಾಡಿದ್ದಾರೆ.

  ರಕ್ಷಿತಾ ಅವರ ಕ್ರೇಜಿ ಫ್ಯಾನ್ ಬೇರೆ ಯಾರು ಅಲ್ಲ, ನಿರ್ದೇಶಕ ತರುಣ್ ಸುಧೀರ್. 'ಚೌಕ' ಸಿನಿಮಾ ಖ್ಯಾತಿಯ ತರುಣ್ ನಟಿ ರಕ್ಷಿತಾ ಅವರ ದೊಡ್ಡ ಅಭಿಮಾನಿ. ಈ ವಿಷಯವನ್ನು ಕೆಲ ಕಾರ್ಯಕ್ರಮಗಳಲ್ಲಿ ತರುಣ್ ಹೇಳಿಕೊಂಡಿದ್ದರು. ರಕ್ಷಿತಾ ಸಿನಿಮಾಗಳು, ಅವರ ನಟನೆ ಅಂದರೆ ತರುಣ್ ಗೆ ಬಹಳ ಇಷ್ಟ.

  ಇದೇ ತಿಂಗಳು ಪ್ರೇಮ್ ಹೊಸ ಸಿನಿಮಾ ಟೈಟಲ್ ಲಾಂಚ್ ಇದೇ ತಿಂಗಳು ಪ್ರೇಮ್ ಹೊಸ ಸಿನಿಮಾ ಟೈಟಲ್ ಲಾಂಚ್

  ರಕ್ಷಿತಾ ಅವರಿಗೆ ಟ್ವೀಟ್ ಮಾಡಿ ಹುಟ್ಟುಹಬ್ಬದ ವಿಶ್ ಮಾಡಿರುವ ಅವರು ''ನಾವು ನಿಮ್ಮನ್ನು ತೆರೆ ಮೇಲೆ ವರ್ಷಗಳ ಕಾಲ ನೋಡಿದ್ದೇವೆ. ನೀವು ನಮ್ಮ ಹೃದಯವನ್ನು ರಾಣಿಯ ರೀತಿ ಆಳಿದ್ದೀರಿ. ನಿಮ್ಮನ್ನು ಕ್ರೇಜಿ ಕ್ವೀನ್ ಎಂದು ಕರೆಯುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ನಿಮಗೆ ಸಂತೋಷ ಮತ್ತು ಯಶಸ್ಸು ಸಿಗಲಿ. ಇಂದು ಲಾಂಚ್ ಆಗುತ್ತಿರುವ ನಿಮ್ಮ ಹೊಸ ಪ್ರೊಡಕ್ಷನ್ ಗೆ ಶುಭವಾಗಲಿ.'' ಎಂದು ಟ್ವೀಟ್ ಮಾಡಿದ್ದಾರೆ.

  'ಪ್ರೇಮ್ ಪಿಕ್ಚರ್' ಅಲ್ಲ ಈಗ 'ರಕ್ಷಿತಾ ಫಿಲ್ಮ್ ಫ್ಯಾಕ್ಟರಿ'ಯಲ್ಲಿ ಹೊಸ ಸಿನಿಮಾ 'ಪ್ರೇಮ್ ಪಿಕ್ಚರ್' ಅಲ್ಲ ಈಗ 'ರಕ್ಷಿತಾ ಫಿಲ್ಮ್ ಫ್ಯಾಕ್ಟರಿ'ಯಲ್ಲಿ ಹೊಸ ಸಿನಿಮಾ

  ರಕ್ಷಿತಾ ಪ್ರೇಮ್ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಹೊಸ ಪ್ರೊಡಕ್ಷನ್ಸ್ ಸಿನಿಮಾ ಶುರು ಆಗುತ್ತಿದೆ. ಈ ಸಿನಿಮಾದಲ್ಲಿ ರಕ್ಷಿತಾ ಸಹೋದರ ಅಭಿಷೇಕ್ ನಾಯಕನಾಗಿದ್ದಾರೆ.

  English summary
  Kannada director Tharun Sudhir wishes for actress Rakshita Prem birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X