'ತಾಯಿಗೆ ತಕ್ಕ ಮಗ'ನಿಗೆ A ಸರ್ಟಿಫಿಕೇಟ್ : ಬೇಸರಗೊಂಡ ಶಶಾಂಕ್
'ತಾಯಿಗೆ ತಕ್ಕ ಮಗ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲ ಸಿನಿಮಾಗಳಂತೆ ರಿಲೀಸ್ ಮೊದಲು ಸಿನಿಮಾ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಲಾಗಿದೆ.
ಆದರೆ, ಇದು ನಿರ್ದೇಶಕ ಶಶಾಂಕ್ ಅವರ ಬೇಸರಕ್ಕೆ ಕಾರಣವಾಗಿದೆ. ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದ್ದು, ಸಿನಿಮಾಗೆ ಸಮಸ್ಯೆ ಆಗಿದೆ ಎನ್ನುವುದು ಶಶಾಂಕ್ ಮಾತು.
ಈ ಬಗ್ಗೆ 'ಫಿಲ್ಮಿ ಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ಶಶಾಂಕ್ ''ನಾವು ಎ ಪ್ರಮಾಣ ಪತ್ರವನ್ನು ನಿರೀಕ್ಷೆ ಮಾಡಿರಲಿಲ್ಲ. ಚಿತ್ರದಲ್ಲಿ ಕೆಲವು ಅಂಶಗಳು ಇದ್ದು, ಅದಕ್ಕಾಗಿ ಎ ಸಿಕ್ಕಿರಬಹುದು. ಆದರೆ, ಈ ಬಗ್ಗೆ ಸೋಮವಾರ ಸುದ್ದಿಗೋಷ್ಟಿ ನಡೆಸಿ ವಿವರ ನೀಡುತ್ತೇನೆ'' ಎಂದರು.

ಸಿನಿಮಾದ ಬಿಡುಗಡೆಯ ದಿನಾಂಕ ನವೆಂಬರ್ 16ರ ರಂದು ನಿಗದಿಯಾಗಿದ್ದು, ಈ ವೇಳೆ ಎ ಸರ್ಟಿಫಿಕೇಟ್ ಸಿಕ್ಕಿರುವುದು ಸ್ವಲ್ಪ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಶಶಾಂಕ್.
ಅಂದಹಾಗೆ, ಈ ಸಿನಿಮಾ ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ. ಆಶಿಕಾ ರಂಗನಾಥ್ ಚಿತ್ರದ ನಾಯಕಿ ಆಗಿದ್ದಾರೆ.
More from Filmibeat
English summary
Kannada actress Sumalatha and Ayaj Rao's 'Thayige Thakka Maga' gets a certificate from censor board.


Click it and Unblock the Notifications











