ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ 'ಸ್ಟಾರ್' ಯಾರು ಗೊತ್ತಾ?
Recommended Video

2018ನೇ ವರ್ಷ ಮುಗಿಯುತ್ತಾ ಬಂತು. ಸಂಪ್ರದಾಯದಂತೆ ವರ್ಷದ ಕೆಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಚರ್ಚೆ ಮಾಡುವ ಸಮಯವಿದು. ಸಿನಿಜಗತ್ತಿನಲ್ಲಿ ಈ ವರ್ಷ ತುಂಬಾ ಬೆಳವಣಿಗೆಗಳಾಗಿವೆ. ಕೆಲವು ಸ್ಟಾರ್ ನಟ-ನಟಿಯರು ಮದುವೆ ಆದ್ರು. ಇನ್ನು ಕೆಲವರು ತಂದೆ-ತಾಯಿ ಆದ್ರು. ಕೆಲವರು ನಿಧನರಾದರು.
ಕಾಂಟ್ರುವರ್ಸಿಗಳು ಆಯಿತು, ರಾಜಕೀಯ ಬೆಳವಣಿಗೆ ಆಯ್ತು. ಗಾಸಿಪ್ ಗಳು ಸದ್ದು ಮಾಡಿದ್ವು. ರಿಯಾಲಿಟಿ ಶೋಗಳು ಸೌಂಡ್ ಮಾಡಿದ್ವು. ಹೊಸಬರು ಬಂದ್ರು, ಹೊಸ ಹೊಸ ಸಿನಿಮಾಗಳು ಬಂದ್ವು. ಹೀಗೆ, ಅನೇಕ ಘಟನೆಗಳು ನಡೆದಿದೆ. ಅನೇಕರು ವಾರಗಟ್ಟಲೇ ಸುದ್ದಿಯಾಗಿದ್ದರು.
ಇಷ್ಟೆಲ್ಲಾ ಇದ್ಮೇಲೆ ಈ ವರ್ಷ ಯಾವ ಸ್ಟಾರ್ ಅಥವಾ ಯಾವ ಸೆಲೆಬ್ರಿಟಿಯನ್ನ ಗೂಗಲ್ ನಲ್ಲಿ ಹೆಚ್ಚು ಜನರು ಹುಡುಕಿದ್ದಾರೆ. ಯಾವ ವಿಷ್ಯಕ್ಕಾಗಿ ಅವರನ್ನ ಸರ್ಚ್ ಮಾಡಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ಇಲ್ಲಿದೆ ನೋಡಿ ಉತ್ತರ. ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚ ಜನರಿಂದ ಹುಡುಕಲ್ಪಟ್ಟ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿ ಬಹಿರಂಗವಾಗಿದೆ. (ಭಾರತದಲ್ಲಿ ಹೆಚ್ಚು ಸರ್ಚ್ ಆಗಿರುವ ವ್ಯಕ್ತಿ)

ಶ್ರೀದೇವಿ ಪತಿ ಬೋನಿ
ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಈ ವರ್ಷ ಹೆಚ್ಚು ಸರ್ಚ್ ಆಗಿರುವವರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಬೋನಿ ಕಪೂರ್ ಪತ್ನಿ ಶ್ರೀದೇವಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಈ ಸಾವಿನಿಂದ ಬೋನಿ ಕಪೂರ್ ಮತ್ತು ಜಾಹ್ನವಿ ಕಪೂರ್ ತಿಂಗಳುಗಟ್ಟಲೇ ಹೆಡ್ ಲೈನ್ ಆಗಿದ್ದರು. ಬಹುಶಃ ಈ ಒಂದು ಬೆಳವಣಿಗೆ ಬೋನಿ ಕಪೂರ್ ಹೆಚ್ಚು ಸರ್ಚ್ ಆಗಲು ಕಾರಣವಾಗಿದೆ.

ಅನೂಪ್ ಜಲೋಟ
ಬಿಗ್ ಬಾಸ್ ಹಿಂದಿ ಸೀಸನ್ 12ರಲ್ಲಿ ಸ್ಪರ್ಧಿಯಾಗುವ ಮೂಲಕ ಭಾರಿ ಸುದ್ದಿಯಾಗಿದ್ದ ಗಾಯಕ, ಸಂಗೀತ ನಿರ್ದೇಶಕ ಅನೂಪ್ ಜಲೋಟ ಈ ವರ್ಷ ಹೆಚ್ಚು ಹುಡುಕಲ್ಪಟ್ಟವರಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. 65 ವರ್ಷ ಅನೂಪ್ ಅವರು 28 ವರ್ಷದ ಜಸ್ಲೀನ್ ಮಥಾರು ಜೊತೆ ಪ್ರೀತಿಯಲ್ಲಿದ್ದರು. ಈ ಘಟನೆ ಇವರ ಬಗ್ಗೆ ಹೆಚ್ಚು ಹುಡುಕಲು ಕಾರಣವಾಗಿದೆ.

ಪ್ರಿನ್ಸ್ ಹ್ಯಾರಿ ಪತ್ನಿ ಮೇಘನ್ ಮಾರ್ಕ್ಲೆ
ಬ್ರಿಟನ್ ರಾಜಕುಮಾರ ಹ್ಯಾರಿ ಅವರನ್ನ ಮದುವೆಯಾಗುವ ಮೂಲಕ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದ ಅಮೆರಿಕ ನಟಿ ಮೇಘನ್ ಮಾರ್ಕ್ಲೆ ಈ ವರ್ಷ ಹೆಚ್ಚು ಹುಡುಕಲ್ಪಟ್ಟವರಲ್ಲಿ ಏಂಟನೇ ಸ್ಥಾನದಲ್ಲಿದ್ದಾರೆ. ಮೇ 19 ರಂದು ಲಂಡನ್ ನ ವಿಂಡ್ಸರ್ ಕ್ಯಾಸಲ್ ನಲ್ಲಿ ಮೇಘನ್ ಮಾರ್ಕ್ಲೆ ಮತ್ತು ಪ್ರಿನ್ಸ್ ಹ್ಯಾರಿ ಇಬ್ಬರೂ ಈ ವರ್ಷ ರಾಯಲ್ ಆಗಿ ಮದುವೆ ಆಗಿದ್ದರು. ಪ್ರಿಯಾಂಕಾ ಚೋಪ್ರಾ, ಜಾರ್ಜ್ ಕ್ಲೂನಿ, ಡೇವಿಡ್ ಬೆಕ್ಕಂ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸಲ್ಲು ಭಾಯ್
ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿ ಪಡೆದುಕೊಂಡಿದ್ದ ಸಲ್ಮಾನ್ ಖಾನ್ ಬಗ್ಗೆ ಜನರು ಹೆಚ್ಚು ಆಸಕ್ತಿ ತೋರಿದ್ದಾರೆ. ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟವರಲ್ಲಿ ಸಲ್ಲು ಏಳನೇ ಸ್ಥಾನದಲ್ಲಿದ್ದಾರೆ. ಸಲ್ಲು ಅಭಿನಯದ 'ರೇಸ್-3' ಸಿನಿಮಾ ಈ ವರ್ಷ ಬಿಡುಗಡೆಯಾಗಿತ್ತು. 'ಲವ್ ರಾತ್ರಿ' ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. ಜೊತೆಗೆ ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಜೈಲಿಗೂ ಹೋಗಿದ್ದರು, ನಂತರ ಜಾಮೀನು ಪಡೆದು ಹೊರಬಂದರು.

ಸೈಫ್ ಅಲಿ ಖಾನ್ ಪುತ್ರಿ
ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಈ ವರ್ಷ ಹೆಚ್ಚು ಸದ್ದು ಮಾಡಿದ್ದಾರೆ. ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟವರಲ್ಲಿ ಸಾರಾ ಆರನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಸಿನಿಮಾರಂಗ ಪ್ರವೇಶ ಮಾಡಿದ್ದ ಸಾರಾ, ಈ ವರ್ಷ ರಣ್ವೀರ್ ಸಿಂಗ್ ಅಭಿನಯದ 'ಸಿಂಬಾ' ಚಿತ್ರದಲ್ಲಿ ನಟಿಸಿದ್ದಾರೆ. ಆದ್ರೆ, ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಈ ಮಧ್ಯೆ 'ಕಾಫಿ ವಿತ್ ಕರಣ್ ಸೀಸನ್ 6' ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡು ದೊಡ್ಡ ಸದ್ದುಯಾಗಿದ್ದರು.

ಆನಂದ್ ಆಹುಜಾ
ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಈ ವರ್ಷ ಮದುವೆ ಆದರು. ಸೋನಂ ಕಪೂರ್ ಮದುವೆ ಯಾಗಿರುವ ವ್ಯಕ್ತಿ ಯಾರು ಎಂದು ತಿಳಿಯಲು ಜನರು ಆಸಕ್ತಿ ತೋರಿದ್ದಾರೆ. ಹಾಗಾಗಿ, ಸೋನಂ ಕಪೂರ್ ಪತಿ ಆನಂದ್ ಆಹುಜಾ ಹೆಚ್ಚು ಹುಡುಕಲ್ಪಟ್ಟಿದ್ದಾರೆ. ಟಾಪ್ ಹತ್ತು ಜನರಲ್ಲಿ ಆನಂದ್ ಐದನೇ ಸ್ಥಾನದಲ್ಲಿದ್ದಾರೆ.

ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಅಭಿನಯದ ಯಾವ ಸಿನಿಮಾನೂ ಈ ವರ್ಷ ಬಿಡುಗಡೆಯಾಗಿಲ್ಲ. ಆದ್ರೆ, ನಿಶ್ಚಿತಾರ್ಥ ಮತ್ತು ಮದುವೆ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದರು. ಹಾಗಾಗಿ, ಪ್ರಿಯಾಂಕಾ ಅಭಿಮಾನಿಗಳು ಈಕೆಯ ಪತಿ ಹಾಗೂ ಮದುವೆ ಬಗ್ಗೆ ಹುಡುಕಲು ಹೆಚ್ಚು ಸರ್ಚ್ ಮಾಡಿದ್ದಾರೆ. ಅಮೇರಿಕನ್ ಸಿಂಗರ್ ನಿಕ್ ಜೋನಸ್ ಅವರೊಂದಿಗೆ ಪಿಗ್ಗಿ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾಂಕಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಯಾರು ಈ ಸ್ವಪ್ನ ಚೌಧರಿ
ಹರಿಯಾಣ ಮೂಲದ ಖ್ಯಾತ ಡ್ಯಾನ್ಸರ್, ಗಾಯಕಿಯಾಗಿರುವ ಸ್ವಪ್ನ ಚೌಧರಿ ಈ ವರ್ಷ ಅಚ್ಚರಿಯೆಂಬಂತೆ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಮೂರನೇ ಸ್ಥಾನ ಪಡೆದಿರುವುದು ನಿಜಕ್ಕೂ ಕುತೂಹಲ. ಕಳೆದ ವರ್ಷ ಬಿಗ್ ಬಾಸ್ ಮನೆಗೆ ಹೋಗಿದ್ದ ಸ್ವಪ್ನ, ಈ ವರ್ಷ ಹಲವು ಶೋಗಳನ್ನ ಹಾಗೂ ಬಾಲಿವುಡ್ ನ ಹಲವು ಚಿತ್ರಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಹೆಜ್ಜೆಹಾಕಿದ್ದಾರೆ.

ಪ್ರಿಯಾಂಕಾ ಪತಿ ನಿಕ್
ಇನ್ನು ಪ್ರಿಯಾಂಕಾ ಚೋಪ್ರಾ ಜೊತೆ ಅವರ ಪತಿ ನಿಕ್ ಜೋನಸ್ ಕೂಡ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟಿದ್ದಾರೆ. ಕಾರಣ, ಪ್ರಿಯಾಂಕಾ ಜೊತೆ ಎಂಗೇಜ್ ಮೆಂಟ್ ಮತ್ತು ಮದುವೆ. ಈ ವರ್ಷ ಹೆಚ್ಚು ಜನರು ಸರ್ಚ್ ಮಾಡಿರುವ ಪಟ್ಟಿಯಲ್ಲಿ ನಿಕ್ ಜೋನಸ್ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಿಯಾ ವಾರಿಯರ್
ಕಣ್ಸನ್ನೆ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಪ್ರಿಯಾ ಪ್ರಕಾಶ ವಾರಿಯರ್ ಈ ವರ್ಷದ ಸೆಲೆಬ್ರಿಟಿ ಎನ್ನಬಹುದು. ಅಂದ್ರೆ, ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ಸೆಲೆಬ್ರಿಟಿಗಳಲ್ಲಿ ಪ್ರಿಯಾ ನಂಬರ್ 1 ಸ್ಥಾನದಲ್ಲಿದ್ದಾರೆ.


Click it and Unblock the Notifications











