ನಟರಾಕ್ಷಸ ಡಾಲಿಯ ಅಟ್ಟಹಾಸಕ್ಕೆ ಬೆರಗಾದ ಪ್ರೇಕ್ಷಕ

By Pavithra

Recommended Video

ನಟರಾಕ್ಷಸ ಡಾಲಿಯ ಅಟ್ಟಹಾಸಕ್ಕೆ ಬೆರಗಾದ ಪ್ರೇಕ್ಷಕ | Filmibeat Kannada

ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಟಗರು ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮಲ್ಟಿ ಸ್ಟಾರ್ ಸಿನಿಮಾ ಆದ ಕಾರಣ ಎಲ್ಲಾ ಕಲಾವಿದರ ಅಭಿಮಾನಿಗಳು ಥಿಯೇಟರ್ ಗಳತ್ತ ಜಮಾಯಿಸುತಿದ್ದಾರೆ.

ಟಗರು ಸಿನಿಮಾ ನೋಡಿ ಹೊರ ಬರುತ್ತಿರುವ ಪ್ರತಿ ಪ್ರೇಕ್ಷಕ ತನ್ನ ಜೊತೆಯಲ್ಲಿ 'ಡಾಲಿ' ಪಾತ್ರವನ್ನ ಕರೆದುಕೊಂಡು ಹೋಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಡಾಲಿ ಪಾತ್ರವನ್ನ ಚಿತ್ರಣ ಮಾಡಲಾಗಿದೆ. ಸಾಕಷ್ಟು ವರ್ಷಗಳಿಂದ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟ ಧನಂಜಯ ಇದೇ ಮೊದಲ ಬಾರಿಗೆ ಖಳನಾಯಕನಾಗಿ ಆರ್ಭಟಿಸಿದ್ದಾರೆ.

ಡಾಲಿ ಪಾತ್ರಕ್ಕೆ ಜನ ಮರುಳಾಗಿರುವುದು ಯಾಕೆ? ಅಂತದ್ದೇನಿದೆ ಆ ಪಾತ್ರದಲ್ಲಿ? ಸ್ಪೆಷಲ್ ಸ್ಟಾರ್ ಡಾಲಿ ಆಗಲು ಏನೆಲ್ಲಾ ಬದಲಾವಣೆ ಮಾಡಿಕೊಂಡಿದ್ದರು? ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದೆ ಓದಿ

ನಟರಾಕ್ಷಸನಾದ ಧನಂಜಯ

ನಟರಾಕ್ಷಸನಾದ ಧನಂಜಯ

ಕಳೆದ ಐದು ವರ್ಷದ ಹಿಂದೆ ಇವರನ್ನ ಕನ್ನಡ ಸಿನಿಮಾರಂಗದ ಪ್ರೇಕ್ಷಕರು ನಾಯಕನಾಗಿ ಸ್ವಾಗತ ಮಾಡಿದ್ದರು. ಅದೇ ಜನರು ಇಂದು ಧನಂಜಯ ಅವರನ್ನ ಖಳನಾಯಕನಾಗಿ ಬಾಚಿ ಅಪ್ಪಿಕೊಂಡಿದ್ದಾರೆ.

ಪ್ರೇಕ್ಷಕರಿಗೆ ರಾಕ್ಷಸನ ಮೇಲೆ ಪ್ರೀತಿ

ಪ್ರೇಕ್ಷಕರಿಗೆ ರಾಕ್ಷಸನ ಮೇಲೆ ಪ್ರೀತಿ

ಟಗರು ಸಿನಿಮಾದಲ್ಲಿ ಡಾಲಿ ಪಾತ್ರವನ್ನ ಜನರು ಮೆಚ್ಚಿಕೊಂಡಿದ್ದಾರೆ. ನೆಗೆಟಿವ್ ಶೇಡ್ ಗಾಗಿ ತಮ್ಮನ್ನ ತಾವು ಬದಲಾವಣೆ ಮಾಡಿಕೊಂಡಿರುವ ಧನಂಜಯ ಅಭಿನಯದಲ್ಲಿ ಪ್ರೇಕ್ಷಕರನ್ನ ಮೋಡಿ ಮಾಡಿದ್ದಾರೆ.

ನೀಲಿ ಕಣ್ಣಿನ ಖಳನಾಯಕ

ನೀಲಿ ಕಣ್ಣಿನ ಖಳನಾಯಕ

ಡಾಲಿ ಪಾತ್ರದಲ್ಲಿ ಧನಂಜಯ ಅವರ ಅಭಿನಯವನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಇಡೀ ಕನ್ನಡ ಸಿನಿಮಾರಂಗ ಇಷ್ಟ ಪಟ್ಟಿದೆ. ಎಲ್ಲರೂ ಧನಂಜಯನಿಗೆ ನಟ ರಾಕ್ಷಸ ಎಂದು ಬಿರುದು ನೀಡಿದ್ದಾರೆ.

ತೆರೆ ಮೇಲೆ ಡಾಲಿಯ ಅಟ್ಟಹಾಸ

ತೆರೆ ಮೇಲೆ ಡಾಲಿಯ ಅಟ್ಟಹಾಸ

ಧನಂಜಯ ಕೇವಲ ನಾಯಕನಲ್ಲ , ಕಲಾವಿದ ಎನ್ನುವುದನ್ನ ನಿರೂಪಿಸಿದ್ದಾರೆ. ಸೂರಿ ಧನಂಜಯ ಅವರಿಂದ ಅದ್ಬುತವಾದ ನಟನೆಯನ್ನ ಹೊಸ ತೆಗೆದಿದ್ದಾರೆ. ತೆರೆ ಮೇಲೆ ಟಗರು ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕರಿಗೂ ಈತ ನಟ ರಾಕ್ಷಸನೇ ಎನ್ನುವ ಮಾತುಗಳು ಬರ್ತಿವೆ.

More from Filmibeat

English summary
The audience appreciates Dhanunjaya's performance in Kannada film Tagaru. fans called Dhananjaya Natarakshasa. Tagaru movie movie has been well received everywhere.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X