ನನ್ನಿಂದ ತಪ್ಪಾಗಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ - ಸಪ್ತಮಿ ಗೌಡ ಆಡಿಯೋ ವೈರಲ್..?

By ಫಿಲ್ಮಿಬೀಟ್ ಡೆಸ್ಕ್

ಯುವರಾಜ್ ಕುಮಾರ್ ಮತ್ತು ಶ್ರೀದೇವಿ ನಡುವೆ ಸಪ್ತಮಿ ಗೌಡ ಬಂದಿದ್ದಾರೆ ಅನ್ನುವ ಅನುಮಾನ ಅನೇಕರಲ್ಲಿದೆ. ಖುದ್ದು ಶ್ರೀದೇವಿಯವರೇ ಈ ಆರೋಪವನ್ನ ಮಾಡಿದ್ದಾರೆ. ಸಪ್ತಮಿ ಗೌಡ ಕೂಡ ಶ್ರೀದೇವಿ ಅವರ ವಿರುದ್ಧ ಮಾನನಷ್ಟ ಮೂಕದ್ದಮೆಯನ್ನೂ ಹೂಡಿದ್ದಾರೆ. ಇದರ ನಡುವೆ ಈಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ವೈರಲ್ ಆದ ಈ ಆಡಿಯೋದಲ್ಲಿ ಹಾಯ್ ಸರ್ ನಿಮಗೆ ಈಗಾಗ್ಲೇ ವಿಷಯ ಗೊತ್ತಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿನೂ ಕೇಳಿ. ನನ್ನಿಂದ ತಪ್ಪಾಗಿಲ್ಲ ಎಂದು ನಾನು ಹೇಳ್ತಿಲ್ಲ. ಖಂಡಿತ ನನ್ನಿಂದ ತಪ್ಪಾಗಿದೆ. ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ ಸರ್ ನಾನು ಎಂದಿಗೂ ಸಹ ಗುರುನ (ಯುವ ಮೂಲ ಹೆಸರು) ಮದ್ವೆ ಬಿಟ್ಟು ಬಾ ಅಂತ ಯಾವತ್ತೂ ಹೇಳಿಲ್ಲ. ನೀವು ಬೇಕಿದ್ದರೆ ಅವನನ್ನು ಕೇಳಬಹುದು. ಯಾರನಾದರೂ ಕೇಳಬಹುದು. ಇದನ್ನ ವರ್ಕೌಟ್ ಮಾಡು ಇದು ತಪ್ಪಾಗುತ್ತೆ ಬೇಡ ಎಂದು ನಾನು ತುಂಬಾ ಸಲ ಹೇಳಿದೀನಿ. ಹೌದು ಇದು ನಿಮ್ಮ ಸೆಟ್‌ನಲ್ಲಿ ಆಯ್ತು ಅದಕ್ಕೆ ನಿಮಗೆ ನಮ್ಮ ಮೇಲೆ ಎಷ್ಟೇ ಕೋಪ ಇರಬಹುದು ಸರ್ ಪರವಾಗಿಲ್ಲ ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿಯನ್ನೂ ಕೇಳಿ ಎಂಬ ಮಾತು ಆಡಿಯೋದಲ್ಲಿದೆ.

the-audio-of-sapthami-gowda-allegedly-admitting-to-her-relationship-with-yuvarajkumar-has-gone-viral

ಗುರುದು ಫಸ್ಟ್ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ಎಲ್ಲರೂ ಕಷ್ಟ ಪಟ್ಟು ಮಾಡಿರುವ ಸಿನಿಮಾ. 100% ನಾನು ಮಧ್ಯ ಬರಲ್ಲ ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ' ಎಂಬ ಮಾತುಗಳು ಆಡಿಯೋನಲ್ಲಿವೆ.

ಹೌದು ಸರ್ ನನ್ನಿಂದ ಇನ್ನೊಬ್ಬರಿಗೆ ನೋವಾಗಿದೆ. ಆದರೆ ನಿಜವಾಗಿಯೂ ನಾನು ನಂಬಿ ಮಾಡಿದ್ದು ಸರ್ ಅದನ್ನ.ಗುರು ಬಂದು ನನ್ನ ಹತ್ರ ಅಷ್ಟು ಹೇಳಿದ ಮೇಲೆಯೇ ನಾನು ಮುಂದುವರೆದೆ. ಇಲ್ಲಾಂದ್ರೆ ನಾನು... ಸಾರಿ ಸರ್, ಜಸ್ಟ್ ಚಾನ್ಸ್ ಕೇಳ್ತಿದ್ದೀನಿ ಅಷ್ಟೇ ಸರ್ ಎಂಬ ಮಾತು ಕೂಡ ಈ ವೈರಲ್ ಆದ ಆಡಿಯೋದಲ್ಲಿದೆ.

the-audio-of-sapthami-gowda-allegedly-admitting-to-her-relationship-with-yuvarajkumar-has-gone-viral

ಅಂದ್ಹಾಗೇ ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಯುವ ಬಾಳಿಗೆ ಸಪ್ತಮಿ ಗೌಡ ಎಂಬ ವಾದವನ್ನೂ ಅನೇಕರು ಮಾಡುತ್ತಿದ್ದಾರೆ. ಇನ್ನೂ 'ಯುವ' ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ.ಈ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ. ಆ ಸಮಯದಲ್ಲಿ ಸಪ್ತಮಿ ಗೌಡ ಅವರು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಕಳಿಸಿದ್ದ ಆಡಿಯೋ ಇದು ಎಂಬ ಮಾತು ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

More from Filmibeat

English summary
The Audio Of Sapthami Gowda Where allegedly she Admitts admitting to being in a relationship with Yuvarajkumar has gone viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X