ಟ್ರೈಲರ್: ಕಲಾವಿದನ ನಿಜವಾದ ಕಥೆಯೇ 'ದಿ ಬೆಸ್ಟ್ ಆಕ್ಟರ್'

By Abhimanyu

ಶೀರ್ಷಿಕೆಯಿಂದ ವಿಶೇಷವಾಗಿ ಗಮನ ಸೆಳೆದಿದ್ದ 'ದಿ ಬೆಸ್ಟ್ ಆಕ್ಟರ್' ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ರೇಣುಕಾ ಸ್ಟುಡಿಯೋದಲ್ಲಿ ಟ್ರೈಲರ್ ಬಿಡುಗಡೆ ಸಮಾರಂಭ ಜರುಗಿತು. ಕಲಾತ್ಮಕವಾಗಿ ಮೂಡಿಬಂದಿರುವ ಈ ಟ್ರೈಲರ್ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸು ಮುಟ್ಟುವಂತಿದೆ.

'ಸಂಚಾರಿ' ತಂಡದ ಪ್ರತಿಭೆಯಾಗಿರುವ ನಾಗರಾಜ್ ಸೋಮಯಾಜಿ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ, ಇದು ನಾಲ್ಕೈದು ನಿಮಿಷದ ಕಿರುಚಿತ್ರವು ಅಲ್ಲ, ಎರಡು ಗಂಟೆ ಮನರಂಜನೆ ಕೊಡುವ ಸಿನಿಮಾನೂ ಅಲ್ಲ. ಇದು 43 ನಿಮಿಷಗಳ ಬ್ಯೂಟಿಫುಲ್ ಸಿನಿಮಾ.

''ಕಲಾವಿದರು ಪರದೆ ಮೇಲೆ ಮಾತ್ರ ಸರ್ವಗುಣ ಸಂಪನ್ನರು.....ಒಂದು ಸರಿ ಮೇಕಪ್ ಕಳಚಿದ ಮೇಲೆ ಅವರು ಎಲ್ಲರಂತೆ ಸಾಮಾನ್ಯರು...''ಈ ಒಂದು ಸಂಭಾಷಣೆಯೇ ಇಡೀ ಚಿತ್ರದ ಕಥೆ ಏನು ಎಂಬುದನ್ನ ಹೇಳುತ್ತಿದೆ.

the best actor movie trailer released

ರಂಗಭೂಮಿ ಹಾಗೂ ತುಳು ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಮಾಧವ ಕಾರ್ಕಡ ಅವರು ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನ ನಿಭಾಯಿಸಿದ್ದಾರೆ. ಶಿಶಿರ್ ಕುಮಾರ್, ಮಾಸ್ಟರ್ ಉಲ್ಲಾಸ್ ಸಾಲಿಗ್ರಾಮ, ಪ್ರತಿಮಾ ನಾಯಕ್ ಸೇರಿದಂತೆ ಹಲವರು ಕಲಾವಿದರು ಈ ಚಿತ್ರದಲ್ಲಿದ್ದಾರೆ.

ಶ್ರೀಧರ್ ಬನವಾಸಿ ಕಥೆ ಬರೆದಿದ್ದು, ಭಾಸ್ಕರ್ ಬಂಗೇರ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಎಸ್ ಕೆ ರಾವ್ ಅವರು ಕ್ಯಾಮೆರಾ ಆಕರ್ಷಿಸುತ್ತಿದೆ. ಅರ್ಜುನ್ ರಾವ್ ಅವರು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.ಬಿ ಎಸ್ ಸಂಕೇತ್ ಅವರು ಸಂಕಲನವನ್ನ ಒಳಗೊಂಡಿದೆ. ಈ ಮೂರು ವಿಭಾಗದಲ್ಲಿ ಸಿನಿಮಾ ಇಷ್ಟವಾಗುವಂತಿದೆ. 'ಸರ್ವಸ್ವ' ಸಂಸ್ಥೆಯಡಿ ಈ ಚಿತ್ರವನ್ನ ನಾಗರಾಜ್ ಸೋಮಯಾಜಿ ಅವರೇ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Nagaraj Somayaji debut direction's the best actor movie trailer has released. National Award Winner, Sanchari Vijay has played an important role in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X