ಬಿಗ್ ಬಾಸ್‌ನಲ್ಲಿ ಅರಳಿದ್ದು ಪ್ರೇಮಕಥೆ ಅಲ್ಲ ; ತನಿಷಾ ಕುಪ್ಪಂಡಗೆ ಕ್ಷಮೆ ಕೇಳಿದ ವರ್ತೂರು ಸಂತೋಷ್

ಕಾಲ ಎಷ್ಟೇ ಬದಲಾದರು ಇವತ್ತು ಕೂಡ ಅದೂ-ಇದೂ ಎಂದು ಮಾತನಾಡುವರ ಸಂಖ್ಯೆ ಕಡಿಮೆಯಾಗಿಲ್ಲ. ತಮಗೆ ಸಂಬಂಧ ಇಲ್ಲದ ವಿಚಾರದ ಕುರಿತು ಹಲವಾರು ಜನ ಇವತ್ತು ಕೂಡ ಮಾತನಾಡುತ್ತಲೇ ಇರುತ್ತಾರೆ. ತಮ್ಮ ಮಾತುಗಳಿಂದ ಇನ್ನೊಬ್ಬರಿಗೆ ನೋವಾಗಬಹುದು ಎಂಬ ಕಿಂಚಿತ್ ಯೋಚನೆ ಕೂಡ ಮಾಡದೇ ಹೀಯಾಳಿಸುವುದು..ನಿಂದಿಸುವುದೇ..ಸಾಧನೆ ಎಂಬಂತೆ ಕಾಲೆಳೆಯುತ್ತಾರೆ. ಆಕಾರ.. ರೂಪ.. ಒನಪು.. ಒಯ್ಯಾರ.. ಖಾಸಗಿ ವಿಷಯವನ್ನು ಬಿಡದಂತೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಇನ್ನು.. ಸೆಲೆಬ್ರೆಟಿಗಳ ಪಾಡು ಹೇಳಲು ಅಸಾಧ್ಯ. ಕುಂತರು .. ನಿಂತರು .. ಬದಲಾದ ಕಾಲದಲ್ಲಿ ಅನೇಕರ ಬಾಯಿಗೆ ಇವರು ಆಹಾರವಾಗುತ್ತಲೇ ಇರುತ್ತಾರೆ. ಟ್ರೋಲ್ ಹೆಸರಿನಲ್ಲಿ ನಿಂದನೆಗೆ ಗುರಿಯಾಗುತ್ತಲೇ ಇರುತ್ತಾರೆ. ಉದಾಹರಣೆಗೆ ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ.

The Bigg Boss Love Story That Wasn t Varthur Santhosh Shocks Fans Calls Tanisha His Sister

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಬಿಗ್ ಬಾಸ್‌'' ಕಾರ್ಯಕ್ರಮದಲ್ಲಿ ವರ್ತೂರ್‌ ಸಂತೋಷ್‌ ಹಾಗೂ ತನಿಷಾ ಕುಪ್ಪಂಡ ಆತ್ಮೀಯರಾಗಿದ್ದರು. ಜೊತೆಯಲ್ಲಿ ಡ್ಯಾನ್ಸ್ ಮಾಡಿದ್ದರು. ಹೆಚ್ಚು ಕಡಿಮೆ ನೂರು ದಿನ ''ಬಿಗ್ ಬಾಸ್''ಮನೆಯಲ್ಲಿ ಕಷ್ಟ ಸುಖ ಹಂಚಿಕೊಂಡಿದ್ದರು.

ಇನ್ನೂ ಸಾಮಾನ್ಯವಾಗಿ ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಕಾಣಿಸುವ ಸ್ನೇಹ- ಆತ್ಮೀಯತೆ ಮನೆಯಿಂದ ಹೊರಗಡೆ ಬಂದ ನಂತರ ಕಾಣಿಸುವುದಿಲ್ಲ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ತಮ್ಮ ಸಂಬಂಧವನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. ಆ ಪೈಕಿ ವರ್ತೂರ್ ಸಂತೋಷ್ ಮತ್ತು ತನಿಷಾ ಕೂಡ ಒಬ್ಬರು.

ಹೊರಗಡೆ ಬಂದ ನಂತರ ಕೂಡ ಇಬ್ಬರ ನಡುವೆ ಇದ್ದ ಆತ್ಮೀಯತೆ ಕಡಿಮೆ ಆಗಿರಲಿಲ್ಲ. ಇಬ್ಬರು ಸಭೆ-ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಬರ್ತ್‌ಡೇ ಪಾರ್ಟಿಗಳಲ್ಲಿ ಭಾಗವಹಿಸಿದರು. ವರ್ತೂರ್ ಸಂತೋಷ್ ಅವರ ಮನೆಯ ಸಮಾರಂಭದಲ್ಲಿ ಕೂಡ ತನಿಷಾ ತಪ್ಪದೇ ಭಾಗವಹಿಸುತ್ತಿದ್ದರು. ತನಿಷಾ ಒಡೆತನದ ಹೋಟೆಲ್‌ಗೆ ಕೂಡ ವರ್ತೂರು ಸಂತೋಷ್ ಭೇಟಿ ನೀಡಿದ್ದರು. ಇಷ್ಟೇ ಅಲ್ಲ ''ಸುವರ್ಣ ಜಾಕ್‌ಪಾಟ್‌''ನಲ್ಲಿ ರಂಗೀನ್ ಹಬ್ಬವನ್ನು ಒಟ್ಟಿಗೆ ಸಂಭ್ರಮದಿಂದ ಆಚರಿಸಿದ್ದರು.

ಇದೆಲ್ಲವನ್ನೂ ಕಂಡ ಹಲವರು ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂದು ಮಾತನಾಡಿಕೊಳ್ಳಲು ಶುರು ಮಾಡಿದರು. ವರ್ತೂರು ಸಂತೋಷ್ ಮತ್ತು ತನಿಷಾ ಮದುವೆಯಾಗುವುದು ಖಚಿತ ಎನ್ನುವ ಭವಿಷ್ಯವಾಣಿಯನ್ನು ಕೂಡ ಹೇಳಲು ಶುರು ಮಾಡಿದರು.

ನಿಜಾ.. ಕಾಲ ಕಾಲಕ್ಕೆ ವರ್ತೂರು ಸಂತೋಷ್ ಮತ್ತು ತನಿಷಾ ತಮ್ಮ ಕುರಿತು ಹರಡಿರುವ ಈ ಸುದ್ದಿಗಳನ್ನು ಅಲ್ಲಗಳೆಯುತ್ತ ಬಂದಿದ್ದರು. ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳುತ್ತಾ ಬಂದಿದ್ದರು. ಒಮ್ಮೆ ಮದುವೆ ಕುರಿತು ಕೇಳಿದ್ದ ಪ್ರಶ್ನೆಗೆ ತನಿಷಾ ಅವರಂತೂ ಖಾರವಾಗಿಯೇ ಉತ್ತರ ನೀಡಿದ್ದರು. ''ನಾನು ಮದುವೆಯಾಗುತ್ತೇನೆ ಅಂದ್ರೆ ಮಾತ್ರ ನನ್ನ ಬಳಿ ಕೇಳಬೇಕು. ಅವರು ಮದುವೆ ಆಗ್ತಾರೆ ಅಂದ್ರೆ ಅವರನ್ನೇ ಹೋಗಿ ಕೇಳಬೇಕು. ಬೇರೆಯವರ ಲೈಫ್‌ ಬಗ್ಗೆ ಹಾಗೆಲ್ಲ ನನ್ನ ಪ್ರಶ್ನೆ ಮಾಡಬೇಡಿ. ನಾವಿಬ್ಬರೂ ಎಷ್ಟೇ ಒಳ್ಳೆಯ ಫ್ರೆಂಡ್ಸ್‌ ಆಗಿದ್ರೂ ನಮ್ಮದೇ ಆದ ಮಿತಿ ಇರುತ್ತೆ. ನಮ್ಮಿಬ್ಬರ ಲೈಫ್‌ಸ್ಟೈಲ್‌ ಕೂಡ ಬೇರೆ ಇರುತ್ತೆ'' ಎಂದು ಕಿಡಿ ಕಾರಿದ್ದರು. ನಾವಿಬ್ಬರೂ ವಿಭಿನ್ನ ಲೈಫ್‌ಸ್ಟೈಲ್‌ಗೆ ಸೇರಿದವರು. ಅವರ ಲೈಫ್‌ ಬೇರೆ, ನನ್ನ ಲೈಫ್‌ಸ್ಟೈಲ್‌ ಬೇರೆ. ಕಲಾವಿದರು ಅನ್ನೋದಕ್ಕಿಂತ ನಮ್ಮಿಬ್ಬರ ಜೀವನ ಡಿಫರೆಂಟ್‌ ಎಂದು ಹೇಳಿದ್ದರು.

ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್ ಮತ್ತೊಮ್ಮೆ ಮಾತನಾಡಿದ್ಧಾರೆ. ''ಬಿಗ್ ಬಾಸ್‌''ನಲ್ಲಿ ತನಿಷಾ ಅವರು ನನ್ನ ಸಹ ಸ್ಫರ್ಧಿ ಆಗಿದ್ದರು. ಅವರು ನನ್ನ ''ಅಕ್ಕ'' ಇದ್ದಂತೆ. ಅವರಿಗೆ ನಾನು ''ಅಕ್ಕ''ನ ಸ್ಥಾನ ನೀಡಿದ್ದೇನೆ ಎಂದು ಹೇಳಿದ್ದಾರೆ. ನಮ್ಮಿಬ್ಬರ ಕುರಿತು ಹಲವು ವಿಚಾರಗಳನ್ನು ಕೇಳಿ ನಮಗೂ ಸಾಕಾಗಿದೆ ಎಂದು ಹೇಳಿರುವ ವರ್ತೂರು ಸಂತೋಷ್ ಇದರಿಂದ ಅವರಿಗೂ ಕೂಡ ಮುಜುಗರ ಆಗಿದೆ, ನಾನು ''ಬಿಗ್ ಬಾಸ್‌''ನಲ್ಲಿದ್ದಾಗಲೇ ಅವರನ್ನು ಅಕ್ಕ ಎಂದು ಕರೆದಿದ್ದೆ ಬೇಕಿದ್ದರೆ ಕೆಂಪು ಸೀರೆ ಅವರು ಹಾಕಿಕೊಂಡ ಬಂದಿದ್ದ ವಿಡಿಯೋವನ್ನು ಈಗಲೂ ಬೇಕಿದ್ದರೆ ನೀವು ನೋಡಬಹುದು ಎಂದು ಹೇಳಿದ್ಧಾರೆ.
ನನ್ನಿಂದ ಬೇಸರ ಆಗಿದ್ದರೆ ತನಿಷಾ ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಕೂಡ ವರ್ತೂರು ಸಂತೋಷ್ ಹೇಳಿದ್ದಾರೆ.

ಸದ್ಯ ''ಸಿನಿ ಸ್ಟೋರ್ ಕನ್ನಡ'' ಇನ್​ಸ್ಟಾಗ್ರಾಮ್‌ ಖಾತೆಯಲ್ಲಿ ವರ್ತೂರು ಸಂತೋಷ್ ಅವರ ಈ ವಿಡಿಯೋ ಅಪ್‌ಲೋಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವು ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಆಸಕ್ತರು ಕಾಮೆಂಟ್‌ಗಳನ್ನು ಗಮನಿಸಬಹುದು.

More from Filmibeat

English summary
The Bigg Boss romance is officially off. Varthur Santhosh sets the record straight on Tanisha Kuppanda, shocking fans by defining their bond as a purely platonic "sister" connection.
Read more about: tanisha rumours filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X