For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಜೇಮ್ಸ್' ಸಿನಿಮಾದಲ್ಲಿ 'ಘಟೋತ್ಕಚ' ಖ್ಯಾತಿಯ ಕೇತನ್

  |

  ಪವರ್ ಸ್ಟಾರ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಜೇಮ್ಸ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮತ್ತಷ್ಟು ತಡವಾಗಿದೆ.

  ಇದೀಗ ಪವರ್ ಸ್ಟಾರ್ ಲಾಕ್ ಡೌನ್ ಮುಗಿಸಿ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳು ಚಿತ್ರದಲ್ಲಿದೆ. ಜುಲೈ 5ರಿಂದ ಚಿತ್ರೀಕರಣ ಪ್ರಾರಂಭ ಮಾಡಿರುವ ಜೇಮ್ಸ್ ತಂಡದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ ಹೊರಬಿದ್ದಿದೆ.

  'ದ್ವಿತ್ವ' ಪೋಸ್ಟರ್ ಮೇಕಿಂಗ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಪವನ್ ಕುಮಾರ್'ದ್ವಿತ್ವ' ಪೋಸ್ಟರ್ ಮೇಕಿಂಗ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಪವನ್ ಕುಮಾರ್

  ಚಿತ್ರಕ್ಕೆ ಘಟೋತ್ಕಚ ಖ್ಯಾತಿಯ ನಟ ಕೇತನ್ ಕರಾಂಡೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಕೇತನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕೇತನ್ ಜೇಮ್ಸ್ ತಂಡ ಸೇರಿಕೊಂಡಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರಕ್ಕೆ ಖ್ಯಾತ ಸ್ಟಂಟ್ ಕಲಾವಿದರಾದ ರಾಮ್-ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ.

  ಅಂದಹಾಗೆ ಕೇತನ್‌ಗೆ ಇದು ಎರಡನೇ ಕನ್ನಡ ಸಿನಿಮಾ ಈ ಮೊದಲು ಚೇತನ್ ನಿರ್ದೇಶನದ ಭರ್ಜರಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೆ ಜೇಮ್ಸ್ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ಕೇತನ್ ಸಿನಿಮಾ ಜೊತೆಗೆ ಟಿವಿಯಲ್ಲೂ ಫೇಮಸ್.

  ಮಹಾಭಾರತ ಧಾರಾವಾಹಿಯಲ್ಲಿ ಕೇತನ್, ಘಟೋತ್ಕಚ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ತಂದುಕೊಟ್ಟಿತ್ತು. ಇದಲ್ಲದೇ ಇನ್ನು ಅನೇಕ ಧಾರಾವಾಹಿಗಳಲ್ಲಿ ಕೇತನ್ ನಟಿಸಿದ್ದಾರೆ. ಬಾಡಿ ಬಿಲ್ಡರ್ ಮತ್ತು ನಟ ಕೇತನ್ ಇದೀಗ ಪವರ್ ಸ್ಟಾರ್ ಎದುರು ನಟಿಸುತ್ತಿದ್ದು, ಇಬ್ಬರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಜೇಮ್ಸ್ ಸದ್ಯ ಟಾಕಿ ಭಾಗ, ಹಾಡು, ಆಕ್ಷನ್ ಸೇರಿದಂತೆ 30ರಷ್ಟು ಚಿತ್ರೀಕರಣ ಭಾಗಿ ಉಳಿದಿದೆ. ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಪ್ರೀಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್ ಹಾಗೂ ಆದಿತ್ಯ ಮೆನನ್, ಅನು ಪ್ರಭಾಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

  Rockline Venkatesh : ಅಂಬರೀಶ್ ಬಗ್ಗೆ ಮಾತನಾಡೋದಕ್ಕೆ ಅವರು ಯಾರು? | Filmibeat Kannada

  ನಟ ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನಿಮಾದ ಚಿತ್ರೀಕರಣ ಮುಗಿಸಿ ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ದ್ವಿತ್ವ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ದ್ವಿತ್ವ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.

  English summary
  The bodybuilder-turned-actor Ketan Karande joins Puneeth Rajkumar's James Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X