ಫೆಬ್ರವರಿ 16ರಂದು 'ಡೆವಿಲ್' ದರ್ಶನ, ಸಿಹಿ ಸುದ್ದಿ ನೀಡಿದ ದಾಸ...!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡುವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆ ಹೃದಯವಂತಿಕೆ ಕೂಡ ಇವರ ವ್ಯಕ್ತಿತ್ವದ ಟ್ರೇಡ್ ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ಇವರದ್ದು.

ಇನ್ನು, ದರ್ಶನ್ ಅವರ ಚಿತ್ರಗಳು ಬಂದರೆ ಸಾಕು. ಅಭಿಮಾನಿಗಳ ಪಾಲಿಗೆ ಅದು ಹಬ್ಬ. ಅದರಲ್ಲೂ ದರ್ಶನ್ ಹುಟ್ಟಿದ ಹಬ್ಬ ಬಂದರೆ ಸಾಲು ಅಭಿಮಾನಿಗಳ ಸಂಭ್ರಮ ಮುಟ್ಟಿರುತ್ತೆ. ಇದಕ್ಕೆ ಎಲ್ಲರೂ ತಿಂಗಳಿಗೆ ಮುಂಚಿತವಾಗಿಯೇ ರೆಡಿಯಾಗುತ್ತಾ ಅದನ್ನೊಂದು ಉತ್ಸವದಂತೆಯೇ ನಡೆಸುವ ಪರಿಪಾಠ ನಡೆದುಕೊಂಡು ಬಂದಿದೆ.

The brand new teaser of Devil will be released on February 16 on the occasion of Darshan s birthday

ಆದರೆ ಈ ವರ್ಷ ಈ ಸಂಭ್ರಮ ಮತ್ತು ಉತ್ಸವಕ್ಕೆ ಬ್ರೇಕ್ ಬಿದ್ದಿದೆ. ಮನೆಯ ಎದುರು ಪ್ರತಿ ವರ್ಷ ಕಂಡು ಬರುವ ಜನಜಂಗುಳಿಯ ವಾತಾವರಣ ಈ ಬಾರಿ ಕಾಣಿಸುವುದಿಲ್ಲ. ಸಾಕ್ಷಾತ್ ದರ್ಶನ್ ಅವರೇ ತಮ್ಮ ಅಭಿಮಾನಿಗಳಲ್ಲಿ ಈ ವರ್ಷ ಬರ್ತ್‌ಡೇ ಬೇಡ ಎಂದು ಹೇಳಿದ್ದಾರೆ. ಮನೆ ಬಳಿ ಬರಬೇಡಿ ನಾನು ಸಿಗುವುದಿಲ್ಲ, ಇದೊಂದು ವರ್ಷ ನನ್ನನ್ನೂ ಕ್ಷಮಿಸಿ ಬಿಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಹಾಗಂಥ ಅಭಿಮಾನಿಗಳು ತೀರಾ ನಿರಾಸೆಯಾಗುವಂತೆ ಇಲ್ಲ. ಯಾಕೆಂದರೆ, ತಮ್ಮ ಹುಟ್ಟಿದ ಹಬ್ಬಕ್ಕೆ ತಮ್ಮ ಮುಂದಿನ ಚಿತ್ರಗಳ ಕುರಿತು ಮಾಹಿತಿಯನ್ನು ನೀಡುವ ಟೀಸರ್, ಟ್ರೇಲರ್ ಬಿಡುಗಡೆ ಮಾಡುವ ತಮ್ಮ ಅಭಿಮಾನಿಗಳಿಗೆ ಅಚ್ಚರಿದಾಯಕ ಗಿಫ್ಟುಗಳನ್ನು ಕೊಡುವ ಪರಿಪಾಠವನ್ನು ದರ್ಶನ್ ಬೆಳಸಿಕೊಂಡು ಬಂದಿದ್ದಾರೆ. ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ದರ್ಶನ್ ಅವರ ಜನುಮದಿನದ ಪ್ರಯುಕ್ತ ಇವರ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಲಿದೆ.

ಸದ್ಯ ದರ್ಶನ್ ಅವರ ಅಧಿಕೃತವಾದ ಫ್ಯಾನ್ ಪೇಜ್‌ ಡಿ ಕಂಪನಿಯ ಕಡೆಯಿಂದ ಬಿತ್ತರವಾದ ಈ ನ್ಯೂಸ್ ಕೇಳಿ ದರ್ಶನ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಡೆವಿಲ್ ಚಿತ್ರದ ಟೀಸರ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಬಾರಿ ಬಿಡುಗಡೆ ಮಾಡಲಾದ ಟೀಸರ್‌ಗಿಂತ ಈ ಬಾರಿ ಬರಲಿರುವ ಟೀಸರ್ ಎಲ್ಲರನ್ನೂ ಹುಚ್ಚಿಡಿಸುತ್ತೆ ಎನ್ನುವ ನಿರೀಕ್ಷೆಯ ಮಾತುಗಳನ್ನು ಕೂಡ ಕೆಲವರು ಹೇಳುತ್ತಿದ್ದಾರೆ.

ಅಂದ್ಹಾಗೇ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ದರ್ಶನ್ ತಮ್ಮ ಹುಟ್ಟುಹಬ್ಬ ಮುಗಿಸಿಕೊಂಡು 20ನೇ ತಾರೀಖಿನ ನಂತರ ಮರುಚಾಲನೆ ನೀಡಲಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಈ ಕುರಿತು ಚಿತ್ರತಂಡದ ಜೊತೆ ದರ್ಶನ್ ಚರ್ಚೆಯನ್ನು ಕೂಡ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಫೆಬ್ರವರಿ ಹದಿನಾರರಂದು ದರ್ಶನ್ ಬರ್ತ್‌ಡೇ ಪ್ರಯುಕ್ತ ಈ ಕುರಿತು ಚಿತ್ರದ ಟೀಸರ್ ಜೊತೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಸದ್ಯ 'ಕುಂಟು' ನೆಪವನ್ನು ಹೇಳುತ್ತಿರುವ ದರ್ಶನ್ ನಿಜಕ್ಕೂ ತಮ್ಮ ಡೆವಿಲ್ ಚಿತ್ರದ ಚಿತ್ರೀಕರಣವನ್ನು ಯಾವಾಗ ಶುರು ಮಾಡುತ್ತಾರೆ ಎನ್ನುವುದಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ.

ಇನ್ನುಳಿದಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ.. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಒಟ್ನಲ್ಲಿ ಸದ್ಯ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಡೆವಿಲ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಅವತ್ತು ಬಿಡುಗಡೆಯಾಗಲಿರುವ ಟೀಸರ್‌ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸುವುದರಲ್ಲಿ ಅನುಮಾನ ಇಲ್ಲ.

More from Filmibeat

Read more about: darshan devil filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X