twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರ ಮಾಲೀಕರಿಂದ ಬಂದ್ ಗೆ ಬೆಂಬಲ

    By Pavithra
    |

    ಭಾರತ ಬಂದ್ ಹಿನ್ನೆಲೆಯಲ್ಲಿ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಶೋ ರದ್ದು ಮಾಡಲು ಚಿತ್ರಮಂದಿರದ ಮಾಲೀಕರು ನಿರ್ಧಾರ ಮಾಡಿದ್ದಾರೆ.ಇಂದು ಮಧ್ಯಾಹ್ನ 3 ಗಂಟೆಯವರೆಗೆ ಯಾವುದೇ ಶೋ ನಡೆಸದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

    ಸಿನಿಮಾ ಮಂದಿಗಳಿಗೆ ಪ್ರೇಕ್ಷಕರೇ ಆಧಾರ, ಜನ ಥಿಯೇಟರ್ ಗೆ ಬಂದರೆ ಈಗಲೂ ಶೋ ನಡೆಸಲು ಚಿತ್ರಮಂದಿರದ ಮಾಲೀಕರು ಸಿದ್ದವಿದ್ದಾರೆ. ಭಾರತ್ ಬಂದ್ ಸುದ್ದಿ ಜೋರಾಗಿ ಹಬ್ಬಿರುವುದರಿಂದ ಸಿನಿಮಾ ಪ್ರದರ್ಶನ ಇರಲ್ಲ ಎಂದು ಜನರು ನಿರ್ಧಾರ ಮಾಡಿಕೊಂಡಿದ್ದಾರೆ. ಇದರಿಂದ ಥಿಯೇಟರ್ ಬಳಿ ಜನರು ಕಾಣಿಸಿಕೊಳ್ಳುತ್ತಿಲ್ಲ. ಜನರು ಮಧ್ಯಾಹ್ನದ ನಂತರ ಬರಬಹುದು ಎಂದು ಥಿಯೇಟರ್ ಮಾಲೀಕರು ಸಿಬ್ಬಂದಿಗಳು ಕಾಯುತ್ತಿದ್ದಾರೆ.

    ಭಾರತ್ ಬಂದ್ LIVE: ಪ್ರತಿಭಟನೆಗೆ ಸೋನಿಯಾ, ಮನಮೋಹನ್ ಸಿಂಗ್ ಹಾಜರು

    The cinema theater woners have supported to Bharat Bandh

    ಸಾಮಾನ್ಯವಾಗಿ ಪ್ರತಿ ಸೋಮವಾರ ಚಿತ್ರಮಂದಿರದಲ್ಲಿ ಜನಸಂಖ್ಯೆ ಕಡಿಮೆ ಇರುತ್ತೆ. ಇನ್ನು ಸೋಮವಾರವೇ ಬಂದ್ ಮಾಡಿದರೆ ಯಾರು ಥಿಯೇಟರ್ ಗಳಿಗೆ ಬರುತ್ತಾರೆ ಎನ್ನುವುದು ಮಾಲೀಕರು ಮತ್ತು ಸಿಬ್ಬಂದಿಗಳ ಅಭಿಪ್ರಾಯ.

    The cinema theater woners have supported to Bharat Bandh

    ಸದ್ಯ ಚಿತ್ರಮಂದಿರಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಸ, ಹಿ, ಪ್ರಾ, ಪಾಠ ಶಾಲೆ, ಅಯೋಗ್ಯ, ಪತಿ ಬೇಕು.ಕಾಮ್ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಆಗುತ್ತಿತ್ತು. ಇಂದು ಬಂದ್ ಕಾರಣದಿಂದಾಗಿ ನಿರ್ಮಾಪಕರಿಗೆ ಒಂದು ದಿನದ ಕಲೆಕ್ಷನ್ ಲಾಸ್ ಆಗಲಿದೆ.

    English summary
    The cinema theater woners have supported to Bharat Bandh. they decided not to show film until 3 pm today.
    Monday, September 10, 2018, 10:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X