For Quick Alerts
  ALLOW NOTIFICATIONS  
  For Daily Alerts

  ಒಡೆಯರ್ ಆಗಲು ಹೊರಟಿದ್ದ ದರ್ಶನ್ ಚಿತ್ರದ ವಿರುದ್ದ ದೂರು ದಾಖಲು

  By Pavithra
  |
  ಒಡೆಯರ್ ಅಗಲು ಹೊರಟ ದರ್ಶನ್‌ಗೆ ಅಡ್ಡಗಾಲು...! | Filmibeat Kannada

  'ಒಡೆಯರ್' ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಸಿನಿಮಾದ ನಂತರ ಅಭಿನಯ ಮಾಡಬೇಕಿರುವ ಚಿತ್ರ. ದರ್ಶನ್ ರವರ 52ನೇ ಸಿನಿಮಾದ ಇದಾಗಲಿದ್ದು ಈಗಾಗಲೇ ನಿರ್ದೇಶಕರು ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

  ಆಗಸ್ಟ್ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 'ಒಡೆಯರ್' ಮುಹೂರ್ತವನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಡುವುದಾಗಿ ಸಿನಿಮಾ ತಂಡ ತಿಳಿಸಿತ್ತು ಆದರೆ ಚಿತ್ರ ಆರಂಭ ಆಗುವ ಮೊದಲೇ ವಿಘ್ನ ಎದುರಾಗಿದೆ.

  ಆಗಸ್ಟ್ 16 ರಿಂದ 'ಒಡೆಯರ್' ದರ್ಬಾರ್: ಸಂಭ್ರಮದಲ್ಲಿ ದರ್ಶನ್ ಫ್ಯಾನ್ಸ್.!ಆಗಸ್ಟ್ 16 ರಿಂದ 'ಒಡೆಯರ್' ದರ್ಬಾರ್: ಸಂಭ್ರಮದಲ್ಲಿ ದರ್ಶನ್ ಫ್ಯಾನ್ಸ್.!

  ಈ ಹಿಂದೆಯೂ ಒಡೆಯರ್ ಟೈಟಲ್ ವಿಚಾರವಾಗಿ ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಾದದ ಕಿಡಿ ಕಾಣಿಸಿಕೊಂಡಿತ್ತು. ಈಗ ಮತ್ತೆ ಅದೇ ವಿಚಾರ ಪೋಲೀಸ್ ಠಾಣೆಯ ವರೆಗೂ ಹೋಗಿದೆ. 'ಒಡೆಯರ್' ಸಿನಿಮಾ ಶೀರ್ಷಿಕೆ ವಿಚಾರವಾಗಿ ಆಗುತ್ತಿರುವ ವಿವಾದ ಏನು? ಈ ಹಿಂದೆ ಆಗಿದ್ದ ವಿವಾದ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  'ಒಡೆಯರ್' ಶೀರ್ಷಿಕೆಗೆ ತಕರಾರು

  'ಒಡೆಯರ್' ಶೀರ್ಷಿಕೆಗೆ ತಕರಾರು

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯರ್' ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ಟೈಟಲ್ ಬದಲಾವಣೆ ಮಾಡಬೇಕು ಎಂದು ಮತ್ತೆ ಕನ್ನಡ ಕ್ರಾಂತಿದಳ ವೇದಿಕೆಯಿಂದ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ.

  ಚಿತ್ರತಂಡದ ವಿರುದ್ಧ ದೂರು ದಾಖಲು

  ಚಿತ್ರತಂಡದ ವಿರುದ್ಧ ದೂರು ದಾಖಲು

  ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲು ಮಾಡಲಾಗಿದೆ. 'ಒಡೆಯರ್' ಹೆಸರು ಬಳಕೆ ಮಾಡುವುದೇ ಆದರೆ ಚರಿತ್ರೆಯ ಸಿನಿಮಾ ಮಾಡಲಿ, ಅದು ಬಿಟ್ಟು ಐಟಂ ಸಾಂಗ್, ಲವ್, ಹಾಸ್ಯಭರಿತ ಚಿತ್ರವಾದರೆ ಬೇಡವೇ ಬೇಡ ಎನ್ನುವುದನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

  ಅರಸು ಯುವಜನ ವೇದಿಕೆಯ ವಿರೋಧ

  ಅರಸು ಯುವಜನ ವೇದಿಕೆಯ ವಿರೋಧ

  ಚಿತ್ರದ ಶೀರ್ಷಿಕೆ ಈಗಲೇ ಬದಲಾವಣೆ ಮಾಡಬೇಕು ಇಲ್ಲವಾದಲ್ಲಿ ಚಿತ್ರೀಕರಣದ ಜಾಗಕ್ಕೆ ನುಗ್ಗಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅದಷ್ಟೇ ಅಲ್ಲದೆ ಮೈಸೂರು ಮಾತ್ರವಲ್ಲ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ತಿಳಿಸಿದ್ದು ಕ್ರಾಂತಿದಳದ ಜೊತೆಗೆ ಅರಸು ಯುವಜನ ವೇದಿಕೆ ಕೂಡ ಚಿತ್ರತಂಡದ ವಿರುದ್ಧ ದೂರು ದಾಖಲು ಮಾಡಿದೆ.

  ಹಿಂದಿನಿಂದಲೂ ಇದೆ ವಿವಾದ

  ಹಿಂದಿನಿಂದಲೂ ಇದೆ ವಿವಾದ

  ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇದೇ ರೀತಿ ವಿವಾದ ಸೃಷ್ಟಿ ಆಗಿತ್ತು. 'ಒಡೆಯರ್' ಎನ್ನುವ ಟೈಟಲ್ ಮೂಲಕ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಲಾಗಿತ್ತು. ಆಗ ಇದೇ ಕ್ರಾಂತಿದಳ ಸಂಘಟನೆ ಶೀರ್ಷಿಕೆ ಬದಲಾವಣೆ ಮಾಡುವಂತೆ ಮನವಿ ಮಾಡಿತ್ತು.

  ಆಗಸ್ಟ್ 16 ರಂದು ಸಿನಿಮಾ ಮಹೂರ್ತ

  ಆಗಸ್ಟ್ 16 ರಂದು ಸಿನಿಮಾ ಮಹೂರ್ತ

  ಆಗಸ್ಟ್ 16 ರಂದು 'ಒಡೆಯರ್' ಸಿನಿಮಾದ ಮುಹೂರ್ತವನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಡುವುದಾಗಿ ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.ಆಗಸ್ಟ್ 16 ರಂದು ನಿರ್ಮಾಪಕ ಸಂದೇಶ್ ನಾಗರಾಜ್ ಜನ್ಮದಿನ. ಎಂ ಡಿ ಶ್ರೀಧರ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

  English summary
  The complaint has been filed against Darshan's Wadeyar movie, Kranthi Dhala Vedhike complains against filmmaker at KR police station in Mysore. Sandesh Nagaraj is producing the movie Darshan acting as a hero in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X