ಅಯ್ಯೋ ಶಿವ, ಇಂದು ದರ್ಶನ್ ಕರ್ಕೊಂಡು ಬರಲು ಹೆಲಿಕ್ಯಾಪ್ಟರ್‌ಗೆ ಖರ್ಚು ಮಾಡಿದ್ದ ಹಣ ಎಲ್ಲ ವೇಸ್ಟ್ ಆಯಿತಾ..?
ದರ್ಶನ್ ರಂಥ ನಂ.1 ಹೀರೋ ಸುಮ್ಮನೇ ಕೂತರೆ ಅವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ನಷ್ಟ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಾದರೂ ಬಾಸ್ ಇಮೀಡಿಯೆಟ್ಟಾಗಿ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ ಹೀಗಾಗಿಯೇ ಅವರನ್ನು ಜೈಲಿಂದ ಬಿಡುಗಡೆ ಮಾಡಬೇಕು ಅನ್ನುವುದು ಅಭಿಮಾನಿಗಳ ಹಕ್ಕೋತ್ತಾಯ.
ಆದರೆ. ಆ ಕಾಲಕ್ಕೆ ಕರುನಾಡು ಯಾವತ್ತು ಸಾಕ್ಷಿಯಾಗಲಿದೆ ಅನ್ನುವುದು ಇನ್ನೂ ಗೊತ್ತಿಲ್ಲವಾದರೂ ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳು ನಮ್ಮ ಬಾಸ್ ಇವತ್ತು ಜೈಲಿಂದ ಹೊರಬರುವುದು ಪಕ್ಕಾ ಎಂದುಕೊಂಡಿದ್ದರು. ಸೆಪ್ಟೆಂಬರ್ 27ರಂದು ಅಂದರೆ ಇಂದು ದರ್ಶನ್ ಅವರಿಗೆ ಜಾಮೀನು ಮಂಜೂರು ಆದ ನಂತರ ಬಳ್ಳಾರಿಯಿಂದ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರುವುದು ಹೇಗೆ ಎಂದೆಲ್ಲ ಚರ್ಚೆ ಮಾಡಿದ್ದರು. ರಸ್ತೆಯ ಮಾರ್ಗವಾಗಿ ಬಂದರೆ ಭದ್ರತೆಯ ಸಮಸ್ಯೆಯಾಗಬಹುದು ಎಂದುಕೊಂಡು ಹೆಲಿಕ್ಯಾಪ್ಟರ್ ಕೂಡ ಬುಕ್ ಮಾಡಿದ್ದಾರೆ ಎನ್ನುವ ಸುದ್ದಿಯೂ ಬಂತು. ದರ್ಶನ್ ಅವರ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಅವರೇ ಹೆಲಿಕ್ಯಾಪ್ಟರ್‌ಗೆ ಹಣ ನೀಡಿದ್ದಾರೆ ಎನ್ನುವ ಮಾತು ಕೂಡ ಕೇಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನ ಸುತ್ತ ಮುತ್ತ ಕೇಳಿ ಬಂತು. ಆದರೆ ದುರಾದೃಷ್ಟ.. ಹೆಲಿಕ್ಯಾಪ್ಟರ್‌ಗೆ ಹಣ ಖರ್ಚು ಮಾಡಿದ್ದಷ್ಟೇ ಬಂತು. ದರ್ಶನ್ ಗೆ ಜಾಮೀನು ಮಾತ್ರ ಇಂದು ಸಿಗಲಿಲ್ಲ.

ಹೌದು, ಇಂದು ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಯಾಕೆಂದರೆ ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ಇಂದು ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಅವರ ಸಹಾಯಕ ವಕೀಲರು ಇನ್ನೂ ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ನ್ಯಾಯಾಧೀಶರದಲ್ಲಿ ಮನವಿಯನ್ನೂ ಮಾಡಿಕೊಂಡರು. ಇದಕ್ಕೆ ಎಸ್ ಪಿ ಪಿ ಪ್ರಸನ್ನ ಅವರು ಆಕ್ಷೇಪಣೆ ಸಲ್ಲಿಸಿಲ್ಲ ಎಂದು ದರ್ಶನ್ ವಕೀಲರು ತಕರಾರು ತತೆಗೆಯುತ್ತಿದ್ದರು. ಈಗ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಾದ ಮಂಡನೆಗೆ ಸಿದ್ಧ ಇದ್ದೇವೆ ಎಂದು ಹೇಳಿದರು. ಆದರೂ ಕೂಡ ದರ್ಶನ್ ಪರ ವಕೀಲರಾದ ಸುನಿಲ್ ಕುಮಾರ್ ಅವರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಈ ಹಿನ್ನೆಲೆ ಸೆಪ್ಟೆಂಬರ್ 30ರಂದು ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದರು.
ಅಂದ್ಹಾಗೇ ದರ್ಶನ್ ಪರ ವಕೀಲರು ಈ ಕಳೆದ ವಾರ ಅಂದರೆ ಸೆಪ್ಟೆಂಬರ್ 21ರಂದು ದರ್ಶನ್ ಅವರ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಅರ್ಜಿಗೆ ತಕರಾರು ಸಲ್ಲಿಸಲು ಎಸ್‌ಪಿ ಪಿ ಪ್ರಸನ್ನ ಅವರು ತಡ ಮಾಡಿದ್ದರು. ಈ ಹಿನ್ನೆಲೆ ಎರಡು ಬಾರಿ ವಿಚಾರಣೆ ಮುಂದೂಡಿದ್ದ ನ್ಯಾಯಾಲಯ ಇಂದು ವಿಚಾರಣೆಯನ್ನು ನಿಗಧಿ ಮಾಡಿತ್ತು. ಆದರೆ ಇಂದು ದರ್ಶನ್ ಪರ ವಕೀಲರೇ ವಿಚಾರಣೆಗೆ ಕಾಲಾವಕಾಶವನ್ನು ಕೇಳಿದ್ಧಾರೆ.
ಉಳಿದಂತೆ ತನ್ನ ಖಾಸಗಿ ಬದುಕನ್ನು ಗಲೀಜು ಮಾಡಿಕೊಂಡು, ಜನಪ್ರಿಯತೆಯ ಅಮಲಿನಲ್ಲಿ ಪರಪ್ಪನ ಅಗ್ರಹಾರದ ಪಾಲಾಗಿ ಆ ನಂತರ ಬಳ್ಳಾರಿಗೆ ಹೋದ ದರ್ಶನ್ ಜಾಮೀನು ಜಂಜಾಟ ಮುಂದುವರೆದಿದೆ. ಈ ಸೆಪ್ಟೆಂಬರ್ 30ರಂದು ಕೂಡ ಜಾಮೀನು ಅರ್ಜಿಯನ್ನು ವಿಚಾರಣೆಯನ್ನು ಮತ್ತೆ ಮುಂದೂಡಿದರೆ ದರ್ಶನ್ ಇನ್ನೂ ಕೆಲ ದಿನ ಜೈಲಿನಲ್ಲಿಯೇ ಇರಬೇಕಾಗುತ್ತೆ. ಇನ್ನೂ ಈ ಅಕ್ಟೋಬರ್ ಹನ್ನೊಂದು ಬಂದರೆ ದರ್ಶನ್ ಬಂಧನಕ್ಕೊಳಗಾಗಿ ನಾಲ್ಕು ತಿಂಗಳಾಗಲಿವೆ. ಇದೆಲ್ಲದರ ನಡುವೆ ದರ್ಶನ್ ಕೊರಳಿಗೆ ಐಟಿ ಉರುಳು ಕೂಡ ಸುತ್ತಿಕೊಂಡಿದೆ. ಸೆಪ್ಟೆಂಬರ್ 30ರಂದು ದರ್ಶನ್ ಪರ ಖುದ್ದು ಹಿರಿಯ ವಕೀಲರಾದ ಸಿವಿ ನಾಗೇಶ್ ಅವರು ವಾದ ಮಂಡಿಸುವ ನಿರೀಕ್ಷೆ ಕೂಡ ಇದೆ. ಮತ್ತೊಂದು ಕಡೆ ದರ್ಶನ್ ಅವರನ್ನು ಬರ ಮಾಡಿಕೊಳ್ಳಲು ಹೆಲಿಕ್ಯಾಪ್ಟರ್‌ಗೆ ಖರ್ಚು ಮಾಡಿದ್ದ ಹಣ ಎಲ್ಲ ವ್ಯರ್ಥವಾಯಿತಲ್ಲಾ ಎನ್ನುವ ಚರ್ಚೆ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.


Click it and Unblock the Notifications











