twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ: ಕೊರೊನಾ ವಾರಿಯರ್ಸ್ ಗಳಿಗೆ ಸೆಲ್ಯೂಟ್ ಎಂದ Batman

    |

    ಇಡೀ ವಿಶ್ವದಲ್ಲಿ ಕೊರೋನಾವೈರಸ್ ವಿರುದ್ಧ ದೊಡ್ಡ ಹೋರಾಟವೇ ನಡೆಯುತ್ತಿದೆ. ಈ ಮಹಾಮಾರಿ ಸೋಂಕುಪೀಡಿತರಿಗೆ ಚಿಕಿತ್ಸೆ ನೀಡುವಲ್ಲಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಸೇರಿದಂತೆ ಇನ್ನಿತರೆ ವರ್ಗದ ಕೊರೋನಾವಾರಿಯರ್ ಗಳ ಸೇವೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

    Recommended Video

    ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ , ಆದರೂ ಸಂಕಷ್ಟ ತಪ್ಪಿದ್ದಲ್ಲ | Serial | Television

    ಸರ್ಕಾರಗಳು, ಸಂಘ ಸಂಸ್ಥೆಗಳು ಈ ಕೊರೋನಾ ವಾರಿಯರ್ಸ್ ಗೆ ಧನ್ಯವಾದಗಳನ್ನು ಅರ್ಪಿಸುತ್ತಿವೆ. ಇಂತಹ ಕೊರೋನಾ ವಾರಿಯರ್ಸ್ ಗೆ ತಮ್ಮದೇ ಆದ ಶೈಲಿಯಲ್ಲಿ ಯುವಕ ವಾಗ್ಮಿ ಆರ್ ಯಜುರ್ವೇದಿ ಧನ್ಯವಾದ ಮತ್ತು ಗೌರವವನ್ನು ಸಲ್ಲಿಸಿದ್ದಾರೆ.

    ಈ ಯುವಕ ದಿ ಡಾರ್ಕ್ ಸ್ಪ್ರೆಡ್ ಎಂಬ ಕಿರುಚಿತ್ರವನ್ನು ತಯಾರಿಸಿದ್ದಾರೆ. ಇದರ ವೈಶಿಷ್ಟ್ಯತೆ ಎಂದರೆ, ಬ್ಯಾಟ್ ಮ್ಯಾನ್ ಮತ್ತು ಜೋಕರ್ ಎಂಬ ಎರಡು ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿದ್ದು, ಚಿಂತನ್ ಮತ್ತು ಸ್ವತಃ ಯಜುರ್ವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಹಿಟ್ ಚಿತ್ರ ಹೆಬ್ಬುಲಿಯ ನಿರ್ಮಾಪಕರಾಗಿರುವ ಓಗರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುನಾಥ್ ಅವರ ಪುತ್ರರಾಗಿರುವ ಯಜುರ್ವೇದಿ ವೈಆರ್ ವೈ ಮೂವೀಸ್ ಪ್ರೊಡಕ್ಷನ್ ಜತೆ ಸೇರಿ ಸಿಎಸ್ ಜೆ ಆರ್ಟ್ಸ್ ನ ಸಹಯೋಗದಲ್ಲಿ ಈ ಕಿರುಚಿತ್ರವನ್ನು ತಯಾರಿಸಿದ್ದಾರೆ.

    ವಿ ಆರ್ ವೈ ಎಂಟರ್ ಟೇನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ ಮತ್ತು ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

    ಹಾಲಿವುಡ್ ಸ್ಟೈಲ್ ನಲ್ಲಿ ಫ್ಯಾಂಟಸಿ ಲೋಕ

    ಹಾಲಿವುಡ್ ಸ್ಟೈಲ್ ನಲ್ಲಿ ಫ್ಯಾಂಟಸಿ ಲೋಕ

    ಇದರಲ್ಲಿನ ವಿಶೇಷವೆಂದರೆ ಹಾಲಿವುಡ್ ಸ್ಟೈಲ್ ನಲ್ಲಿ ಫ್ಯಾಂಟಸಿ ಲೋಕವನ್ನು ಪರಿಚಯಿಸಲಾಗಿದೆ. ಹಾಲಿವುಡ್ ನ ಅತ್ಯಂತ ಜನಪ್ರಿಯವಾಗಿರುವ ಜೋಕರ್ ಸಿನಿಮಾದ ಮುಖ್ಯಪಾತ್ರವನ್ನು ಈ ಕಿರುಚಿತ್ರದ ಜೋಕರ್ ಪಾತ್ರ ನೆನಪಿಸುತ್ತದೆ. ಕಿರುಚಿತ್ರದಲ್ಲಿನ ಮೇಕಪ್, ಕಾಸ್ಟ್ಯೂಮ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಗಮನ ಸೆಳೆಯುತ್ತದೆ.

    ಕಥೆ, ಚಿತ್ರಕಥೆ ಬರೆದಿರುವ ಚಿಂತನ್ ಎಸ್ ಜೋಯಿಸ್

    ಕಥೆ, ಚಿತ್ರಕಥೆ ಬರೆದಿರುವ ಚಿಂತನ್ ಎಸ್ ಜೋಯಿಸ್

    ಈ ಮೂಲಕ ಯಜುರ್ವೇದಿ ವಿಭಿನ್ನ ಪರಿಕಲ್ಪನೆ ಮತ್ತು ಮೇಕಿಂಗ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 6 ನಿಮಿಷಗಳ ಈ ಕಿರುಚಿತ್ರ ಇಂಗ್ಲೀಷ್ ಭಾಷೆಯಲ್ಲಿದೆ. ಕಲ್ಪನೆ, ನಿರ್ದೇಶನ, ಸಿನಿಮಾಟೋಗ್ರಫಿ, ಸಂಕಲನ, ಸಂಗೀತ ಮತ್ತು ನಟನೆ ಯಜುರ್ವೇದಿಯದ್ದಾಗಿದೆ. ಕಥೆ, ಚಿತ್ರಕಥೆಯನ್ನು ಚಿಂತನ್ ಎಸ್ ಜೋಯಿಸ್ ಬರದಿದ್ದಾರೆ.

    ಕಾರ್ಯಕಾರಿ ನಿರ್ಮಾಪಕಿ ವಾಣಿಶ್ರೀ

    ಕಾರ್ಯಕಾರಿ ನಿರ್ಮಾಪಕಿ ವಾಣಿಶ್ರೀ

    ಕಾರ್ಯಕಾರಿ ನಿರ್ಮಾಪಕಿರಾಗಿರುವ ವಾಣಿಶ್ರೀ ಕಾಸ್ಟ್ಯೂಮ್ ಮಾಡಿದ್ದಾರೆ. ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೋನಾವೈರಸ್ ನಿಂದ ಎದುರಾಗಿರುವ ಸಂಕಷ್ಟಗಳು, ಆ ಸಂಕಷ್ಟಗಳ ವಿರುದ್ಧ ಹೋರಾಟ ನಡೆಸಲು ಅವಿರತ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೋನಾ ಸಂಕಟಗಳನ್ನು ಮನಮುಟ್ಟುವಂತೆ ಈ ಕಿರುಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ಯಜುರ್ವೇದಿ.

    ಯಜುರ್ವೇದಿ ಪ್ರತಿಕ್ರಿಯೆ

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಜುರ್ವೇದಿ, "ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಏನೇ ಕಷ್ಟ -ಆತಂಕಗಳು ಎದುರಾಗಿದ್ದರೂ ಸಿಬ್ಬಂದಿ ತಮ್ಮ ಸೇವೆಯನ್ನು ನಿಲ್ಲಿಸಿಲ್ಲ. ಹಗಲಿರುಳೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಈ ಸಿಬ್ಬಂದಿಗೆ ಕಿರುಚಿತ್ರದ ಮೂಲಕ ಅಭಿನಂದನೆ ಸಲ್ಲಿಸಲಾಗಿದೆ''ಎಂದು ತಿಳಿಸಿದರು.

    English summary
    Tribute to the entire medical fraternity- Doctors, nurses and lab technicians through this short film inspired by the characters, events and timeless quotes from the Batman trilogy by Christopher Nolan.
    Wednesday, May 6, 2020, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X