Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್-ರಾಧಿಕಾ ಮುದ್ದು ಮಗಳಿಗೆ ನಾಮಕರಣ
Recommended Video
ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗಳ ಹೆಸರಿನ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಇತ್ತು. ಬೇಬಿ ವೈಆರ್ ಎಂದೇ ಎಲ್ಲರು ಕರೆಯುತ್ತಿದ್ದರು. ಅಭಿಮಾನಿಗಳು ಸಹ ಸಾಕಷ್ಟು ಹೆಸರುಗಿಳಿಂದ್ದ ಯಶ್-ರಾಧಿಕಾ ಮುದ್ದು ಮಗಳನ್ನು ಕರೆಯುತ್ತಿದ್ದರು.
ಆದ್ರೀಗ ಬೇಬಿ ವೈಆರ್ ಗೆ ನಾಮಕರಣ ಮಾಡಲಾಗಿದೆ. ನಿನ್ನೆ(ಜೂನ್ 23) ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಶ್ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಮಾಡಲಾಗಿದೆ. ಈ ಸಮಾರಂಭಕ್ಕೆ ಕುಟುಂಬದವರು, ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಕೊನೆಗು ಯಶ್-ರಾಧಿಕಾ ಮಗಳ ಹೆಸರು ಫೈನಲ್ ಆಯ್ತು
ಮಗಳಿಗೆ 'ಆಯ್ರಾ ಯಶ್' ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ಅಭಿಮಾನಿಗಳಲ್ಲಿ ಇದ್ದ ಕುತೂಹಕ್ಕೆ ತೆರೆ ಎಳೆದಿದ್ದಾರೆ. ಒಕ್ಕಲಿಗರ ಸಾಂಪ್ರದಾಯದ ಪ್ರಕಾರ ನಾಮಕರಣ ನೆರವೇರಿಸಲಾಗಿದೆ. ಅಂದ್ಹಾಗೆ ಆಯ್ರಾ ಅಂದ್ರೆ ಲಕ್ಷ್ಮಿ ಎನ್ನುವ ಅರ್ಥ ಬರುವ ಹಿನ್ನಲೆಯಲ್ಲಿ ಮಗಳಿಗೆ ಆಯ್ರಾ ಎಂದು ನಾಮಕಾರಣ ಮಾಡಿದ್ದಾರೆ.
ಇತ್ತೀಚಿಗಷ್ಟೆ ರಾಧಿಕಾ ಮತ್ತು ಯಶ್ ಇಬ್ಬರು, ಮಗಳಿಗೆ ಹೆಸರಿಡುವ ಸಮಯ ಬಂದಿದೆ ಮುದ್ದಾದ ಹೆಸರನ್ನು ಪೋಷಕರು ಸೂಚಿದ್ದಾರೆ. ಜೂನ್ 23ರಂದು ನಾಮಕರಣ ಮಾಡುವುದಾಗಿ ಬಹಿರಂಗ ಪಡಿಸಿದ್ರು. ಕೊನೆಗೂ ಯಶ್-ರಾಧಿಕಾ ಮಗಳಿಗೆ ಹೆಸರಿಡುವ ಮೂಲಕ ಅಭಿಮಾನಿಗಳಿದ್ದ ಕುತೂಹಕ್ಕೆ ತೆರೆ ಎಳೆದಿದ್ದಾರೆ.