'ಡಿಯರ್ ಕಾಮ್ರೇಡ್'ನ ರಶ್ಮಿಕಾ ಪಾತ್ರಕ್ಕೆ ಸಾಯಿ ಪಲ್ಲವಿಗೂ ಆಫರ್ ಬಂದಿತ್ತು
Recommended Video
'ಡಿಯರ್ ಕಾಮ್ರೇಡ್' ಸಿನಿಮಾ ಇದೇ ತಿಂಗಳ 26 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಟ್ರೇಲರ್ ರಿಲೀಸ್ ಆಗಿ ದೊಡ್ಡ ಪ್ರತಿಕ್ರಿಯೆ ಪಡೆದಿದ್ದು, ನಾಯಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪಾತ್ರಗಳಿಗೆ ಮೆಚ್ಚುಗೆ ಸಿಕ್ಕಿದೆ.
ವಿಷಯ ಏನೆಂದರೆ, ಈ ಸಿನಿಮಾದ ನಾಯಕಿ ಪಾತ್ರದಲ್ಲಿ ಮೊದಲು ಸಾಯಿ ಪಲ್ಲವಿ ನಟಿಸಬೇಕಾಗಿತ್ತು. ಸಿನಿಮಾದ ಪಾತ್ರಕ್ಕೆ ಸಾಯಿ ಪಲ್ಲವಿ ಸೂಟ್ ಆಗುತ್ತಿದ್ದರು. ನಾಯಕಿ ಕ್ರಿಕೆಟ್ ಆಟಗಾರ್ತಿಯಾಗಿದ್ದು, ಸಾಯಿ ಪಲ್ಲವಿ ಆ ಪಾತ್ರಕ್ಕೆ ಫಿಟ್ ಆಗಿದ್ದರು.
ನಿರ್ದೇಶಕರ ಮನಸ್ಸಿನಲ್ಲಿ ಸಾಯಿ ಪಲ್ಲವಿ ಅಥವಾ ರಶ್ಮಿಕಾ ಮಂದಣ್ಣ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಆಸೆ ಇತ್ತು. ಇಬ್ಬರಿಗೂ ಕಥೆ ಹೇಳಿದರು. ಆದರೆ, ಕೊನೆಯ ಸಂದರ್ಭದಲ್ಲಿ ಸಿನಿಮಾಗೆ ರಶ್ಮಿಕಾ ಮಂದಣ್ಣ ಫೈನಲ್ ಆಗಿದ್ದಾರೆ.

ಸಾಯಿ ಪಲ್ಲವಿ ಬದಲಿಗೆ, ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಆಯ್ಕೆ ಆದ ಬಗ್ಗೆ ಕೆಲ ಗಾಸಿಪ್ ಗಳು ಇತ್ತು. ವಿಜಯ ದೇವರಕೊಂಡ ಅವರೇ ರಶ್ಮಿಕಾ ರಿಗೆ ಈ ಅವಕಾಶ ಕೊಡಿಸಿದ್ದಾರೆ ಎನ್ನುವ ಮಾತಿತ್ತು.

ಆದರೆ, ಈ ಬಗ್ಗೆ ವಿಜಯ ದೇವರಕೊಂಡ ಮಾತನಾಡಿದ್ದು, ''ಇದೆಲ್ಲ ಸುಳ್ಳು... ಫ್ರೆಂಡ್ ಶಿಪ್ ಬೇರೆ... ಸಿನಿಮಾನೇ ಬೇರೆ.. ರಶ್ಮಿಕಾ ನನಗೆ ಸ್ನೇಹಿತೆ ಎಂದು ಈ ಸಿನಿಮಾಗೆ ಆಯ್ಕೆ ಆಗಿಲ್ಲ, ಪಾತ್ರಕ್ಕೆ ಹೋಲಿಕೆ ಆಗುತ್ತಾರೆ ಎಂಬ ಕಾರಣಕ್ಕೆ ಆಯ್ಕೆ ಆಗಿದ್ದಾರೆ'' ಎಂದು ಹೇಳಿದ್ದಾರೆ.


Click it and Unblock the Notifications











