ದರ್ಶನ್ 'ಡೆವಿಲ್' ಚಿತ್ರಕ್ಕೆ 100 ದಿನ ಪೂರೈಸಿದ ಸಂಭ್ರಮ; ಇವತ್ತಿಗೂ ಎಲ್ಲರದ್ದು ಒಂದೇ ಪ್ರಶ್ನೆ

ಪ್ರಕಾಶ್ ವೀರ್ ನಿರ್ದೇಶನದಲ್ಲಿ ದರ್ಶನ್ ನಟಿಸಿದ್ದ 'ಡೆವಿಲ್' ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಸಿನಿಮಾ 100 ದಿನ ಪೂರೈಸಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಸ್ವತಃ ನಿರ್ದೇಶಕ ಪ್ರಕಾಶ್ ವೀರ್ ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಒಂದು ಶೆಡ್ಯೂಲ್ ಚಿತ್ರೀಕರಣದ ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ವಿಚಾರಣಧೀನ ಕೈದಿಯಾಗಿ ಜೈಲು ಸೇರಿದ್ದರು. 'ಡೆವಿಲ್' ಸಿನಿಮಾ ಅರ್ಧಕ್ಕೆ ನಿಂತಿತ್ತು. ಆದರೆ ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಬೆನ್ನು ನೋವಿನ ಕಾರಣ ಕೆಲ ದಿನ ವಿಶ್ರಾಂತಿ ಪಡೆದು ಚಿತ್ರತಂಡಕ್ಕೆ ಸಮಸ್ಯೆ ಆಗಬಾರದು ಎಂದು 'ಡೆವಿಲ್' ಸಿನಿಮಾ ಚಿತ್ರೀಕರಣ ಮುಗಿಸಿದ್ದರು. ಡಿಸೆಂಬರ್ 11ಕ್ಕೆ ಸಿನಿಮಾ ತೆರೆಗೆ ಬಂದಿತ್ತು.

The Devil 100 Days Fans Question OTT Delay Amid Darshan Controversy

ಸಿನಿಮಾ ಚಿತ್ರೀಕರಣದ ಮುಗಿದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಭರದಿಂದ ಆಗುತ್ತಿತ್ತು. ಇಂತಹ ಹೊತ್ತಲ್ಲೇ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಯಿತು. ದರ್ಶನ್ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿತ್ತು.

'ಡೆವಿಲ್' ಸಿನಿಮಾ 50 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ಆಗಿತ್ತು. ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗಲಿಲ್ಲ. ದರ್ಶನ್ ಬದಲು ಅಭಿಮಾನಿಗಳ ಜೊತೆ ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ಚಿತ್ರತಂಡದ ಬೆಂಬಲಕ್ಕೆ ನಿಂತರು. ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಉದಯ್‌ಪುರ, ಬೆಂಗಳೂರು, ಮೈಸೂರು ಹಾಗೂ ಥೈಲ್ಯಾಂಡ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು. ಬಹಳ ಹಿಂದೆಯೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮುಗಿದಿತ್ತು. ಸಿನಿಮಾ ನೂರು ದಿನ ಕಂಪ್ಲೀಟ್ ಮಾಡಿರುವುದಾಗಿ ಶ್ರೀ ಜೈಮಾತಾ ಕಂಬೈನ್ಸ್ ಸಂಸ್ಥೆ ಪೋಸ್ಟ್ ಮಾಡಿದೆ.

'ಡೆವಿಲ್' ಸಿನಿಮಾ 100 ದಿನ ಪೂರೈಸಿದರೂ ಓಟಿಟಿಗೆ ಯಾಕೆ ಬಂದಿಲ್ಲ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಎಲ್ಲಿ ಯಾವಾಗ ಮಾಹಿತಿ ಕೊಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳೇ ತೆರೆಕಂಡ 30 ದಿನಕ್ಕೆ ಓಟಿಟಿಗೆ ಬರ್ತಿವೆ. ಆದರೆ 100 ದಿನ ಪೂರೈಸಿದರೂ 'ಡೆವಿಲ್' ಚಿತ್ರ ಡಿಜಿಟಲ್ ಸ್ಟ್ರೀಮಿಂಗ್ ಯಾಕೆ ಶುರುವಾಗಿಲ್ಲ ಎನ್ನುವ ಚರ್ಚೆ ಜೋರಾಗಿದೆ.

ಕೃಷ್ಣ ಹಾಗೂ ಧನುಷ್ ಎಂಬ ಎರಡು ಪಾತ್ರಗಳಲ್ಲಿ ನಟಿಸಿರುವ ದರ್ಶನ್ ಆಗಾಗ್ಗೆ ಡೆವಿಲ್ ಆಗಿ ತೆರೆಮೇಲೆ ಅಬ್ಬರಿಸಿದ್ದಾರೆ. ಈ ಪೊಲಿಟಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ. ನಾಯಕಿಯಾಗಿ ರಚನಾ ರೈ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿರುವ ಅಭಿಮಾನಿಗಳು ಕೂಡ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಕಾಯುತ್ತಿದ್ದಾರೆ. ಗಿಲ್ಲಿ ನಟ ಕೂಡ ಸಣ್ಣದೊಂದು ಪಾತ್ರದಲ್ಲಿ ತೆರೆಮೇಲೆ ಮಿಂಚಿದ್ದಾರೆ.

'ಡೆವಿಲ್' ಸಿನಿಮಾ ಓಟಿಟಿಗೆ ಬರುತ್ತಾ ಅಥವಾ ನೇರವಾಗಿ ಟಿವಿಯಲ್ಲೇ ಪ್ರಸಾರವಾಗುತ್ತಾ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಈ ಸಿನಿಮಾ ಬಳಿಕ ಮತ್ತೆರಡು ಸಿನಿಮಾಗಳಲ್ಲಿ ದರ್ಶನ್ ನಟಿಸಬೇಕಿತ್ತು. ಆದರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಎಲ್ಲವೂ ಮುಂದಕ್ಕೆ ಹೋಗಿದೆ. ದರ್ಶನ್ ಯಾವಾಗ ಜೈಲಿನಿಂದ ಹೊರಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

Read more about: darshan devil ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X