24 ಗಂಟೆಗಳಲ್ಲಿ 'ಡೆವಿಲ್' ಸೆಕೆಂಡ್ ಲುಕ್ ಟೀಸರ್ ಗಳಿಸಿದ ವೀವ್ಸ್, ಲೈಕ್ಸ್?

ನಟ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡೆವಿಲ್' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಬಾರಿ ಅಭಿಮಾನಿಗಳ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಆದರೆ ಭರ್ಜರಿ ಟೀಸರ್ ಉಡುಗೊರೆಯಾಗಿ ಕೊಟ್ಟಿದ್ದಾರೆ. ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್ ಮಿಕ್ಸ್ ಮಾಡಿ ಟೀಸರ್ ಕಟ್ ಮಾಡಲಾಗಿದೆ.

ಪಬ್‌ನಲ್ಲಿ ನಡೆಯುವ ಆಕ್ಷನ್ ಸೀನ್ ಟೀಸರ್‌ನಲ್ಲಿದೆ. ವರ್ಷ ಹಿಂದೆ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರೀಕರಣದ ನಡುವೆ ದರ್ಶನ್ ಎಡಗೈಗೆ ಪೆಟ್ಟಾಗಿತ್ತು. ಬಳಿಕ ಸರ್ಜರಿ ಮಾಡಿಸಿಕೊಂಡು ಚೇತರಿಸಿಕೊಂಡಿದ್ದರು. ಕಳೆದ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಒಂದು ಟೀಸರ್ ಬಂದಿತ್ತು. ಭರ್ಜರಿಯಾಗಿ ಪ್ರೋಮೊ ಶೂಟ್ ಮಾಡಲಾಗಿತ್ತು.

The Devil teaser 24 hours stat for the Darshan starrer out now

"ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು" ಎನ್ನುವ ದರ್ಶನ್ ಖಡಕ್ ವಾಯ್ಸ್‌ನಲ್ಲಿ ಟೀಸರ್ ಗಮನ ಸೆಳೆದಿತ್ತು. ಅದಕ್ಕಿಂತ 'ಡೆವಿಲ್' ಸೆಕೆಂಡ್ ಲುಕ್ ಟೀಸರ್ ಅಭಿಮಾನಿಗಳ ಮನಗೆದ್ದಿದೆ. ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. 'ಚಾಲೆಂಜ್.. ಹ್ಞಾ' ಎನ್ನುವ ಸಣ್ಣ ಡೈಲಾಗ್ ಕೂಡ ಇದೆ.

ಗನ್ ಹಿಡ್ದು ಗಾಗಲ್ ತೊಟ್ಟು ದರ್ಶನ್ ಅಬ್ಬರಿಸಿದ್ದಾರೆ. ಅವರ ಸ್ವ್ಯಾಗ್ ಅಭಿಮಾನಿಗಳಿಗೆ ಇಷ್ಟವಾಗ್ತಿದೆ. ಪಬ್ ಸೆಟ್ ಸಿಕ್ಕಾಪಟ್ಟೆ ಅದ್ಧೂರಿಯಾಗಿದೆ. ಪಬ್ ತೋರಿಸುವ ಪರಿ 'ಟಾಕ್ಸಿಕ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನು ನೆನಪಿಸುವಂತಿದೆ. ಒಟ್ಟಾರೆ ಟೀಸರ್ ಅಭಿಮಾನಿಗಳ ಮನಗೆದ್ದಿದೆ. ಲೈಕ್ಸ್, ಶೇರ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಾರೆಗಮ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ರಿಲೀಸ್ ಆಗಿದ್ದು 24 ಗಂಟೆಗಳಿಂದ ಟ್ರೆಂಡಿಂಗ್‌ನಲ್ಲಿದೆ.

The Devil teaser 24 hours stat for the Darshan starrer out now

ಮೊದಲ 24 ಗಂಟೆಗಳಲ್ಲಿ 'ಡೆವಿಲ್' ಟೀಸರ್ 28 ಲಕ್ಷ ವೀವ್ಸ್ ಸಾಧಿಸಿದೆ. ಇನ್ನು 2 ಲಕ್ಷದ 20 ಸಾವಿರ ಲೈಕ್ಸ್ ಪಡೆದುಕೊಂಡಿದೆ. 18 ಸಾವಿರ ಕಾಮೆಂಟ್ಸ್ ಸಿಕ್ಕಿದೆ. ಒಟ್ಟಾರೆ ಟೀಸರ್ ಸೂಪರ್ ಹಿಟ್ ಆಗಿದೆ. 24 ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟೀಸರ್ ಎನ್ನುವ ದಾಖಲೆ ಮಾಡಿದೆ. ಈ ಹಿಂದಿನ ಹಲವು ಕನ್ನಡ ಸಿನಿಮಾಗಳ ಟೀಸರ್ ದಾಖಲೆಯನ್ನು ಮುರಿದಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ.

'ಡೆವಿಲ್' ಚಿತ್ರಕ್ಕೆ ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸ್ವತಃ ಮಿಲನಾ ಪ್ರಕಾಶ್ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಮಹೇಶ್ ರೆಡ್ಡಿ ಎಂಬುವವರು ಟೀಸರ್ ಎಡಿಟ್ ಮಾಡಿದ್ದಾರೆ. ಈ ಹಿಂದೆ ಮಿಲನಾ ಪ್ರಕಾಶ್ ನಿರ್ದೇಶನದ 'ತಾರಕ್' ಚಿತ್ರದಲ್ಲಿ ದರ್ಶನ್ ನಟಿಸಿದ್ದರು.

8 ವರ್ಷಗಳ ಬಳಿಕ ಪ್ರಕಾಶ್ ನಿರ್ದೇಶನಕ್ಕೆ ಮರಳಿದ್ದಾರೆ. 'ತಾರಕ್' ಅವರು ನಿರ್ದೇಶಿಸಿದ ಕೊನೆಯ ಸಿನಿಮಾ. ಇದೀಗ ಅದೇ ಕಾಂಬಿನೇಷನ್‌ನಲ್ಲಿ 'ಡೆವಿಲ್' ಸಿನಿಮಾ ಮೂಡಿ ಬರ್ತಿದೆ. ಇದಕ್ಕೂ ಮುನ್ನ 'ಡೆವಿಲ್'- ದಿ ಹೀರೊ ಎಂದು ಇದ್ದ ಟೈಟಲ್ ಅನ್ನು ದಿ 'ಡೆವಿಲ್' ಎಂದು ಬದಲಿಸಲಾಗಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

More from Filmibeat

English summary
Darshan's Devil teaser First 24 Hours Report and Records;
Read more about: darshan devil sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X