ವಿಷ್ಣು ಬಳಸಿದ ಮೊದಲ ಕಾರ್ ಬಗ್ಗೆ ಇರೋ ಕುತೂಹಲಕರ ಸಂಗತಿ
Recommended Video

ಬಲ ಕೈ ನಲ್ಲಿ ಕೊಟ್ಟಿದ್ದು ಎಡ ಕೈ ಗೂ ಗೊತ್ತಾಗಬಾರದು ಎನ್ನುವ ಗುಣವನ್ನು ಅನೇಕರು ರೂಡಿಸಿಕೊಂಡಿರುತ್ತಾರೆ. ಕನ್ನಡ ಸಿನಿಮಾರಂಗದಲ್ಲಿ ಇಂಥದ್ದೇ ಗುಣ ಇದ್ದ ಕಲಾವಿದ ಡಾ ವಿಷ್ಣುವರ್ಧನ್. ವಿಷ್ಣುವರ್ಧನ್ ಬಗ್ಗೆ ಈಗಿನ ಯುವ ಪೀಳಿಗೆಗೆ ಅದೆಷ್ಟೋ ವಿಚಾರಗಳು ಗೊತ್ತೇ ಇಲ್ಲ. ಅಂಥದ್ದೆ ಒಂದು ಸುದ್ದಿ ವಿಷ್ಣು ಖರೀದಿಸಿದ ಮೊದಲ ಕಾರ್ ನದ್ದು.
ವಿಷ್ಣುವರ್ಧನ್ ಬಳಸಿದ ಮೊದಲ ಕಾರ್ ಯಾವುದು? ಆ ಕಾರ್ ಈಗ ಎಲ್ಲಿದೆ? ಎನ್ನುವ ಬಗ್ಗೆ ಮಾಹಿತಿ ಹುಡುಕುತ್ತಾ ಹೋದರೆ ಸಾಹಸಸಿಂಹನ ಕಾರ್ ಧರ್ಮಸ್ಥಳದಲ್ಲಿದೆ. ಇಂದಿಗೂ ವಿಷ್ಣು ದಾದ ಬಳಸಿದ ಕಾರ್ ಗೆ ವಿಶೇಷವಾದ ಸ್ಥಾನ ಮಾನ ಸಿಗುತ್ತಿದೆ.
ಹಾಗಾದರೆ ಆ ಕಾರ್ ಯಾವುದು? ಸದ್ಯ ಯಾರ ಬಳಿಯಲ್ಲಿದೆ ಕಾರ್? ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ವಿಷ್ಣು ಕಾರ್ ತಲುಪಲು ಕಾರಣವೇನು? ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

ಧರ್ಮಸ್ಥದ ಮ್ಯೂಸಿಯಂ ವಿಷ್ಣು ಕಾರ್
ಡಾ ವಿಷ್ಣುವರ್ಧನ್ ಬಳಸಿದ ಮೊದಲ ಕಾರ್ ಇಂದಿಗೂ ನಮ್ಮೆಲ್ಲರ ಮಧ್ಯೆ ಇದೆ. ಹೌದು ಧರ್ಮಸ್ಥಳದಲ್ಲಿರುವ ಮ್ಯೂಸಿಯಂ ನಲ್ಲಿ ವಿಷ್ಣು ಕಾರ್ ಪ್ರದರ್ಶನಕ್ಕೆ ಇಡಲಾಗಿದೆ.

ಖುಷಿಯಿಂದ ಕಾರ್ ಕೊಟ್ಟ ಹೃದಯವಂತ
ಡಾ ವೀರೇಂದ್ರ ಹೆಗಡೆ ಅವರು ಧರ್ಮಸ್ಥಳದಲ್ಲಿ ಮ್ಯೂಸಿಯಂ ಆರಂಭ ಮಾಡಿದಾಗ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ವಸ್ತು ಸಂಗ್ರಹಾಲಯಕ್ಕೆ ನಿಮ್ಮ ಕಡೆಯಿಂದ ಏನನ್ನಾದರೂ ನೀಡಿ ಎಂದಿದ್ದರಂತೆ. ಆಗ ವಿಷ್ಣು ಪ್ರೀತಿಯಿಂದ ನಾ ಬಳಸಿದ ಮೊದಲ ಕಾರ್ ಅನ್ನೇ ತೆಗೆದುಕೊಂಡು ಹೋಗಿ ಎಂದಿದ್ದಾರೆ.

ಸಾರ್ವಜನಿಕ ವೀಕ್ಷಣೆಗೆ
ವಿಷ್ಣುವರ್ಧನ್ ಬಳಸಿದ್ದ ಡಾಟ್ಸ್ ನ್ ಕಾರ್ ಅನ್ನು ಇಂದಿಗೂ ಕೂಡ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಕೆ ಎ 04 ಎಂ 707 ನಂಬರ್ ನ ಡಾಟ್ಸ್ ನ್ ಅನ್ನು ಧರ್ಮಸ್ಥಳ ಮ್ಯೂಸಿಯಂ ನ ಮುಖ್ಯ ಆಕರ್ಷಣೆ ಆಗಿದೆ.

ಅಭಿಮಾನಿಗಳ ಹೆಮ್ಮೆ
ಇತ್ತೀಚಿಗಷ್ಟೆ ವಿ ಎಸ್ ಎಸ್ ನ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಸ್ನೇಹಿತರ ಮದುವೆ ನಿಮ್ಮಿತ್ತ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರಂತೆ. ಆ ಕಾರ್ ಒಳಗೆ ಇಟ್ಟಿರುವ ವಿಷ್ಣು ಅವರ ಫೋಟೋ ಹಳೆಯದಾಗಿರುವುದನ್ನು ಕಂಡು ಅದನ್ನು ಇಂದು ವಿ ಎಸ್ ಎಸ್ ನ ಕಾರ್ಯಕರ್ತರನ್ನು ಧರ್ಮಸ್ಥಳಕ್ಕೆ ಕಳುಹಿಸಿ ಬದಲಾಯಿಸಿದ್ದಾರೆ.


Click it and Unblock the Notifications











