'ಮಹಾನಟಿ' ಸಿನಿಮಾ ಆಫರ್ ಮೊದಲು ಹೋಗಿದ್ದು ನಿತ್ಯಾ ಮೆನನ್ ಬಳಿಗೆ!
'ಮಹಾನಟಿ' ಸಿನಿಮಾದ ಬಗ್ಗೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಭಾಷೆಯ ಬೇದ ಮರೆತು ಆ ಸಿನಿಮಾವನ್ನು ಎಲ್ಲರೂ ಪ್ರೀತಿಸಿದ್ದಾರೆ. 'ಮಹಾನಟಿ' ಪಾತ್ರದಲ್ಲಿ ನಟಿಸಿರುವ ಕೀರ್ತಿ ಸುರೇಶ್ ಅಭಿನಯಕ್ಕೆ ದೊಡ್ಡ ಮಟ್ಟದ ಹೊಗಳಿಕೆ ಸಿಕ್ಕಿದೆ.
ವಿಶೇಷ ಅಂದರೆ, ಮೊದಲು ಈ ಸಿನಿಮಾ ಆಫರ್ ನಟಿ ನಿತ್ಯಾ ಮೆನನ್ ಅವರಿಗೆ ಹೋಗಿತ್ತಂತೆ. ನಿತ್ಯಾ 'ಮಹಾನಟಿ' ಸಾವಿತ್ರಿ ಪಾತ್ರದಲ್ಲಿ ನಟಿಸಬೇಕಿತ್ತಾಂತೆ. ಆದರೆ, ಕಾರಣಾಂತರಗಳಿಂದ ನಿತ್ಯಾ ಆ ಸಿನಿಮಾ ಮಾಡೋಕ್ಕೆ ಆಗಲಿಲ್ಲವಂತೆ. ಇನ್ನು ಈ ವಿಷಯ ಇತ್ತೀಚಿಗಿನ ಸಂದರ್ಶನದ ಮೂಲಕ ತಿಳಿದು ಬಂದಿದೆ.
ಅಂದಹಾಗೆ, ನಿತ್ಯಾ ಮೆನನ್ ಈ ಚಿತ್ರದಲ್ಲಿ ನಟಿಸದಿರಲು ಮುಖ್ಯ ಕಾರಣ ಏನು ಎಂಬುದು ತಿಳಿದಿಲ್ಲ. ಆದರೆ, ನಿತ್ಯಾ ಈ ಬಗ್ಗೆ ಮಾತನಾಡುವಾಗ ಡೇಟ್ಸ್ ಪ್ರಾಬ್ಲಂ ನಿಂದ ಸಿನಿಮಾ ಮಾಡುವುದಕ್ಕೆ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದು ಕಡೆ ಈ ಸಾವಿತ್ರಿ ಪಾತ್ರಕ್ಕೆ ತೂಕ ಇಳಿಸಬೇಕಾಗಿದ್ದು, ಅದರಿಂದ ನಿತ್ಯಾ ಈ ಸಿನಿಮಾವನ್ನು ಕೈ ಬಿಟ್ಟರು ಎನ್ನಲಾಗಿದೆ. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ತಿಳಿಯದಿದ್ದರೂ 'ಮಹಾನಟಿ' ಚಿತ್ರ ನಿತ್ಯಾಗೆ ಮಿಸ್ ಆಗಿರೋದಂತು ನಿಜ.

ಅಂದಹಾಗೆ, ಮೇ 9 ರಂದು ರಿಲೀಸ್ ಆಗಿದ್ದ 'ಮಹಾನಟಿ' ಸಿನಿಮಾ ಸದ್ಯ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಸಿನಿಮಾ ಕ್ವಾಲಿಟಿ, ಮೇಕಿಂಗ್, ನಟನೆ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಪರಿಶ್ರಮಕ್ಕೆ ತಕ್ಕ ಬೆಲೆ ನೀಡಿದ್ದಾರೆ.


Click it and Unblock the Notifications











