ಸುದೀಪ್ ಹುಟ್ಟುಹಬ್ಬ: 'ವಿಕ್ರಾಂತ್ ರೋಣ' ಡೆಡ್ ಮ್ಯಾನ್ಸ್ ಟೀಸರ್ ಬಿಡುಗಡೆ

By ಫಿಲ್ಮಿಬೀಟ್ ಡೆಸ್ಕ್

ಸೆಪ್ಟೆಂಬರ್ 2 ಕಿಚ್ಚ ಸುದೀಪ್ ಅವರ ಜನ್ಮದಿನ. ಕೋವಿಡ್ ಭೀತಿಯಿಂದ ಈ ವರ್ಷವೂ ಅಭಿನಯ ಚಕ್ರವರ್ತಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸುತ್ತಿಲ್ಲ. ಆದರೆ, ಆನ್‌ಲೈನ್ ಮೂಲಕ ಫ್ಯಾನ್ಸ್ ಜೊತೆ ಸಂವಾದ ಮಾಡ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡದೆ ಇದ್ದರೂ ಅವರ ಫ್ಯಾನ್ಸ್ ಕಿಚ್ಚನ ಉತ್ಸವವನ್ನು ಬಹಳ ಜೋರಾಗಿಯೇ ಆಚರಣೆ ಮಾಡುತ್ತಿದ್ದಾರೆ.

ಅಭಿನಯ ಚಕ್ರವರ್ತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಪ್ರೀತಿಯ ವಿಶ್ ತಿಳಿಸುತ್ತಿದ್ದಾರೆ. ಅಂದಹಾಗೆ ಇಂದು ಕಿಚ್ಚ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೂ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ಸಿಕ್ಕಿದೆ.

ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಡೆಡ್ ಮ್ಯಾನ್ಸ್ ಆಂಥಮ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಕಿಚ್ಚ ಒಂದು ಭಯಾನಕ ಮನೆಗೆ ಎಂಟ್ರಿ ಕೊಟ್ಟಿದ್ದು, ಮಾಸ್ ಲುಕ್ ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಬ್ಯಾಕ್‌ಗ್ರೌಂಡ್ ನಲ್ಲಿ ಬರುವ ಡೆಡ್ ಮ್ಯಾನ್ಸ್ ಆಂಥಮ್ ಧ್ವನಿ ಗಮನ ಸೆಳೆಯುತ್ತಿದೆ. ಈಗಾಗಲೇ ವಿಕ್ರಾಂತ್ ರೋಣ ಚಿತ್ರ ಪೋಸ್ಟರ್ ಮತ್ತು ಮೇಕಿಂಗ್ ಟೀಸರ್ ನಿಂದ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಬಿಡುಗಡೆಯಾಗಿರುವ ಡೆಡ್ ಮ್ಯಾನ್ಸ್ ಆಂಥಮ್ ಟೀಸರ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

The first glimpse of Kichcha Sudeep’s Vikrant Rona’s Dead Man’s Anthem released

ಹುಟ್ಟುಹಬ್ಬದ ದಿನ ವಿಕ್ರಾಂತ್ ರೋಣ ಡೆಡ್ ಮ್ಯಾನ್ಸ್ ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಂದರಂತೆ ಇಂದು ಹುಟ್ಟುಹ್ಬಬದ ದಿನ ವಿಕ್ರಾಂತ್ ರೋಣ ಡೆಡ್ ಮ್ಯಾನ್ಸ್ ಟೀಸರ್ ಬಿಡುಗಡೆಯಾಗಿದೆ. ವಿಕ್ರಾಂತ್ ರೋಣ ಈಗಾಗಲೇ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣ ಸದ್ಯ ಡೆಡ್ ಮ್ಯಾನ್ಸ್ ಟೀಸರ್ ನಿಂದ ಮತ್ತಷ್ಟು ಕ್ರೇಜ್ ಹುಟ್ಟುಹಾಕಿದೆ.

ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನೀತಾ ಅಶೋಕ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನು ಸಿನಿಮಾ ಹೈಲೆಟ್ಸ್ ಅಂದರೆ ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೊದಲ ಬಾರಿಗೆ ಜಾಕ್ವೆಲಿನ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದು ಈ ಹಾಡಿನ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ. ಜಾಕ್ವೆಲಿನ್ ಕೂಡ ಸಿನಿಮಾದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಆಡಿಯೋ ಹಕ್ಕು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಲಹರಿ ಮ್ಯೂಸಿಕ್ ಸಂಸ್ಥೆ ಆಡಿಯೋ ಹಕ್ಕು ಖರೀದಿ ಮಾಡಿದೆ. ಹಿಂದಿಯಲ್ಲಿ ಟಿ-ಸಿರೀಸ್ ಸಂಸ್ಥೆ ವಿಕ್ರಾಂತ್ ರೋಣ ಮ್ಯೂಸಿಕ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸದ್ಯ ಭಾರಿ ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣ ಯಾವಾಗ ತೆರೆಗೆ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Kichcha Sudeep’s much-anticipated Vikrant Rona released the first glimpse of the film’s Dead Man’s Anthem on the occasion of the Sudeep birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X