ಕಿಂಗ್ ಫಿಶರ್ ಕ್ಯಾಲೆಂಡರ್ - 2015 ಫಸ್ಟ್ ಲುಕ್ ಅನಾವರಣ

By Rajendra

ಹೊಸ ವರ್ಷ ಆರಂಭವಾಗುತ್ತಿದೆ. 2014ಕ್ಕೆ ಗುಡ್ ಬೈ ಹೇಳಿ 2015ನ್ನು ಬರಮಾಡಿಕೊಳ್ಳುವ ಸಮಯ. ಅದೇ ರೀತಿ ಕ್ಯಾಲೆಂಡರ್ ಗಳನ್ನು ಬದಲಾಯಿಸಬೇಕಾದ ಸಮಯ ಬಂದಿದೆ. ಮಾರುಕಟ್ಟೆಗೆ ನಾನಾ ರೀತಿಯ, ನಮೂನೆಯ ಕ್ಯಾಲೆಂಡರ್ ಗಳು ಲಗ್ಗೆ ಇಡುತ್ತವೆ. ಆದರೆ ತನ್ನದೇ ಆದ ವಿಶಿಷ್ಟತೆಯಿಂದ ಗಮನಸೆಳೆಯುವ ಕ್ಯಾಲೆಂಡರ್ ಕಿಂಗ್ ಫಿಶರ್.

ಕಿಂಗ್ ಫಿಶರ್ ಕ್ಯಾಲೆಂಡರ್ ಎಂದರೆ ಸಾಕು ಕಣ್ಣುಗಳಲ್ಲಿ ಏನೋ ಹೊಳಪು, ಮನಸ್ಸಿನಲ್ಲಿ ಇನ್ನೇನೋ ಪುಳಕ. ಇದಕ್ಕೆ ಕಾರಣ ಬಿಕಿನಿ ಬೆಡಗಿಯರ ಕಲರ್ ಫುಲ್ ಚಿತ್ರಗಳು. ತಮ್ಮ ಅಂದಚೆಂದ ವೈಯಾರಗಳನ್ನು ಸಮೃದ್ಧವಾಗಿ ಧಾರೆಯೆರೆದ ಬಿಕಿನಿ ಚೆಲುವೆಯರಿಂದ ಸರ್ವಾಂಗ ಸುಂದರವಾಗಿ ರೂಪಗೊಂಡ ಕ್ಯಾಲೆಂಡರ್. [ಕಿಂಗ್ ಫಿಶರ್ ಕ್ಯಾಲೆಂಡರ್ 2014: ಮೀಂಚುಳ್ಳಿ ದೃಶ್ಯಗಳು]

ಪ್ರತಿ ವರ್ಷ ಬಿಕಿನಿ ಬಾಲೆಯರೊಂದಿಗೆ ಈ ಕ್ಯಾಲೆಂಡರ್ ಹೊರತರುತ್ತಿರುವುದು ವಿಜಯ್ ಮಲ್ಯ ಅವರ ಸ್ಪೆಷಾಲಿಟಿ. ಕಾಲಬದಲಾಗುತ್ತಿದ್ದರೂ ಅವರ ಅಭಿರುಚಿ ಮಾತ್ರ ಬದಲಾಗಿಲ್ಲ ಎಂಬುದಕ್ಕೆ 2015ರಲ್ಲೂ ಅದೇ ರೀತಿಯ ಚುಮುಚುಮು ಚಿತ್ರಗಳನ್ನು ಕಾಣಬಹುದು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ದಶಕಗಳ ಕಾಲದಿಂದಲೂ ಈ ಕ್ಯಾಲೆಂಡರ್ ನಿರ್ವಿಘ್ನವಾಗಿ ಮೂಡಿಬರುತ್ತಿದೆ. ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಈ ಕ್ಯಾಲೆಂಡರನ್ನು ರೂಪಿಸುವುದು ಮಲ್ಯ ಅವರ ಹವ್ಯಾಸಗಳಲ್ಲಿ ಒಂದು. ಅದೇ ರೀತಿ ಬಿಕಿನಿ ಚೆಲುವೆಯರ ಭುಜಕ್ಕೆ ಭುಜ ತಾಕಿಸುತ್ತಾ ಗಂಭೀರವಾಗಿ ಪೋಸು ಕೊಡುವುದು ಮಲ್ಯ ಸಾಹೇಬರಿಗೆ ಒಂದು ರೀತಿ ಖುಷಿ ವಿಚಾರ.

ಈ ಸಲದ ಬಿಕಿನಿ ಬೆಡಗಿಯರನ್ನು ಮಲ್ಯ ಸಾಹೇಬರೇ ಆಯ್ಕೆ ಮಾಡಿರುವುದು ವಿಶೇಷ. ಇದಿಷ್ಟೇ ಅಲ್ಲದೆ ಈ ಕ್ಯಾಲೆಂಡರ್ ನಲ್ಲಿರುವ ಬೆಡಗಿಯರನ್ನು ಓಟಿಂಗ್ ಮೂಲಕ ಆಯ್ಕೆ ಮಾಡುವ ಅವಕಾಶವನ್ನೂ ಕೊಟ್ಟಿದ್ದಾರೆ. ನಿಮಗೂ ಮತ ಚಲಾಯಿಸಬೇಕು ಎಂಬ ಆಸೆ ಇದ್ದರೆ ಈ ಕೊಂಡಿಯನ್ನು ಕ್ಲಿಕ್ಕಿಸಿ.

ಕಿಂಗ್ ಫಿಶರ್ ಕ್ಯಾಲೆಂಡರ್ ಫಸ್ಟ್ ಲುಕ್

ಕಿಂಗ್ ಫಿಶರ್ ಕ್ಯಾಲೆಂಡರ್ ಫಸ್ಟ್ ಲುಕ್

2015ರ ಕಿಂಗ್ ಫಿಶರ್ ಕ್ಯಾಲೆಂಡರ್ ಫಸ್ಟ್ ಲುಕ್ ಅನಾವರಣಗೊಂಡಿದೆ. ಸೆಲೆಬ್ರಿಟಿ ಫೋಟೋಗ್ರಾಫರ್ ಅತುಲ್ ತನ್ನ ಫೋಟೋಶೂಟ್ ನ ನಾಲ್ಕು ತಾಜಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇವರಲ್ಲಿ ಒಬ್ಬರನ್ನು ಕಿಂಗ್ ಫಿಶರ್ ಕ್ಯಾಲೆಂಡರ್ ಮುಖಪುಟಕ್ಕೆ ಆಯ್ಕೆ ಮಾಡಲಾಗುತ್ತದೆ. ನೀವೂ ಓಟು ಮಾಡಿ ಮುಖಪುಟ ಬೆಡಗಿಯನ್ನು ಆಯ್ಕೆ ಮಾಡಬಹುದು.

ಇನ್ನೂರು ಮಂದಿ ಬೆಡಗಿಯರ ನಡುವೆ ಸ್ಪರ್ಧೆ

ಇನ್ನೂರು ಮಂದಿ ಬೆಡಗಿಯರ ನಡುವೆ ಸ್ಪರ್ಧೆ

ವಿಜಯ್ ಮಲ್ಯ ಅವರ ಮಾಲೀಕತ್ವದ ಯುನೈಟೆಡ್ ಬ್ರಿವರೀಸ್ ಗ್ರೂಪ್ 2003ರಿಂದ ಈ ಕ್ಯಾಲೆಂಡರನ್ನು ಹೊರತರುತ್ತಿದೆ. ಸರಿಸುಮಾರು ಇನ್ನೂರು ಮಂದಿ ಬೆಡಗಿಯರಿಗೆ ವಿವಿಧ ಸ್ಪರ್ಧೆ, ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಕಡೆಗೆ ಕೇವಲ 12 ಮಂದಿ ಮಾತ್ರ ಕಿಂಗ್ ಫಿಶರ್ ಕ್ಯಾಲೆಂಡರ್ ಅಲಂಕರಿಸುತ್ತಾರೆ.

ಬೆಡಗಿಯರಿಗೆ ಇದು ಪಾಸ್ ಪೋರ್ಟ್ ಇದ್ದಂತೆ

ಬೆಡಗಿಯರಿಗೆ ಇದು ಪಾಸ್ ಪೋರ್ಟ್ ಇದ್ದಂತೆ

ಇದಕ್ಕಾಗಿ ಕೋಟ್ಯಾಂತರ ರುಪಾಯಿ ನೀರಿನಂತೆ ಖರ್ಚು ಮಾಡುತ್ತಾರೆ ಮಲ್ಯ ಸಾಹೇಬರು. ಮಾಡೆಲಿಂಗ್, ಸಿನಿಮಾ ಕ್ಷೇತ್ರಕ್ಕೆ ಅಡಿಯಿಡುವವರಿಗೆ ಈ ಕ್ಯಾಲೆಂಡರ್ ಒಂದು ರೀತಿ ಪಾಸ್ ಪೋರ್ಟ್ ಇದ್ದಂತೆ.

ಕ್ಯಾಲೆಂಡರ್ ಬೆಡಗಿಯರಿಗೆ ಅವಕಾಶಗಳ ಆಗರ

ಕ್ಯಾಲೆಂಡರ್ ಬೆಡಗಿಯರಿಗೆ ಅವಕಾಶಗಳ ಆಗರ

ಈ ಕ್ಯಾಲೆಂಡರ್ ನಲ್ಲಿ ಅವರ ಚೆಂದದ ಫೋಟೋ ಕಾಣಿಸಿಕೊಂಡರೆ ಸಾಕು ಮಾಡೆಲಿಂಗ್, ಸಿನಿಮಾ ಕ್ಷೇತ್ರಗಳಿಗೆ ಶೀಘ್ರವಾಗಿ ಪ್ರವೇಶಿಸಬಹುದು. ಅವಕಾಶಗಳು ಅವರನ್ನೇ ಹುಡುಕಿಕೊಂಡು ಬಂದರೂ ಅಚ್ಚರಿಯಿಲ್ಲ. ಇದಿಷ್ಟೇ ಅಲ್ಲದೆ ನಿರ್ದೇಶಕ, ನಿರ್ಮಾಪಕರು ಈ ಕ್ಯಾಲೆಂಡರ್ ಗೆ ಬೆಡಗಿಯರ ಬಗ್ಗೆ ವಿಶೇಷ ಆಸ್ತೆ ವಹಿಸುತ್ತಾರೆ.

ಇವರೆಲ್ಲಾ ಸೌಂದರ್ಯ ಧಾರೆ ಎರೆದ ಬೆಡಗಿಯರು

ಇವರೆಲ್ಲಾ ಸೌಂದರ್ಯ ಧಾರೆ ಎರೆದ ಬೆಡಗಿಯರು

ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಯಾನಾಗುಪ್ತಾ, ಉಜ್ವಲ ರೌತ್, ನರ್ಗೀಸ್ ಫಕ್ರಿ, ಲೀಸಾಹೇಡನ್, ಏಂಜಲಾ ಜಾನ್ಸನ್ ನಂತಹ ಮಾಡೆಲ್ ಗಳು, ನಟಿಮಣಿಯರು ಈ ಕ್ಯಾಲೆಂಡರ್ ನಲ್ಲಿ ತಮ್ಮ ಸೌಂದರ್ಯವನ್ನು ಧಾರೆಯೆರೆದವರೆ.

More from Filmibeat

English summary
Probably one of the most glamorous things to look forward to this New Year is Kingfisher’s calendar. The first look of Kingfisher Calendar 2015 is out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X