'ದರ್ಶನ್ 'ಹುಟ್ಟಿದ ಹಬ್ಬಕ್ಕೆ 'ಡೆವಿಲ್ '- ದಿ ಹೀರೋ ಫಸ್ಟ್ ಲುಕ್ ; ಕ್ಲಾಸಾ..? ಮಾಸಾ..?

ದರ್ಶನ್ ಹಾಗೂ ಮಿಲನಾ ಪ್ರಕಾಶ್ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಾಗಲೇ ಕುತೂಹಲ ಗರಿಗೇದರಿತ್ತು. ತಾರಕ್ ನಂತರ ಇಬ್ಬರೂ ಒಂದಾಗ್ತಿರುವ ಕಾರಣಕ್ಕೆ ಕಥೆಯ ವಿಚಾರದಲ್ಲಿ ಹತ್ತು ಹಲವು ಪ್ರಶ್ನೆಗಳಿದ್ದವು.

ಇಬ್ಬರ ಈ ಮಹತ್ವಕಾಂಕ್ಷೆಯ ಚಿತ್ರಕ್ಕೆ ಡೆವಿಲ್ ದಿ ಹೀರೋ ಎಂದು ಹೆಸರಿಡಲಾಗಿದೆ ಎಂಬ ಸಂಗತಿ ಗೊತ್ತಾದಾಗ , ತಾರಕ್ ನಂತೆಯೇ ಇದು ಫ್ಯಾಮಿಲಿ ಡ್ರಾಮಾನಾ..? ಆಕ್ಷನ್ ಸಿನಿಮಾನಾ..? ಕಾಟೇರದಂತಹ ಮತ್ತೊಂದು ಪ್ರಯತ್ನನಾ..?

The First Look Of Devil To Be Unveiled On Feb 15

ಹೀಗೆ ಅನೇಕರ ಮನದಲ್ಲಿ ಮೊದಲೇ ಮನೆ ಮಾಡಿದ್ದ ಪ್ರಶ್ನೆಗಳು ಬಹು ಆಯ್ಕೆ ಮಾದರಿ ರೂಪ ಪಡೆದುಕೊಂಡಿದ್ದವು. ಇದೆಲ್ಲದಕ್ಕೂ ಈಗ ಉತ್ತರ ಸಿಗುವ ಕಾಲ ಬಂದಿದೆ. ನಿರೀಕ್ಷಿಸಿದಂತೆ ಡೆವಿಲ್ -ದಿ ಹೀರೋ ಚಿತ್ರದ ಫಸ್ಟ್ ಲುಕ್ ಟೀಸರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇದೇ ಫೆಬ್ರವರು 15ರ ರಾತ್ರಿ ಬಿಡುಗಡೆಯಾಗಲಿದೆ.

ಫೆಬ್ರವರಿ 15ರಂದು ಸರಿಯಾಗಿ ರಾತ್ರಿ 11-59ಕ್ಕೆ ಡೆವಿಲ್ - ದಿ ಹೀರೋ ಚಿತ್ರದ ಫಸ್ಟ್ ಲುಕ್ ಟೀಸರ್ ನ ಅಭಿಮಾನಿಗಳ ಮಡಿಲಿಗೆ ಪ್ರಕಾಶ್ ವೀರ್ ಹಾಕಲಿದ್ದಾರೆ. ಇನ್ನೂ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಇರುವ ಹಿನ್ನೆಲೆ ಅಭಿಮಾನಿಗಳು ರೋಮಾಂಚಕ ಅನುಭವಕ್ಕೆ ಸಿದ್ಧರಾಗಬಹುದು.

ಸಂತೋಷ್ ರೈ ಪಾತಾಜೆ ಕ್ಯಾಮರಾ ಕಣ್ಣಿನಲ್ಲಿ ಡೆವಿಲ್ ದಿ ಹೀರೋ ಅಬ್ಬರ ಸೆರೆಯಾಗಲಿದೆ. ಅಂದ್ಹಾಗೇ ಅಜನೀಶ್ ಲೋಕನಾಥ್ ಹಾಗೂ ಸಂತೋಷ್ ರೈ ಪಾತಾಜೆ ಇವರಿಬ್ಬರಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಇದು ಮೊದಲ ಸಿನಿಮಾ ಅನ್ನುವುದು ವಿಶೇಷ.

The First Look Of Devil To Be Unveiled On Feb 15

ನವೆಂಬರ್ 02ರಂದು ಸದ್ದಿಲ್ಲದೇ ಸೆಟ್ಟೇರಿದ್ದ ಸಿನಿಮಾ

2023ರ ನವೆಂಬರ್ ಎರಡರಂದು, ಡೆವಿಲ್ ದಿ ಹೀರೋ ಚಿತ್ರಕ್ಕೆ ಮಿಲನಾ ಪ್ರಕಾಶ್ ಚಾಲನೆಯನ್ನ ನೀಡಿದ್ದರು. ಬೆಂಗಳೂರಿನಲ್ಲಿನ ಡೊಡ್ಡ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿಸಿದ್ದರು. ದರ್ಶನ್ ಹಾಗೂ ಮಿಲನಾ ಪ್ರಕಾಶ್ ಅವರಿಗೆ ಶುಭ ಕೋರಲು ಚಿನ್ನೇಗೌಡ್ರು ಸೇರಿದಂತೆ ಹಲವರು ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು.

ನಾಯಕಿ ಯಾರು ಎಂಬ ಪ್ರಶ್ನೆಗೆ ಸಿಗುತ್ತಾ ಉತ್ತರ.?

ಫಸ್ಟ್ ಲುಕ್ ಮೂಲಕ ಕಿಕ್ ಕೊಡಲು ಸಿದ್ಧವಾದ ಡೆವಿಲ್- ದಿ ಹೀರೋ, ಇದೇ ಸಮಯದಲ್ಲಿ ನಾಯಕಿಯ ಪರಿಚಯವನ್ನೂ ಮಾಡಿಕೊಡ್ತಾರಾ ಅನ್ನುವ ಪ್ರಶ್ನೆ ಕೂಡ ಇದೆ. ಯಾಕೆಂದರೆ ಡೆವಿಲ್ ಚಿತ್ರದ ನಾಯಕಿಯ ಬಗ್ಗೆ ಈಗಾಗ್ಲೇ ಅನೇಕ ಚರ್ಚೆಗಳಾಗಿವೆ.

The First Look Of Devil To Be Unveiled On Feb 15

ಕರಾವಳಿಯ ಬೆಡಗಿ ರಚನಾ ರೈ ಹೆಸರು ಮುಂಚೂಣಿಯಲ್ಲಿದೆ. ಆದರೆ ಹರಿದಾಡ್ತಿರುವ ಸುದ್ದಿಯನ್ನ ನಂಬಬೇಡಿ ಎಂದು ಹಿಂದೆ ಮಿಲನಾ ಪ್ರಕಾಶ್ ಮನವಿ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ನಾಯಕಿ ಯಾರಿರಬಹುದು ಎಂಬ ಕ್ಯೂರಿಯಾಸಿಟಿ ದರ್ಶನ್ ಅವರ ಅಭಿಮಾನಿಗಳಲ್ಲಿ ಇದೆ.

ಒಟ್ಟಿನಲ್ಲಿ ಕರ್ನಾಟದಲ್ಲಿ ಅತೀ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅಭಿಮಾನಿಗಳ ಪಾಲಿಗೆ ಅವರ ಪ್ರತೀ ಸಿನಿಮಾಗಳೂ ಹಬ್ಬವೇ. ಆದರೆ ದರ್ಶನ್ ಹುಟ್ಟುಹಬ್ಬ ಅಂದರೆ ಸಂಭ್ರಮ ಮುಗಿಲು ಮುಟ್ಟಿರುತ್ತೆ.

ಇದಕ್ಕೆ ಎಲ್ಲರೂ ತಿಂಗಳಿಗೆ ಮುಂಚಿತವಾಗಿಯೇ ರೆಡಿಯಾಗುತ್ತಾ ಅದನ್ನೊಂದು ಉತ್ಸವದಂತೆಯೇ ನಡೆಸೋ ಪರಿಪಾಠ ನಡೆದುಕೊಂಡು ಬಂದಿದೆ. ಈ ವರ್ಷ ಕೂಡ ಈ ಪರಿಪಾಠ ಮುಂದುವರೆಯಲಿದೆ. ಡೆವಿಲ್ ದಿ ಹೀರೋ ಚಿತ್ರದ ಫಸ್ಟ್ ಲುಕ್ ಟೀಸರ್ ಇದಕ್ಕೆ ಮುನ್ನುಡಿಯನ್ನ ಬರೆಯಲಿದೆ.

More from Filmibeat

English summary
The First Look Of Challenging Star Darshan's Next Film Devil To Release On Feb 15 On The Occasion Of Actors Birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X