ಕೋಣಗಳನ್ನು ಹಿಡಿದು 'ಕರಾವಳಿ'ಗೆ ಪಯಣ ಬೆಳೆಸಿದ ಮಿತ್ರ; ಫಸ್ಟ್ ಲುಕ್‌ಗೆ ಭರ್ಜರಿ ರೆಸ್ಪಾನ್ಸ್

By ಅನಿತಾ ಬನಾರಿ

ಸಾಮಾನ್ಯವಾಗಿ ಚಿತ್ರಗಳನ್ನು ಬಿಡುಗಡೆ ಮಾಡುವ ಮೊದಲು ಫಸ್ಟ್ ಲುಕ್ ರಿಲೀಸ್ ಮಾಡುವುದು ಅಭ್ಯಾಸ. ಆದರೆ, ಮೊದಲೆಲ್ಲ ಇದು ಬರೀ ಸಿನಿಮಾದ ಹೀರೋ ಹಾಗೂ ಹೀರೋಯಿನ್‌ಗಳ ಫಸ್ಟ್ ಲುಕ್ ಆಗಿತ್ತು. ಇದೀಗ ಟ್ರೆಂಡ್ ಬದಲಾಗುತ್ತಿದ್ದು, ಚಿತ್ರದ ಪೋಷಕ ಪಾತ್ರಗಳು ಹಾಗೂ ಪ್ರಮುಖ ಪಾತ್ರಗಳ ಫಸ್ಟ್ ಲುಕ್ ಅನ್ನು ಕೂಡ ರಿಲೀಸ್ ಮಾಡುವ ಹೊಸ ಪರಿಪಾಠವೊಂದು ರೂಢಿ ಮಾಡಿಕೊಳ್ಳಲಾಗಿದೆ.

ಅಂದ ಹಾಗೆ ನಟ ಮಿತ್ರ ಅವರು ಕರಾವಳಿ ಸಿನಿಮಾದಲ್ಲಿ ಪೋಷಕ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಟ ಪ್ರಜ್ವಲ್ ದೇವರಾಜ್ ಅವರ ನಾಯಕತ್ವದಲ್ಲಿ ಮೂಡಿ ಬರುತ್ತಿರುವ 'ಕರಾವಳಿ' ಚಿತ್ರದಲ್ಲಿ ಮಿತ್ರ ಅವರದ್ದು ಬಹು ಮುಖ್ಯ ಪಾತ್ರ. ಆದರೆ, ಪೋಷಕ ಪಾತ್ರವಾಗಿದ್ದು, ಇದರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡ ನಾಯಕ ನಾಯಕಿಯರಿಗಷ್ಟೇ ಅಲ್ಲದೆ ಚಿತ್ರದ ಎಲ್ಲಾ ಕಲಾವಿದರಿಗೂ ಸಮಾನ ಮಾನ್ಯತೆಯನ್ನು ಕೊಡುವ ಹೊಸದೊಂದು ಪರಿಪಾಠ ಶುರು ಮಾಡಿ, ಬೇರೆ ಚಿತ್ರತಂಡಗಳಿಗೆ ಒಳ್ಳೆಯ ಉದಾಹರಣೆಯಾಗಿದೆ.

The first look of the actor Mithra s role in the movie Karavali is getting attention

ಎಲ್ಲರಿಗೂ ತಿಳಿದಿರುವಂತೆ ನಟ ಮಿತ್ರ ಅವರು ಹಾಸ್ಯ ನಟನಾಗಿದ್ದು, 'ಕರಾವಳಿ' ಸಿನಿಮಾದಲ್ಲಿ ವಿಭಿನ್ನ ಪಾತ್ರವೊಂದನ್ನು ವಹಿಸಿಕೊಂಡಿದ್ದಾರೆ. ಹೌದು, ಈ ಸಿನಿಮಾದಲ್ಲಿ ಕಂಬಳದ ಕೋಣಗಳ ಮಾಲೀಕನ ಪಾತ್ರವನ್ನು ಮಾಡುತ್ತಿರುವ ನಟ ಮಿತ್ರ ಅವರು ತಮ್ಮ ಹಳೆಯ ಪಾತ್ರಗಳಿಗಿಂತಲೂ ಬಹಳ ವಿಭಿನ್ನವಾಗಿ ಜನರ ಮುಂದೆ ಬರಲಿದ್ದಾರೆ.

ಈ ಬಗ್ಗೆ ನಟ ಮಿತ್ರ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ವೃತ್ತಿ ಜೀವನದಲ್ಲೇ ಬಹಳ ವಿಭಿನ್ನವಾದ ಪಾತ್ರವನ್ನು ನಿರ್ವಹಿಸುತ್ತಿದೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಮೊದಲ ಬಾರಿಗೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗೆ ಬಹಳ ಖುಷಿ ಹಾಗೂ ಹೆಮ್ಮೆ ಇದೆ. ಅಂದ ಹಾಗೆ ಇದು ನನ್ನ ಹಳೆಯ ಪಾತ್ರಗಳಂತೆ ಅಲ್ಲ. ಇದು ಒಂದು ಸೀರಿಯಸ್ ಪಾತ್ರವಾಗಿದೆ. ಈ ಪಾತ್ರಕ್ಕಾಗಿ ನಾನು ಬಹಳಷ್ಟು ತಯಾರಿಗಳನ್ನು ನಡೆಸಿದ್ದೇನೆ" ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಮಿತ್ರ.

The first look of the actor Mithra s role in the movie Karavali is getting attention

ಇದರ ಜೊತೆಗೆ "ಕರಾವಳಿ ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ಅವರಿಗೆ ನಾನು ಧನ್ಯವಾದಗಳನ್ನು ಹೇಳಬೇಕು. ನನ್ನ ಮೇಲೆ ನಂಬಿಕೆಯಿಟ್ಟು ಅವರು ಈ ಒಂದು ಪಾತ್ರದಲ್ಲಿ ನಟಿಸುವ ಅವಕಾಶವನ್ನು ನನಗೆ ನೀಡಿದ್ದಾರೆ. ಇನ್ನು ಪ್ರೇಕ್ಷಕರೂ ಕೂಡಾ ಅಷ್ಟೇ, ಇದೇ ಮೊದಲ ಬಾರಿಗೆ ನನ್ನನ್ನು ಇಂತಹ ಗಂಭೀರವಾದ ಪಾತ್ರದಲ್ಲಿ ತೆರೆಯ ಮೇಲೆ ನೋಡಲಿದ್ದಾರೆ. ಒಟ್ಟಿನಲ್ಲಿ ಸಿನಿಮಾ ನೋಡಿದ ಎಲ್ಲರೂ ನನ್ನ ಪಾತ್ರವನ್ನು ಮೆಚ್ಚುವುದರಲ್ಲಿ ಸಂಶಯವಿಲ್ಲ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಿತ್ರ ಹೇಳಿಕೊಂಡಿದ್ದಾರೆ.

More from Filmibeat

English summary
Mithra who caught attention with Silly Lalli. Mithra who charmed in a different look for the first time:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X